ರೈತರು ಸಾಲಭಾದೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಖೇದಕರ: ಸಚಿವ ಕುಲಕರ್ಣಿ

0
33
loading...


ಧಾರವಾಡ,19: ರೈತರು ಸಾಲಭಾದೆಗೆ ಸಿಲುಕಿ ಆತ್ಮಹತ್ಯೆಯಂಥ ಕೃತ್ಯಕ್ಕೆ ಇಳಿಯುತ್ತಿರುವುದು ನಿಜಕ್ಕೂ ಖೇದಕರ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಚಾಣಾಕ್ಷಣತನದಿಂದ ಎದುರಿಸಿದ್ದೇ ಆದರೆ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರಲು ಹಿನ್ನಡೆಯಾಗುತ್ತದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ವತಿಯಿಂದ ಏರ್ಪಡಿಸಿದ ಜಾನಪದ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ದಿನಗಳಲ್ಲಿ ಯುವಜನರಿಂದು ದುಶ್ಚಟಗಳಿಗೆ ದಾಸರಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಂಡು, ಬೇಕಾಬಿಟ್ಟಿ ಜೀವನ ಮಾಡುತ್ತಿದ್ದಾರೆ. ನಮ್ಮೆಲ್ಲರ ಬದುಕಿನ ಮೂಲ ಉದ್ಯೋಗ ಕೃಷಿಗೆ ಆಸಕ್ತಿ ತೋರಿಸದೆ ನೌಕರಿಯ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಧೀಢೀರನೆ ಶ್ರೀಮಂತರಾಗುವ ಕನಸು ಕೈ ಬಿಡಬೇಕು. ನಿರಂತರ ಕಠಿಣ ಶ್ರಮ ಪ್ರಾಮಾಣಿಕವಾಗಿದ್ದರೆ ಹಣ ತಾನಾಗಿಯೇ ಬೆನ್ನತ್ತಿ ಬರುತ್ತದೆ ಈ ಹಿನ್ನೆಲೆಯಲ್ಲಿ ಯುವಜನಾಂಗ ಜಾಗೃತ ವಹಿಸಬೇಕೆಂದರು.
ಜಾನಪದ ಮಂಟಪದ ಸಂಚಾಲಕ ಗುರು ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದ ಎಲ್ಲಾ ಪ್ರತಿಭೆಗಳಿಗೂ ಕೃಷಿಯತ್ತ ಆಸ್ಥೆವಹಿಸಿ ಬದುಕು ಹಸನಾಗಿ ಮಾಡಿಕೊಳ್ಳಬೇಕೆಂದರು. ಶ್ರೀ ಅಭಿನವ ಮಹಾಸ್ವಾಮಿಗಳು ಗವಿಮಠ, ಶ್ರೀ ಗುರು ಶಾಂತೇಶ ಶ್ರೀಗಳು, ಶಾಸಕ ಎನ್.ಎಚ್. ಕೋನರಡ್ಡಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಶ್ರೀಶೈಲ ಹುದ್ದಾರ, ರೇಖಾ ಗಾಣಿಗೇರ, ಶಂಭಯ್ಯ, ರೇಣುಕಮಠ, ಡಿ. ಎಸ್. ಪೂಜಾರ, ಮಧು ಚರಂತಿಮಠ, ವಿ.ಎಸ್. ನೀರಲಗಿ ಉಪಸ್ಥಿತರಿದ್ದರು. ಮಹಾಂತೇಶ ಹಡಪದ ನಿರೂಪಿಸಿದರು. ಸತೀಶ ಶಿವಪ್ಪಯ್ಯನವರ ವಂದಿಸಿದರು.

loading...

LEAVE A REPLY

Please enter your comment!
Please enter your name here