ಸಿದ್ಧರಾಮೇಶ್ವರ ಜಯಂತಿ ಆಚರಿಸದೆ ಇದ್ದ ಕಾರಣ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ

0
26
loading...


ಧಾರವಾಡ,: ಪ್ರಸಕ್ತ ವರ್ಷ ಜಿಲ್ಲಾಡಳಿತವು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸದೆ ಘೋರ ಲೋಪ ಎಸಗಿದೆ ಅದಕ್ಕೆ ಕಾರಣೀಭೂತರಾದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಹೀಗಾಗದಂತೆ ಜಿಲ್ಲಾಡಳಿತವು ಜಾಗೃತ ವಹಿಸಬೇಕು ಎಂದು ಭೋವಿ ವಟ್ಟರ ಸಮಾಜ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತವು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸುವದಕ್ಕಿಂತ ಒಂದು ತಿಂಗಳ ಪೂರ್ವದಲ್ಲಿ ಜಿಲ್ಲೆಯ ಹಾಗೂ ಸ್ಥಳೀಯ ವಡ್ಡರ ಭೋವಿ ಸಮಾಜದ ಮುಖಂಡರೊಂದಿಗೆ ಸಮಾಲೋಚಿಸಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕ್ರಮ ಕೈಗೊಳ್ಳಬೇಕು. ಸಿದ್ಧರಾಮೇಶ್ವರರ ಭವನ ಕಟ್ಟಲು ಮತ್ತು ಅಲ್ಲಿ ವಡ್ಡರ ಸಮಾಜದ ಮಕ್ಕಳಿಗೆ ಶಾಲೆ ತೆರೆಯಲು ಧಾರವಾಡದ ಹೊರ ವಲಯದಲ್ಲಿರುವ ಸೋಮೇಶ್ವರದ ಹತ್ತಿರ ಇರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಜಮೀನು ಸಮಾಜಕ್ಕೆ ಮಂಜೂರು ಮಾಡಿ ಕೊಡಬೇಕು. ಜಯಂತಿಯಂದು ಕಡ್ಡಾಯವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಭೀಮಸೀ ನೇಮಿಕಲ್, ಬಸವರಾಜ ಮುತ್ತಳ್ಳಿ, ಲಕ್ಷ್ಮಣ ಬಿಳಗಿ, ಮೋಹನ ರಾಮದುರ್ಗ, ವಾಯ್.ಜಿ. ಬಂಡಿವಡ್ಡರ, ಎಂ. ಎನ್. ಮುನವಳ್ಳಿ, ಬಸವರಾಜ ರುದ್ರಾಪೂರ, ಲಕ್ಷ್ಮಣ ಆನೆಗುಂದಿ, ಎಚ್.ಡಿ. ಪೂಜಾರ, ಬಸವರಾಜ ಎಚ್. ಮುತ್ತಳ್ಳಿ, ನಾಗಪ್ಪಾ ತಿ. ಹಿರೆಮನಿ, ಬಸವರಾಜ ದು. ಕಡಕೋಳ, ತಿಮ್ಮಣ್ಣ ಹೀರೆಮನಿ, ಈರಪ್ಪಾ ವಂಡಿವಡ್ಡರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here