ಸನ್ಮಾರ್ಗದಿಂದ ಜನ್ಮ ಪಾವನ: ಡಾ. ವಾಲಿ

0
45
loading...

ಅರಟಾಳ 24: ಗುರು ಎನ್ನುವುದು ಶ್ರೇಷ್ಟ ಚಿಂತನೆಯ ಮೇಲೆ ನಿಂತ ಆತ್ಮ ಆ ಆತ್ಮವು ಸಾಕ್ಷಾತ್ಕಾರ ಹೋದಬೇಕೆಂದರೆ. ಸದ್ಗುರು ಎನ್ನುವ ಕೃಪೆ ಒದಗಿದಾಗ ಮಾತ್ರ ಸಾದ್ಯ ಎಂದು ಶ್ರೀ ಸದ್ಗುರು ಸಮರ್ಥ ಡಾ ಎ ಸಿ ವಾಲಿ ಗುರುಗಳು ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ನಡೆದ ಶ್ರೀ ಚನ್ನಸಂಗಮೇಶ್ವರ ಸಾಧು ಮಹಾರಾಜರ 24 ನೇ ಪುಣ್ಯತಿಥಿ ಸಪ್ತಾಹದಲ್ಲಿ ಮಾತನಾಡಿ ಇಂಚಗೇರಿ ಸಂಪ್ರದಾಯವೆನ್ನುವುದು ಮೂಲ ಗುರುವಿನ ವರದಿಂದ ಬೆಳೆದದು ಇಂದು ಸಂಪ್ರದಾಯವು ಜಗತ್ತಿನಾದ್ಯಂತ ಪಸರಿಸಿದೆ. ಶ್ರೇಷ್ಟವಾದ ಮಾನವ ಜನ್ಮದಲ್ಲಿ ಹುಟ್ಟಿದ ನಾವೆಲ್ಲರು ಪುಣ್ಯವಂತರು. ಈ ಮಾರ್ಗದಲ್ಲಿ ಸಾಗಿದರೆ ಜನ್ಮ ಪಾವನವಾಗುತ್ತದೆ. ಸಾಕ್ರೆಟಿಸನಿಂದ ಬೆಳೆದ ಪ್ಲೆಟೋ ಶ್ರೇಷ್ಟ ಸಂವಿಧಾನ ರಚನೆಗೆ ಅರಿಸ್ಟಾಟಲನೆಂಬ ಅಸ್ತ್ರತಯಾರಿಸಿ ಅಲೆಕ್ಸಾಂಡರವೆಂಬ ಮಹಾಯಾತ್ರಿಕನ್ನನ ಜಗತ್ತನ ಗೆಲ್ಲಲು ಹೋರಟಾಗ ಭಾರತದಂತ ಪುಣ್ಯರಾಷ್ಟ್ರದಲ್ಲಿ ಜ್ಞಾನೋದಯ ಪಡೆದುಕೊಂಡ. ದೇಹ ನಶ್ವರ ಕೊನೆಗೆ ಹಾಗೆ ಹೋಗುವುದು ಎನ್ನುವುದು ಅರಿತು ಇರುವಾಗ ಗುರುವೆಂಬ ದೈವವನ್ನ ತನ್ನೊಳು ಇರಿಸಿಕೊಂಡರೆ ಆತ್ಮ ಸದ್ಗುರುವಿನ ಕೂಡುತ್ತದೆಂದು ನುಡಿದರು.
ಪ್ರಭುಜಿ ಮಹಾರಾಜರು ಮಾತನಾಡಿ ವಿಮಲಬ್ರಹ್ಮವು ಮನುಷ್ಯನ ಮೋಕ್ಷಕ್ಕೆ ದಾರಿ. ಪ್ರತಿನಿತ್ಯ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಿಕೊಂಡರೆ ಎಂಬತ್ತನಾಲ್ಕು ಕೊಟ್ಟಿ ಜೀವರಾಶಿಗಳಲ್ಲಿ ಪಡೆಯದ ಸಂತೃಪ್ತಿಯನ್ನ ಮಾನವ ಜನ್ಮದಲ್ಲಿ ಪಡೆಯುತ್ತಾನೆ. ಪಂಚೆಂದ್ರಿಗಳನ್ನ ಹಿಡಿತ್ತದಲ್ಲಿಟ್ಟು ಇಪ್ಪತೊಂದು ಸಾವಿರದಾ ಆರುನೂರು ಸ್ವಾಸಗಳನ್ನು ಬಿಡದೆ ಪ್ರತಿನಿತ್ಯ ಸದ್ಗುರುವಿನ ಜ್ಞಾನದಲ್ಲಿ ಮನಸ್ಸನ್ನು ತೊಡಗಿಸಿಕೊಂಡಾಗ ಸದ್ಗತಿ ಹೋದಲು ಸಾಧ್ಯವೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಲಿಂಗ ಮಹಾರಾಜರು ವಹಿಸಿದರು, ಬಸರಗಿಯ ಬಸವ ಶಾಸ್ತ್ರಿಗಳು,ಕೋಹಳ್ಳಿಯ ಶಂಕರ ಮಹಾರಾಜರು. ಹಿಪ್ಪರಗಿಯ ವಿರೂಪಾಕ್ಷ ಮಹಾರಾಜರು.ಗಿರಿಪಲ್ಲಪ್ಪ ಹಿಪ್ಪರಗಿ.ಸದಾಶಿವ ಉಮರಾಣಿ. ಸಿದ್ದು ಹಳ್ಳಿ. ಚನ್ನಪ್ಪ ನೇಮಗೌಡ. ಶ್ರೀಮಂತ ಉಮರಾಣಿ ಹಾಗು ಗ್ರಾಮಸ್ಥರು ಉಪಸ್ಥಿತರಿದರು.

loading...

LEAVE A REPLY

Please enter your comment!
Please enter your name here