21 ರಿಂದ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು

0
14
loading...

ಗೋಕಾಕ: 15ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇದೇ ದಿ.21 ರಿಂದ 24 ರವರೆಗೆ ಈಗಾಗಲೇ ನಿರ್ಮಿಸಲಾದ ಭವ್ಯ ವರ್ಣರಂಜಿತ ವೇದಿಕೆ ಮೇಲೆ ಜರುಗಲಿದೆ.
ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗಕ್ಕೆ ಭಾಷಣ, ಗಾಯನ, ಜಾನಪದ ಗಾಯನ, ಭಾವಗೀತೆ, ಹಾಸ್ಯಾಭಿನಯ, ಸೋಲೋ ಡ್ಯಾನ್ಸ್, ಕ್ಲಾಸಿಕಲ್ ಡ್ಯಾನ್ಸ್, ಜಾನಪದ ನೃತ್ಯ, ಸಮೂಹ ನೃತ್ಯ ಮತ್ತು ಭರತ ನಾಟ್ಯ ಸ್ಪರ್ಧೆಗಳು ನಡೆಯಲಿದ್ದು, ಈ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕಳೆದ ಸಾಲಿನ ಸತೀಶ ಶುಗರ್ಸ ಅವಾಡ್ರ್ಸನ ಪ್ರೌಢಶಾಲೆ ಭಾಷಣ ಸ್ಪರ್ಧೆಯ ಪ್ರಶಸ್ತಿ ವಿಜೇತೆ ಅನೀತಾ ಅಮ್ಮಣಗಿ ಅವರು ನೆರವೇರಿಸಲಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪ್ರಾಥಮಿಕ ವಿಭಾಗದಿಂದ 344, ಪ್ರೌಢ ಶಾಲಾ ವಿಭಾಗದಿಂದ 342 ಹಾಗೂ ಕಾಲೇಜು ವಿಭಾಗದಿಂದ 204 ಒಟ್ಟು 890 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.
ಕಳೇದ ಸಾಲಿನ ಸತೀಶ ಶುಗರ್ಸ ಅವಾಡ್ರ್ಸದ ಬಹುಮಾನ ಮೊತ್ತವನ್ನು 15 ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಬಹುಮಾನ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಒಟ್ಟು ಈ ಕಾರ್ಯಕ್ರಮದ ಬಹುಮಾನ ಮೊತ್ತ 15 ಲಕ್ಷ 33 ಸಾವಿರ ರೂ, ನೀಡಲಾಗುವುದು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ: ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಯಾವುದೇ ಪದವಿಗಳ ಅಂತಿಮ ಹಂತದ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ, ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಒಟ್ಟು 19 ವಿದ್ಯಾರ್ಥಿಗಳು ಈ ಬಹುಮಾನಕ್ಕೆ ಪುರಸ್ಕøತಗೊಂಡಿದ್ದಾರೆ ಎಂದು ಸಂಘಟಕರಾದ ರಿಯಾಜ ಚೌಗಲಾ ಮತ್ತು ಎಸ್.ಎ.ರಾಮಗಾನಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here