ಸರಿಯಾದ ರೀತಿಯಲ್ಲಿ ಸಾಲವನ್ನು ಮರುಪಾವತಿಸಿ: ಹುಣಸೀಮರದ

0
25
loading...


ಮುಂಡರಗಿ: ಸ್ವಸಹಾಯ ಸಂಘಗಳು ಸಾಲ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಸಾಲ ಮರು ಪಾವತಿ ಮಾಡಬೇಕು ಎಂದು ನಬಾರ್ಡ ಎನ್.ಜಿ.ಓ ಮುಖ್ಯಸ್ಥರಾದ ಆರ್.ಸಿ.ಹುಣಸೀಮರದ ಹೇಳಿದರು.
ಅವರು ತಾಲೂಕಿನ ಮಕ್ತುಂಪೂರ ಗ್ರಾಮದಲ್ಲಿ ಸುವರ್ಣಾ ಕರ್ನಾಟಕ ಧರ್ಮಶ ಸ್ವಸಾಹಾಯ ಸಂಘ ಹಾಗೂ ಚಾಮುಂಡೇಶ್ವರಿ ಸ್ವಸಹಾಯ ಸಂಘದವರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ ಮಹಿಳಾ ಗುಂಪುಗಳಿಗೆ ವಿಶೇಷವಾಗಿ ಬಡವರಿಗೆ ಸ್ವಸಹಾಯ ಸಂಘಗಳು ಅನೂಕೂಲವಾಗಿವೆ ಎಂದರು.
ತಾಲೂಕಿನಲ್ಲಿ ಒಟ್ಟು 150 ಸ್ವಸಹಾಯ ಸಂಘಗಳಿಗೆ ಈಗಾಗಲೇ ಸಾಲವನ್ನು ನೀಡಿದ್ದು ಹೆಣ್ಣು ಮಕ್ಕಳು ತೆಗೆದುಕೊಂಡಿರುವ ಸಾಲವನ್ನು ಕಟ್ಟಲು ಮನಸ್ಸು ಹೊಂದಿರುತ್ತಾರೆ. ಅವರಿಂದಲೇ ಸ್ವಸಹಾಯ ಸಂಘಗಳು ನಡೆಯುತ್ತಿವೆ. ಅಲ್ಲದೇ ನಿಮ್ಮಲ್ಲಿ ಪ್ರಮಾಣಿಕತೆ ಹೊಂದುವುದರ ಜೊತೆಗೆ ನಿತ್ಯದ ವ್ಯವಹಾರವನ್ನು ಬ್ಯಾಂಕಿನವರೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸಬೇಕು ಸಾಲವನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಎರಡು ಮಹಿಳಾ ಸ್ವಸಹಾಯ ಸಂಘಗಳಿಗೆ ಒಟ್ಟು 7ಲಕ್ಷ 25ಸಾವಿರ ರೂ. ಚೆಕ್‍ನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ನಬಾರ್ಡ ಪೈನಾನ್ಸ ಜಿಲ್ಲಾ ವ್ಯವಸ್ಥಾಪಕರಾದ ಜಿ.ಎಚ್. ಪಾಟೀಲ, ಕುಮಾರಗೌಡ ಪಾಟೀಲ, ರೀಹಾನಾಬೆಗಂ ಹಂದ್ರಾಳ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here