ಸಾಂಕ್ರಾಮಿಕ ರೋಗಳು ಹರಡದಂತೆ ಎಚ್ಚರವಹಿಸಿ

0
151
loading...

ಹಾರೂಗೇರಿ 11: ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ ರೋಗಗಳು ಹರಡದಂತೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯವೆಂದು ಹಾರೂಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಕುಮಾರ ಹತ್ತರಗಿ ಕರೆ ನೀಡಿದರು.
ಅವರು ಪಟ್ಟಣದ ಸರಕಾರಿ ಫ್ರೌಡಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಉದ್ಧೇಶಿಸಿ ಮಾತನಾಡಿದರು.
ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಕ್ಯಾನ್ಸರ, ಪಾಶ್ರ್ಛುವಾಯು ರೋಗಗಳು ಅಸಾಂಕ್ರಾಮಿಕ ರೋಗಗಳಾಗಿದ್ದು, ಅವುಗಳು ದೂಮಪಾನ ಹಾಗೂ ಮದ್ಯಪಾನ, ತಂಬಾಕು ಸೇವನೆಯಿಂದ ಬರುತ್ತದೆ, ಅಪೌಷ್ಠಿಕ ಆಹಾರ ಮತ್ತು ಕೊಬ್ಬುಯುಕ್ತ ಆಹಾರ ಸೇವನೆಯಿಂದ ಅಸಾಂಕ್ರಾಮಿಕ ರೋಗಳು ಉತ್ಫತ್ತಿಯಾಗುತ್ತವೆ, ಆದ್ದರಿಂದ ಪ್ರತಿಯೊಬ್ಬರು ಹೆಚ್ಚಾಗಿ ತರಕಾರಿಯನ್ನು ಸೇವಿಸಬೇಕೆಂದು ವಿದ್ಯಾರ್ಥಿಗಳಿಗೆ ಶಿಕ್ಷಣಾಧಿಕಾರಿ ವಿಜಯಕುಮಾರ ಹತ್ತರಗಿ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯಕಿ ಎಸ್.ಬಿ ಮಲ್ಹಾರಿ, ಕಾಮು ಶಿಂಗೆ, ಶ್ರೀಧರ ಗುಡಿ, ಎಸ್.ಬಿ ಚಿದಾನಂದಮೂರ್ತಿ, ಸಹಶಿಕ್ಷಕರಾದ ಎ.ಬಿ ಅರಕೇರಿ, ಬಿ.ಎ ಮಾಂಜರೆ, ಜಿ.ಎಮ್ ಮೂಡಶಿ, ಜಗದೀಶ ಕುಲಕರ್ಣಿ, ಸರದಾರ ಜಮಾದರ, ಸುರೇಶ ಹಿಪ್ಪರಗಿ, ವ್ಹಿ.ಆರ್ ಕುಂಬಾರ, ಆರ್,ಎ ಕಾಂಬಳೆ, ಹನುಮಂತ ಅಥಣಿ, ಸದಾಶಿವ ಹಡಪದ ಸೇರಿದಂತೆ ಫ್ರೌಡಶಾಲೆಯ ಎಲ್ಲ ವಿದ್ಯಾರ್ಥಿ/ನಿಯರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಅಶೋಕ ಅರಕೇರಿ ಸ್ವಾಗತಿಸಿ, ನಿರೂಪಿಸಿದರು, ಜಗದೀಶ ಕುಲಕರ್ಣಿ ವಂದಿಸಿದರು.

loading...

LEAVE A REPLY

Please enter your comment!
Please enter your name here