ಹಿರಿಯರ ಜೀವನ ವಿದ್ಯಾರ್ಥಿಗಳಿಗೆ ದಾರಿದೀಪ : ಡಾ. ಗುಡಸಿ

0
38
loading...

ಹಾರೂಗೇರಿ 22: ಸ್ವಾಮಿ ವಿವೇಕಾನಂದರ ಸಂದೇಶಗಳು ಯುವಕರಿಗೆ ಪ್ರೇರಣೆಯಾಗುವ ಮೂಲಕ ಯುವಕರಲ್ಲಿ ಸ್ವಯಂಸೇವಾ ಮನೋಭಾವ ಬೆಳೆದರೆ ಮಾತ್ರ ರಾಷ್ಟ್ರೀಯ ಭಾವ ಮೂಡಲು ಸಾಧ್ಯವೆಂದು ಶ್ರೀವೃಷಬೇಂದ್ರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಠ್ಠಲ ಪವಾರ ಕರೆ ನೀಡಿದರು.
ಸಮೀಪದ ದತ್ತುಗ್ರಾಮ ಹಿಡಕಲ್ ಗ್ರಾಮದ ಮನ್ನಿಕೇರಿ ತೋಟಶಾಲೆಯಲ್ಲಿ ರಾಣಿಚೆನ್ನಮ್ಮಾ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ಹಾರೂಗೇರಿಯ ಶ್ರೀವೃಷಭೇಂದ್ರ ಶಿಕ್ಷಣ ಸಂಸ್ಥೆಯ ಕಲಾವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ್ಯತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಸ್ವಯಂಸೇವಾ ಭಾವದ ಜಾಗೃತಿ ಮೂಡಿದರೆ ಮಾತ್ರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಷ್ಟ್ರೀಯ ಸೇವಾ ಯೋಜನೆಯ ಸಂಕಲ್ಪ ಸಫಲವಾಗುವುದು ಎಂದು ಶಿಬಿರಾರ್ಥಿಗಳಿಗೆ ವಿಠ್ಠಲ ಪವಾರ ಕಿವಿಮಾತು ಹೇಳಿದರು.
ಡಾ. ಸಿ.ಆರ್ ಗುಡಸಿ ಮಾತನಾಡಿ ಹಿರಿಯರ ಜೀವನ ವಿದ್ಯಾರ್ಥಿಗಳಿಗೆ ದಾರಿದೀಪ, ಕೇವಲ ಪುಸ್ತಕೀಯ ಜ್ಞಾನವೇ ಸಂಪೂರ್ಣವಲ್ಲ, ಸಮಾಜ ಯುವಕರ ಮುಂದಿರುವ ಬಹುದೊಡ್ಡ ಪಠ್ಯವಾಗಿದೆ, ಅದನ್ನು ಓದುವುದರ ಮೂಲಕ ಪ್ರತಿಯೊಬ್ಬರು ಅದರ ಒಂದು ಭಾಗವಾಗಬೇಕೆಂದು ಅಭಿಮತ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಾಹಿತಿ ಡಾ.ವ್ಹಿ.ಎಸ್ ಮಾಳಿ, ಪ್ರಾಚಾರ್ಯ ಎ.ಡಿ ಟೊನಗೆ, ಸಿ.ಆರ್ ಮನ್ನಿಕೇರಿ, ಪ್ರಧಾನ ಗುರುಗಳಾದ ಎಸ್.ಮಹೇಶ, ಡಾ.ಐ,ಆರ್ ಕೊಕಟನೂರ, ಡಾ.ಎಚ್,ಎಸ್ ಬಿಸ್ವಾಗರ, ಎಸ್.ಎಲ್ ಸದಲಗಿ, ಆಯ್,ಬಿ ಬಿಳಗಿ, ಪ್ರೋ,ಜಿ.ಆರ್ ಗುಡೋಡಗಿ, ಪಿ.ಬಿ ನರಗುಂದ, ಪ್ರೋ,ಪಿ.ಬಿ ಕಲಚಿಮ್ಮಡ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭೀಮಪ್ಪ ಸುತಾರ ಸ್ವಾಗತಿಸಿದರು, ಬಾಳೇಶ ವಡಗಾಂವಿ ನಿರೂಪಿಸಿದರು, ಪ್ರೋ.ಎ.ವ್ಹಿ ಮೆಂಡಿಗೇರಿ ವಂದಿಸಿದರು.

loading...

LEAVE A REPLY

Please enter your comment!
Please enter your name here