ಸಾರ್ವಜನಿಕರಿಗೆ ಸಿಗಬೇಕಾಗಿದ್ದ ಸೌಲಭ್ಯ ಮರೀಚಿಕೆ

0
27
loading...

ಮುಧೋಳ 22: ಪುರಸಭೆಯಿಂದ ಬಡತಿ ಹೊಂದಿರುವ ಮುಧೋಳ ನಗರಸಭೆಗೆ ರಾಜ್ಯ ಮುಕ್ತ ನಿಧಿ ಅನುದಾನದ ಕೊರತೆಯಿಂದಾಗಿ ಪಟ್ಟಣದ ಅಭಿವೃದ್ದಿ ಕುಂಠಿತಗೊಳ್ಳುತ್ತಿದೆ. ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಸಭೆ ಅಧ್ಯಕ್ಷೆ ನೀಲವ್ವಾ ನಿಂಬಿಕಾಯಿ ಉಪಾದ್ಯಕ್ಷ ಕುಬೇರ ಲಮಾಣಿ ನೇತೃತ್ವದಲ್ಲಿ ಶಾಸಕ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು. ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆಯಾಗಿ ವರ್ಷ ಗತಿಸಿದೆ. ನಗರೋತ್ಥಾನ ಯೋಜನೆಯಲ್ಲಿ ಬರಬೇಕಾಗಿದ್ದ 15 ಕೋಟಿ ರೂ. ಬದಲಾಗಿ ಬರೀ 5 ಕೋಟಿ ರೂ.ಬಂದಿದೆ. 3.60 ಕೋಟಿ ರೂ. ಅಭಿವೃಧ್ಧಿ ಅನುದಾನದಲ್ಲಿ 263 ಲಕ್ಷ ರೂ. ಮಾತ್ರ ಅನುದಾನ ಬಂದಿರುವುದರಿಂದ ಸಾರ್ವಜನಿಕರಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.

ಮನಿವಿ ಸ್ವೀಕರಿಸಿದ ಶಾಸಕ ಗೋವಿಂದ ಕಾರಜೋಳ ಅವರು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸೈಯದ ಮುಲ್ಲಾ, ರಾಮನಗೌಡ ನಾಡಗೌಡ ಮುದಕಪ್ಪ ನಾವ್ಹಿ, ಡಾ.ಸತೀಶ ಮಲಘಾಣ, ಯುನುಸು ಕುಡುಚಿ, ಸಿದ್ದು ಗಾಯಕವಾಡ, ಅರ್ಜುನ ಕಾಂಬಳೆ, ರಾಜಮಾ ಬೇಪಾರಿ, ಹೊಳಬಸು ತೇಲಿ, ಆನಂದ ಚವ್ಹಾಣ, ಬಸವರಾಜ ಮಾನೆ, ರಾಜು ಬಿಸರೆಡ್ಡಿ, ಬಸು ಮೇತ್ರಿ ನಗರಸಭೆ ಪೌರಾಯುಕ್ತ ಬಸವರಾಜ ಮಂಗಸೂಳಿ, ಭಾರತಿ ಜೋಶಿ ಇತರರಿದ್ದರು.

loading...

LEAVE A REPLY

Please enter your comment!
Please enter your name here