24 ರಂದು ಜೆಡಿಎಸ್ ಸಭೆ

0
11
loading...

ಗೋಕಾಕ 22: ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಚುನಾವಣೆಯ ರೂಪರೇಷ ಕುರಿತು ಚರ್ಚಿಸಲು ಗೋಕಾಕ ತಾಲೂಕಿನ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ರವಿವಾರದಂದು ದಿ.24ರಂದು ಮುಂಜಾನೆ 11-00 ಗಂಟೆಗೆ ನಗರದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಪಿ ಎಫ್ ಪಾಟೀಲ,ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಮಾಡಲಗಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫೈಜುಲ್ಲಾ ಮಾಡಿವಾಲೆ, ಎಸ್‍ಸಿಎಸ್‍ಟಿ ಘಟಕದ ಅಧ್ಯಕ್ಷ ಶಿವಾನಂದ ಸಂಜುಗೊಳ, ಹಿರೀಯ ಮುಖಂಡ ಡಿ ಬಿ ನಾಯಕ, ಜಿಲ್ಲಾ ವಕ್ತಾರ ಚನ್ನಪ್ಪ ವಗ್ಗನ್ನವರ ಆಗಮಿಸಲಿದ್ದಾರೆ.
ವಿಧಾನಸಭಾ ಮತಕ್ಷೇತ್ರದ ಎಲ್ಲ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಮತ್ತು ಜಿ. ಪಂ. ಹಾಗೂ ತಾ.ಪಂ. ಟಿಕೆಟ್ ಆಕಾಂಕ್ಷಿಗಳು ಭಾಗವಹಿಸಬೇಕೆಂದು ಅರಭಾಂವಿ ಮತಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ಪರುಶೇಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here