ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗರ ನೇಮಕಕ್ಕೆ ಒತ್ತಾಯಿಸಿ ಕರವೇಯಿಂದ ಪ್ರತಿಭಟನಾ ಧರಣಿ

0
19
loading...


ವಿಜಯಪುರ : ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ಕನ್ನಡಿಗರನ್ನೇ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ನೇತೃತ್ವದಲ್ಲಿ ರವಿವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಅವರು, ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆ ವಿರುದ್ಧ ಇರುವ ಪ್ರಬಲ ಅಸ್ತ್ರವೇ ಲೋಕಾಯುಕ್ತ. ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ಕನ್ನಡಿಗ ನ್ಯಾಯಮೂರ್ತಿಯನ್ನೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಲೋಕಾಯುಕ್ತ ಸಂಸ್ಥೆಯ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲಯ್ಯ ಹಾಗೂ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಈ ರಾಜ್ಯದಲ್ಲಿ ಅನೇಕ ಭ್ರಷ್ಟಾಚಾರದ ಪ್ರಕರಣಗಳನ್ನು ಬಯಲಿಗೆಳೆಯುವ ಮೂಲಕ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಅಲ್ಲದೇ, ಭ್ರಷ್ಟ ರಾಜಕಾರಣಿಗಳ, ಅನೇಕ ತಿಮಿಂಗಲುಗಳಂತಹ ಅಧಿಕಾರಿಗಳ ನಿದ್ದೆಗೆಡಿಸಿದ್ದರು. ಹಿಂದಿನ ಲೋಕಾಯುಕ್ತರಾದ ಭಾಸ್ಕರರಾವ್ ಹಾಗೂ ಅವರ ಪುತ್ರ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರಿಂದ ಲೋಕಾಯುಕ್ತ ಸಂಸ್ಥೆಯ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನ್ಯ ರಾಜ್ಯದ, ಭಾಷೆಯ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಿಸದೇ ಕರ್ನಾಟಕ ರಾಜ್ಯದಲ್ಲಿ ಇರುವ ಕನ್ನಡಿಗರಾದ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತ ಸಂಸ್ಥೆಗೆ ಲೋಕಾಯುಕ್ತರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಪದಾಧಿಕಾರಿಗಳಾದ ಸಾಯಬಣ್ಣ ಮಡಿವಾಳರ, ಪ್ರಕಾಶ ಕುಂಬಾರ, ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ಫಯಾಜ ಕಲಾದಗಿ, ದಯಾನಂದ ಸಾವಳಗಿ, ಶಹಜಾನ ಖಾದ್ರಿ, ವಿನೋದ ದಳವಾಯಿ, ಮನೋಹರ ತಾಜೋ, ನಶೀಮ ರೋಜೀಂದಾರ, ಮೃತ್ಯುಂಜಯ ಹಿರೇಮಠ, ರಾಕೇಶ ಪಾಟೀಲ, ಮಲ್ಲು ಮಡಿವಾಳರ, ದಾದಾಫೀರ ಬಾಗಮಾರೆ, ಅಶೊಕ ಬಂಡಗಲ್ಲ, ಅಶೋಕ ರಾಠೋಡ, ಎಚ್. ಎಸ್. ಬಾಡೆ, ಮಲ್ಲು ಮಡಿವಾಳ, ಸಿದ್ದರಾಮ ಕಟ್ಟಿಮನಿ, ಮೃತ್ಯುಂಜಯ ಹಿರೇಮಠ, ಎಮ್. ಎಸ್. ಶಿರಗೂರ, ಇರ್ಫಾನ ಜಾಗೀರದಾರ ಮುಂತಾದವರು ಪ್ತಿಭಟನೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here