ಅಂಧರ ಬಾಳಿಗೆ ಬೆಳಕಾಗಿ : ಡಾ. ಶ್ರಮಣ

0
22
loading...

ರಾಮದುರ್ಗ 17ಃ ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ವ್ಯಕ್ತಿಗಳ ಕಣ್ಣುಗಳನ್ನು ಮತ್ತೊಬ್ಬರಿಗೆ ನೀಡುದರಿಂದ ಒಬ್ಬ ಅಂಧನ ಬಾಳಿಗೆ ಬೆಳಕು ನೀಡಿದಂತಾಗುತ್ತದೆ. ಅಂಧರ ಬಾಳಿಗೆ ಬೆಳಕಾಗುವ ಸಲುವಾಗಿ ಕಣ್ಣನ್ನು ದಾನ ಮಾಡಬೇಕೆಂದು ಹುಬ್ಬಳ್ಳಿಯ ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ನೇತ್ರ ತಜ್ಞ ಡಾ. ಶ್ರಮಣ ಮಾಸೂರಕರ್ ಹೇಳಿದರು.
ಸ್ಥಳೀಯ ಲಯನ್ಸ್ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ, ಡಾ. ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಇಲ್ಲಿನ ಪ್ಯಾರಿಬಾಯಿ ಮೋತಿಲಾಲ ಪಾಲರೇಶಾ ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಡ ಕುಟುಂಬಗಳಿಗೆ ಸಹಾಯವಾಗಲೆಂದು, ಎಷ್ಟೋ ಜನರು ಕಣ್ಣಿನ ಚಿಕಿತ್ಸೆ ಮಾಡಿಸದೆ ದೃಷ್ಠಿಯನ್ನೇ ಕಳೆದುಕೊಂಡು ಉದಾಹರಣಗಳಿವೆ. ಇಂತಹ ಬಡವರಿಗಾಗಿ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿರುವ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅವರು ಹರ್ಷವ್ಯಕ್ತಪಡಿಸಿದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಲಯನ್ಸ್ ಸಂಸ್ಥೆಯ ಸಹÀಯೋಗದಲ್ಲಿ ವಿವಿಧ ಸಂಸ್ಥೆಗಳು ಜಂಟಿಯಾಗಿ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿ, ಕಣ್ಣಿನ ಸಂರಕ್ಷಣೆ ಮತ್ತು ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ಡಾ. ಮೊನಿಕಾ ಸಾವಂತ, ಡಾ. ಸಿ.ಜಿ ಅಗಡಿ, ಲಯನ್ಸ್ ಅಧ್ಯಕ್ಷ ಎಚ್.ಜಿ.ಗಾಡದ, ವೆಂಕಟೇಶ ಹಿರೇರಡ್ಡಿ, ವಿಜಯಕುಮಾರ ದಿಂಡವಾರ, ಬಿ.ಎಲ್.ಸಂಕನಗೌಡರ, ಎಂ.ಎಸ್.ಕೊಟ್ರನ್ನವರ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 130 ಜನರ ಕಣ್ಣುಗಳನ್ನು ತಪಾಸಣೆ ಮಾಡಲಾಯಿತು. ಅದರಲ್ಲಿ 30 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಸಲಹೆ ನೀಡಲಾಯಿತು.
ಪ್ರೊ. ಸುರೇಶ ಗುದಗನವರ ಸ್ವಾಗತಿಸಿದರು. ಕಾರ್ಯದರ್ಶಿ ಜಯಂತಿಲಾಲ ಪಾಲರೇಶಾ ನಿರೂಪಿಸಿದರು. ಆರ್.ಸಿ.ಪತ್ತೇಪೂರ ವಂದಿಸಿದರು.
ರಾಮದುರ್ಗ ಲಯನ್ಸ್ ಸಂಸ್ಥೆಯ ಪ್ಯಾರಿಬಾಯಿ ಮೋತಿಲಾಲ ಪಾಲರೇಶಾ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಡಾ.ಶ್ರವಣ ಮಾಸೂರಕರ್ ಉದ್ಘಾಟಿಸಿದರು.

loading...

LEAVE A REPLY

Please enter your comment!
Please enter your name here