ವಾಟರ್ ಬಾಟಲಿ ಜೊತೆ ಒಂದು ಲೀಟರ್ ಪೆಟ್ರೋಲನ್ನು ಉಚಿತವಾಗಿ ನೀಡುವ ಮೂಲಕ ವಿನೂತನ ಪ್ರತಿಭಟನೆ

0
21
loading...

ಹುಬ್ಬಳ್ಳಿ- ಅಂತಾರಾಷ್ಟ್ರೀಯ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ, ಕೇಂದ್ರ ಸರ್ಕಾರ ಅದಕ್ಕೆ ತಕ್ಕಂತೆ ಇಂಧನ ಬೆಲೆಗಳನ್ನು ಕಡಿಮೆ ಮಾಡದಿರುವದನ್ನು ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ದುರ್ಗದಬೈಲ್‍ನಲ್ಲಿ ಮಿನರಲ್ ವಾಟರ್ ಬಾಟಲಿ ಜೊತೆ ಒಂದು ಲೀಟರ್ ಪೆಟ್ರೋಲನ್ನು ಉಚಿತವಾಗಿ ನೀಡುವ ಮೂಲಕ ವಿನೂತನವಾಗಿ ಕೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಧ್ಯಕ್ಷ ನಾಗರಾಜ ಗೌರಿ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಕ್ಬಾಲ್ ನವಲೂರ, ರಮೇಶ ನೀರಗಟ್ಟಿ, ನಿರಂಜನ ಹಿರೇಮಠ, ದಾಯಪ್ಪ ಪವಾರ, ಅಷ್ಪಾಕ ಕುಮಟಾಕರ, ಶಿವಕುಮಾರ ರಾಯನಗೌಡ್ರ, ಶಿವರಾಜ ಗೌರಿ, ಶಾರೂಕ ಮುಲ್ಲಾ ಸೇರಿದಂತೆ ನೂರಕ್ಕು ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಮಾತನಡಿದ ನಾಗರಾಜ ಗೌರಿ ಬೇರ ದೇಶಗಳಲ್ಲಿ ಪೆಟ್ರೋಲ ದರ ಕಡಿಮೆ ಮಾಡಿದರೂ, ಭಾರತದಲ್ಲಿ ಕಡಿಮೆ ಮಾಡುತ್ತಿಲ್ಲ, ಅಚ್ಛೆ ದಿನ್ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗದೇ ಅಂಬಾನಿ,ಅದಾನಿಗಳಿಗೆ ಲಾಭ ಮಾಡಿ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಕಚ್ಚಾ ತೈಲ ಬೆಲೆ 2013 ರಲ್ಲಿ ಪ್ರತಿ ಬ್ಯಾರಲ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 107 ಡಾಲರ್‍ಗಳಿದ್ದು ಆ ಸಮಯದಲ್ಲಿ ಲೀಟರ್‍ಗೆ 74.60 ರೂ ಗೆ ವಿತರಿಸಲಾಗುತ್ತಿತ್ತು. 2016 ರಲ್ಲಿ ಪ್ರತಿ ಬ್ಯಾರಲ್‍ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 36 ಡಾಲರ್‍ಗಳಾಗಿದ್ದು ಈ ಸಮಯದಲ್ಲಿ ಪ್ರತಿ ಲೀಟರಿಗೆ 60.90 ರೂ. ವಿತರಿಸಲಾಗುತ್ತಿದೆ ಎಂದು ಗೌರಿ ಖಂಡಿಸಿದರು.

loading...

LEAVE A REPLY

Please enter your comment!
Please enter your name here