ವ್ಯಾಪಾರದ ಅರಿವು ಮೂಡಿಸಲು ಶಾಲಾ ಸಂತೆ

0
20
loading...

ಬೆಳಗಾವಿ 02: ಶಾಲಾ ಸಂತೆಗಳ ಮೂಲಕ ವಿದ್ಯಾರ್ಥಿಗಳು ವ್ಯಾಪಾರ ಸಂದರ್ಭದಲ್ಲಾಗುವ ಅವ್ಯವಹಾರ, ವ್ಯಾಪಾರಸ್ಥರೊಂದಿಗೆ ವ್ಯವಹರಿಸುವ ನೀತಿ, ಸಂವಹನ, ಬೆಲೆ ಬಗ್ಗೆ ಚೌಕಾಶಿ ಮಾಡುವ ಪದ್ದತಿ, ಗುಣಮಟ್ಟ, ಸುರಕ್ಷತೆ, ವಸ್ತುವಿನ ಆಯ್ಕೆ ಇತ್ಯಾದಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಸಾಧ್ಯ ಎಂದು ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ.ವೈಜಯಂತಿ ಚೌಗಲಾ ಹೇಳಿದರು.
ಅವರು ನಗರದ ಮಹಾಂತೇಶನಗರದ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವ್ಯಾಪಾರದ ಸಂದರ್ಭದಲ್ಲಾಗುವ ಮೋಸಗಳು, ವ್ಯಾಪಾರದ ಕೌಶಲ್ಯಗಳನ್ನು ತಿಳಿಸಿಕೊಡಲು ಶಾಲಾಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದÀರು.
ಮಾತನಾಡಿ ಮಾರುಕಟ್ಟೆ ವಿಸ್ತರಿಸಿದಂತೆ ಬಳಕೆದಾರರ ಸಮಸ್ಯೆಗಳೂ ಹೆಚ್ಚುತ್ತಲಿವೆ. ಸರಕುಗಳು ಮತ್ತು ಸೇವೆಗಳ ವಿವಿಧತೆ ಜೊತೆಗೆ ಬಳಕೆದಾರರ ಸಮಸ್ಯೆಗಳೂ ವೈವಿಧ್ಯಮಯವಾಗುತ್ತಿದ್ದು, ಬಳಕೆದಾರರನ್ನು ಎಚ್ಚರಿಸುವ ಅಗತ್ಯ ಕಂಡು ಬರುತ್ತಿದೆ. ಅವರ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಬಳಕೆದಾರರ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನಿಗಾ ವಹಿಸಲು ಅವರನ್ನು ಸಶಕ್ತರನ್ನಾಗಿ ಮಾಡಿ, ಅವರ ರಕ್ಷಣೆಗೆ ಇರುವ ಕಾನೂನುಗಳ ಪರಿಚಯ, ಅವುಗಳನ್ನು ಬಳಸಿಕೊಳ್ಳುವ ರೀತಿ, ಸಮಸ್ಯೆಗೆ ಸಿಲುಕುವ ಮುನ್ನವೇ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅವರಿಗೆ ತಿಳಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯಾಧ್ಯಾಪಕಿ ಶ್ರೀಮತಿ.ಯು.ಕೆ.ವಿಭೂತಿ ಮಾತನಾಡಿ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಹಕಪರ ಜ್ಞಾನ ಸಂಪಾದನೆ ಮಾಡಬಹುದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಹಕ ಕ್ಲಬ್ ಚಟುವಟಿಕೆಗಳು ನೆರವಾಗಿವೆ ಎಂದರು.
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ತರಹದ ಖಾದ್ಯ, ದಿನಬಳಕೆ ವಸ್ತುಗಳು, ಹಣ್ಣು, ತರಕಾರಿ, ಚಹಾ ಇತ್ಯಾದಿ ಮಳಿಗೆಗಳನ್ನು ನಿರ್ಮಿಸಿದ್ದರು. ಶಾಲಾ ಸಿಬ್ಬಂದಿ ವರ್ಗದವರು, ಶಾಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.“ಸೇವಾಮಿತ್ರ” ಬಿಎಸ್‍ಡಬ್ಲ್ಯೂ ಕಾಲೇಜಿನ ವಿದ್ಯಾರ್ಥಿಗಳಾದ ಜಯಶ್ರೀ, ಮೀನಾಕ್ಷಿ ಮತ್ತು ಫರಾನಾ ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ.ಖಡೇದ ಸ್ವಾಗತಿಸಿದರು. ಗ್ರಾಹಕರ ಕ್ಲಬ್ ನೊಡಲ್ ಶಿಕ್ಷಕಿ ಶ್ರೀಮತಿ.ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here