ಅಕ್ರಮ ಚಿರೆಗಲ್ಲು ಗಣಿಗಾರಿಕೆಯ ಮೇಲೆ ದಾಳಿ: 2 ಪವರ್ ಟಿಲ್ಲರ್ ವಶ

0
30
loading...


ಅಂಕೋಲಾ : ಅಂಕೋಲಾದ ಶೆಟಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮವಾಗಿ ಚಿರೆಕಲ್ಲು ಗಣಿಗಾರಿಕೆಗೆ ಕೃಷಿ ಚಟುವಟಿಕೆಗಳಿಗೆ ಬಳಸಲು ಸರಕಾರ ನೀಡಿರುವ ಪವರ್ ಟಿಲ್ಲ್‍ರನ್ನು ಬಳಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಮೆರೆಗೆ ಕುಮಟಾ ಸಹಾಯ ಉಪ ವಿಭಾಗಾಧಿಕಾರಿ ಬಿ. ಶೋಭಾ ನೇತೃತ್ವದಲ್ಲಿ ತಹಶೀಲ್ದಾರರು ಸೋಮವಾರ ರಾತ್ರಿ ದಾಳಿ ನಡೆಸಿ ಎರಡು ಪವರ್ ಟಿಲ್ಲ್‍ರನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಶೆಟಗೇರಿ ಗ್ರಾಮದ ಮಾಣೇಶ್ವರ ಹಮ್ಮಣ್ಣಾ ನಾಯಕ ಇವರಿಗೆ ಸೇರಿದ ಜಮೀನುನಲ್ಲಿ ಅಕ್ರಮ ಚಿರೆಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಚೇತನ ರಾಧಾ ನಾಯಕ ಇವರು ಕೃಷಿ ಬಳಕೆಗೆಂದು ಪಡೆದ ಪವರ್ ಟಿಲ್ಲ್‍ರ್ ಅಕ್ರಮ ಗಣಿಗಾರಿಕೆಗೆ ಉಪಯೋಗಿಸಿಕೊಂಡ ಹಿನ್ನೆಲೆಯಲ್ಲಿ ಎರಡು ಪವರ್ ಟಿಲ್ಲ್‍ರನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ ತಹಶೀಲ್ದಾರ ವಿ.ಜಿ.ಲಾಂಜೇಕರ್ ಅವರು ವಶಪಡಿಸಿಕೊಳ್ಳಲಾಗಿದ್ದ ಎರಡು ಪವರ್ ಟಿಲ್ಲ್‍ರನ್ನು ಮತ್ತು ಆರೋಪಿಗಳ ವಿರುದ್ದ ದೂರನ್ನು ಪೊಲೀಸರಿಗೆ ನೀಡಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಕಂದಾಯ ನಿರೀಕ್ಷಕ ಅಮರ ನಾಯ್ಕ, ಇಬ್ಬರು ಪೊಲೀಸ ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲಾಧಿಕಾರಿಗಳು ಕೆಲ ತಿಂಗಳ ಹಿಂದೆ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದು, ಖಾಸಗಿ ಜಾಗದಲ್ಲಿಯೂ ಕೂಡ ಗಣಿಗಾರಿಕೆಗೆ ತಡೆಯೊಡ್ಡಿ ಸರಕಾರಕ್ಕೆ ರಾಜಧನ ನೀಡುವ ಕುರಿತಾಗಿ ಸರಕಾರಕ್ಕೆ ವರದಿ ಕೇಳಿದ್ದರು. ಅಲ್ಲಿಯ ತನಕ ಗಣಿಗಾರಿಕೆ ನಡೆಸಿದಂತೆ ಸೂಕ್ತ ಎಚ್ಚರಿಕೆ ನೀಡಿದ್ದರು. ಆದರೆ ಕೆಲವರು ಮಾಲ್ಕಿ ಜಮೀನಿನಲ್ಲಿ ಅಕ್ರಮ ಚಿರೆಕಲ್ಲು ಕೊರೆ ನಡಿಸಿ ಹೆಚ್ಚಿ ಬೆಲೆಗೆ ರಾತ್ರಿ ವೇಳೆಯಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಕಲ್ಲನ್ನು ಪಡೆಯುವ ಗ್ರಾಹಕರಿಗೆ ‘ತಾವು ಪೊಲೀಸ್ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ಹಪ್ತಾವನ್ನು ನೀಡುತ್ತಿದ್ದು, ಇದಕ್ಕಾಗಿಯೇ ಕಲ್ಲಿನ ದರವನ್ನು ಹೆಚ್ಚಳ ಮಾಡಬೇಕಾಗಿದೆ’ ಎಂದು ಕೆಲ ಚಿರೆಕಲ್ಲು ಕೊರೆ ಮಾಲಕರು ಹೇಳಿಕೊಳ್ಳುತ್ತಿದ್ದಾರೆ. ಕುಮಟಾ ಉಪ ವಿಭಾಧಿಕಾರಿಗಳೇ ಸ್ಥಳಕ್ಕೆ ಬೇಟಿ ಅಕ್ರಮ ಗಣಿಗಾರಿಕೆಗೆ ತಡೆ ದದ್ದು ಇದಕ್ಕೆ ಪುಷ್ಠಿ ನೀಡುವಂತಾಗಿದೆ.

loading...

LEAVE A REPLY

Please enter your comment!
Please enter your name here