ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವೆ: ಯತ್ನಾಳ

0
33
loading...

Yatnal
ಜಮಖಂಡಿ: ಮುಂಬರುವ ದಿನಗಳಲ್ಲಿ ಕರ್ನಾಟಕದ ರಾಜಕೀಯ ಕ್ಷೇತ್ರವೇ ಬದಲಾಗುತ್ತದೆ. ನನಗೆ ಸಹಾಯ ಸಹಕಾರ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಕ್ಕೆ ಅನಂತ ಕೃತಜ್ಞತೆಗಳು. ನಿಮ್ಮ ಈ ಉಪಕಾರವನ್ನು ನಾನು ಎಂದೂ ಮರೆಯಲಾರೆ ಎಂದು ವಿಜಯಪುರ-ಬಾಗಲಕೋಟೆ ಮತಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆಯಾದ ಬಸನಗೌಡ ಪಾಟೀಲ(ಯತ್ನಾಳ) ಅವರು ಹೇಳಿದರು.
ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಜರುಗಿದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.ನಗರಸಭೆ, ಪುರಸಭೆ, ಜಿ.ಪಂ, ತಾ.ಪಂ ಸದಸ್ಯರುಗಳಿಗೆ ಭದ್ರತೆ ನೀಡುವ ಉದ್ದೇಶದಿಂದ ಅವರಿಗೆ ಹೆಚ್ಚಿನ ಸಂಬಳ ನೀಡುವಂತೆ ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.ಬಿಜೆಪಿ ಪಕ್ಷದಲ್ಲಿ ನಾನು ಎಂದು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. 25 ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡದೇ ಇರುವುದರಿಂದ ಹಾಗೂ ಅಭಿಮಾನಿಗಳ, ಕಾರ್ಯಕರ್ತರ, ಹಿತೈಷಿಗಳ ಒತ್ತಾಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅನಿವಾರ್ಯವಾಯಿತು ಎಂದು ಹೇಳಿದ ಅವರು ಇಂದು ನಾನು ರಾಜಕೀಯದಲ್ಲಿ ಬೆಳದಿದ್ದೆ ಆದರೆ ಅದು ಬಿಜೆಪಿಯ ವರಪ್ರಸಾದ ಎಂದರು.ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಇದಕ್ಕೆ ನಿಮ್ಮ ಸಹಾಯ ಮತ್ತು ಸಹಕಾರ ಇರಲಿ ಎಂದು ವಿನಂತಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಉಮೇಶ ಮಹಾಬಳಶೆಟ್ಟಿ ಅವರು ಸಣ್ಣ ಕಾರ್ಯಕರ್ತರು ತಪ್ಪು ಮಾಡಿದರೆ ಅವರಿಗೆ ಉಚ್ಛಾಟನೆ ಶಿಕ್ಷೆ ನೀಡುತ್ತಾರೆ. ಸ್ಥಳೀಯ ಬಿಜೆಪಿ ನಾಯಕರು ಏನೇ ತಪ್ಪು ಮಾಡಿದರೂ ಶಿಕ್ಷೆ ಇಲ್ಲ. ಬಿಜೆಪಿ ಪಕ್ಷ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತದೆ ಎಂದು ವಿಷಾದಿಸಿದರು.
ಪಕ್ಷೇತರ ಅಭ್ಯರ್ಥಿ ಬಸನಗೌಡ ಪಾಟೀಲ(ಯತ್ನಾಳ) ಅವರ ಗೆಲುವು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪೋಲಿಸ್ ಅಧಿಕಾರಿ ಪಿ.ಎನ್.ಪಾಟೀಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ(ಯತ್ನಾಳ) ಅವರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಲಾಯಿತು.ವೇದಿಕೆ ಮೇಲೆ ಮುಖಂಡರಾದ ಕಾಡು ಮಾಳಿ, ಮಾಮೂನ ಪಾರ್ಥನಳ್ಳಿ, ವಿರೂಪಾಕ್ಷಯ್ಯ ಕಂಬಿ, ಹನುಮಂತ ಹಿಪ್ಪರಗಿ, ಶಂಕರ ಗೊಬ್ಬಾನಿ, ದಲಿತ ಮುಖಂಡ ಭೀಮಶಿ ನಡುವಿನಮನಿ, ಪರಮಾನಂದ ಚಿಗರಿ, ಭರಮು ಮೂಲಿಮನಿ, ರಾಮಣ್ಣಾ ಹಿಪ್ಪರಗಿ, ಧರೆಪ್ಪ ಸಾಂಗ್ಲಿಕರ, ಶಂಕರೆಪ್ಪ ಕಿತ್ತೂರ, ಪ್ರದೀಪ ಮಹಾಲಿಂಗಪೂರಮಠ ಮತ್ತಿತರರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಮಾಜಿ ನಗರಸಭೆ ಸದಸ್ಯ ಶ್ರೀಶೈಲ ಪಾಟೀಲ ಸ್ವಾಗತಿಸಿದರು. ಮಾಜಿ ನಗರಸಭೆ ಉಪಾಧ್ಯಕ್ಷ ಉದಯಕುಮಾರ ಮಂಕಣಿ ಮಾಲಾರ್ಪಣೆ ಮಾಡಿದರು. ಕೊನೆಯಲ್ಲಿ ಪ್ರವೀಣ ಪಾಲಭಾಂವಿ ವಂದಿಸಿದರು. ರಾಯಭಾ ಜಾಧವ ಕಾರ್ಯಕ್ರಮವನ್ನು ನಿರೂಪಿಸಿದರು.

loading...

LEAVE A REPLY

Please enter your comment!
Please enter your name here