0
60
loading...

ಅಥಣಿ 9: ಲಿಂಗರಾಜ ಜಯಂತಿ ಉತ್ಸವ ನಮಿತಿ ಅಥಣಿ ಹಾಗೂ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಅಥಣಿಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜ ಜಯಂತಿ ಉತ್ಸವವು ರವಿವಾರ ದಿ. 10-1-2016 ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿಯ ಕೆ.ಎಲ್.ಇ ಸಂಸ್ಥೆಯ ಎಸ್. ಎಸ್. ಎಂ.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಡಾ. ಪಿ.ಜಿ. ಹೊನ್ನುಂಗರ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಿಕ್ಕೋಡಿಯ ಸಾಹಿತಿಗಳಾದ ಡಾ.ಪಿ.ಜಿ.ಕೆಂಪಣ್ಣವರ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಕ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿ ಸಿ.ಎಸ್. ಜನವಾಡೆ ಹಾಗೂ ಸ್ಥಾನಿಕ ಮಂಡಳಿ ಸದಸ್ಯರು, ಪ್ರಾಚಾರ್ಯರು ಉಪಸ್ಥಿತರಿರಲಿದ್ದಾರೆ.

loading...

LEAVE A REPLY

Please enter your comment!
Please enter your name here