ರೊಚ್ಚಿಗೆದ್ದ ಜನರಿಂದ ಕಲ್ಲು ತೂರಾಟ

0
22
loading...

ಮೋಳೆ 20: ಅಥಣಿ ತಾಲೂಕಿನ ಐನಾಪುರದ ಶ್ರೀ ಸಿದ್ದೇಶ್ವರ ಜಾತ್ರೆಯ ಕೊನೆ ದಿನವಾದ ಮಂಗಳವಾರ ಏರ್ಪಡಿಸಲಾಗಿದ್ದ ಜೋಡೆತ್ತಿನ ಗಾಡಿ ಶರ್ಯತ್ತು ಸಂದರ್ಭದಲ್ಲಿ ಉಂಟಾದ ಗೊಂದಲದ ವಾತಾವರಣದಲ್ಲಿ ರೊಚ್ಚಿಗೆದ್ದ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವಾರು ಪೇದೆಗಳು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕಾಗವಾಡ ಪಿಎಸ್‍ಐ ಹಣಮಂತ ಧರ್ಮಟ್ಟಿಯವರ ತೆಲೆಗೆ ಗಂಭೀರ ಗಾಯವಾಗಿದ್ದರೆ, ಸಿಪಿಐ ರಾಜಶೇಖರ ಬಡೆದೇಸಾರವರ ಕೈಗೆ ಪೆಟ್ಟಾಗಿದೆ. ಅಲ್ಲದೇ, ಬಂದೋಬಸ್ತ್‍ಗೆ ನಿಯೋಜಿಸಲ್ಪಟ್ಟಿದ್ದ ಹಲವು ಜನ ಪೇದೆಗಳಿಗೂ ಗಾಯಗಳಾಗಿವೆ. ಆಕ್ರೋಶಗೊಂಡಿದ್ದ ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರು ಪಲಾಯನ ಮಾಡಬೇಕಾದ ಪ್ರಸಂಗ ಬಂದೊದಗಿತು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಬಂದೋಬಸ್ತ್ ನಿಯೋಜಿಸಲಾಗಿದೆ.

ಘಟನೆ ವಿವರ: ಅಥಣಿ ತಾಲೂಕಿನ ಐನಾಪೂರ ಗ್ರಾಮದ ಶ್ರೀ ಸಿದ್ಧೇಶ್ವರ ದೇವರ ಜಾತ್ರೆಯ ಕೊನೆ ದಿನವಾದ ಮಂಗಳವಾರ ಜೋಡೆತ್ತಿನ ಶರ್ಯತ್ತು ಏರ್ಪಡಿಸಲಾಗಿತ್ತು, ರಾಜ್ಯ ಹಾಗೂ ಹೊರ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಚಕ್ಕಡಿಗಳು ಭಾಗವಹಿಸಿದ್ದವು.
ಆದರೆ, ಪ್ರಾಣಿ ದಯಾ ಸಂಘದವರು ಈ ಜೋಡೆತ್ತಿನ ಶರ್ಯತ್ತನ್ನು ವಿರೋಧಿಸಿದ್ದರಿಂದ ಪೊಲೀಸರು ಅವಕಾಶ ನೀಡಲು ನಿರಾಕರಿಸಿದರು. ಮುಂಜಾನೆಯಿಂದಲೇ ಪೊಲೀಸರು ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ಮಧ್ಯೆ ವಾಗ್ವಾದ ನಡೆದೇ ಇತ್ತು. ಈ ಮಧ್ಯೆ ಪೊಲೀಸರು ಸ್ಪರ್ದೆಗೆ ಬಂದ ಎತ್ತುಗಳ ಮೇಲೆ ಲಾಟಿ ಬಿಸಿದ್ದರಲ್ಲದೆ, ಚಕ್ಕಡಿ ಗಾಡಿಯ ಮಾಲಿಕರನ್ನು ಥಳಿಸಿದ್ದರಿಂದ ಗಾಡಿಶರ್ಯತ್ತನ್ನು ವೀಕ್ಷೀಸಲು ಆಗಮಿಸದ ಜನರು ರೊಚ್ಚಿಗೆದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ.
ಸಾವಿರಾರು ಸಂಖ್ಯೆಯಲ್ಲಿದ್ದ ಜನರ ಮಧ್ಯೆ ಪೊಲೀಸರು ಪರದಾಡಬೇಕಾಯಿತು. ಕಲ್ಲು ತೂರಾಟದಲ್ಲಿ ಪೊಲೀಸ್ ಜೀಪು, ವಾಹನ ಜಖಂಡಗೊಂಡವು.
ಪಿಎಸ್‍ಐ, ಸಿಪಿಐ ಸೇರಿದಂತೆ ಪೇದೆಗಳು ಗಂಭೀರವಾಗಿ ಗಾಯಗೊಂಡರು.

ಕೇಸು ದಾಖಲು:  ಸೋಮವಾರ ದಿ.18 ರಂದು ಜೋಡು ಕುದುರೆ ಗಾಡಿ ಶರ್ಯತ್ತು, ಎರ್ಪಡಿಸಿದ್ದರಿಂದ ಕಾನೂನು ಉಲ್ಲರ್ಂನೆ ಮಾಡಿದರಿಂದ ಕಾಗವಾಡ ಠಾಣೆಯಲ್ಲಿ ಜಾತ್ರಾ ಕಮೀಟಿಯ 6 ಜನರ ಮೇಲೆ ಕೇಸು ದಾಖಲಾಗಿದೆ.
ಪ್ರತಿಕ್ರೀಯೆ ನೀಡಲು ಹಿಂದೇಟು;- ಮಂಗಳವಾರ ಐನಾಪೂರದಲ್ಲಿ ಕಲ್ಲು ತೂರಾಟದ ಘಟನೆಯ ಕುರಿತು ಅಥಣಿ ಸಿಪಿಐ ರಾಜಶೇಖರ ಬಡೆದೇಸಾಯಿಯವರನ್ನು ಸಂಪರ್ಕಿಸಿದಾಗ ಈ ಘಟಣೆಯ ಕುರಿತು ಕ್ರತಿಕ್ರಿಯೆ ನೀಡಲಿಲ್ಲ.
ಈ ಕುರಿತು ಜಾತ್ರಾ ಕಮೀಟಿಯವರನ್ನು ಸಂಪರ್ಕಿಸಿದಾಗ ಈ ಘಟನೆಗೂ ಸ್ಥಳಿಯರಿಗೂ ಸಂಬಂಧವಿಲ್ಲ. ಮಹಾರಾಷ್ಟ್ರದ ಜೋಡೆತ್ತಿನ ಗಾಡಿ ಮಾಲಿಕರನ್ನು ಎತ್ತುಗಳನ್ನು ಪೋಲಿಸರು ಹೊಡೆದಾಗ ರೊಚ್ಚಿಗೆದ್ದು ಈ ಘಟನೆ ಜರುಗಿದೆ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here