ಉತ್ತಮ ಮೌಲ್ಯ ರೂಢಿಸಿಕೂಳ್ಳಿ : ಶಿದ್ದಲಿಂಗೆಶ್ವರಶ್ರೀ

0
26
loading...

ಚನ್ನಮ್ಮ ಕಿತ್ತೂರು : ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿದ್ದು ಮಂದಿರಗಳನ್ನು ಕಟ್ಟುವದಕ್ಕಿಂತ ಮೊದಲು ನಮ್ಮಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೂಳ್ಳುವುದು ಅವಶ್ಯವಾಗಿದೆ ಎಂದು ಚಿಪ್ಪಲಕಟಿ ್ಟ ಬ್ರಹನ್ಮಠದ ಶಿದ್ದಲಿಂಗೆಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುವಾರ ಪೇಟೆಯಲ್ಲಿರುವ ಶ್ರೀ ಮಾರುತಿ ಹಾಗೂ ಶ್ರೀ ಗಣಪತಿ ದೇವಸ್ಥಾನದಲ್ಲಿ ನವಗ್ರಹ ಮೂರ್ತಿ ಪ್ರತಿಷ್ಠಾಪನೆÀ ನೇರವೇಸಿ ಸಾನಿದ್ಯ ವಹಿಸಿ ಮಾತನಾಡಿದ ಅವರು, ಮೂದಲಿಗಿಂತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸುಂದರವಾದ ಮಂದಿರಗಳು ನಿರ್ಮಾಣವಾಗುತ್ತಿವೆ, ಆದರೆ ಜನರ ಮನಸ್ಸುಗಳು ಕೊಳೆಯಾಗುತ್ತಿದ್ದು ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕಾಗಿದೆ ಎಂದುರು.
ಕಾರ್ಯಕ್ರಮದಲ್ಲಿ ನಿಚ್ಚಣಿಕಿಯ ಪಂಚಾಕ್ಷರಿ ಸ್ವಾಮೀಜಿ, ರುದ್ರಯ್ಯಾ ಬೇಟಗೆರಿಮಠ, ಜಿ.ಪಂ ಮಾಜಿ ಉಪಾದ್ಯಕ್ಷ ಯಲ್ಲಪ್ಪ ವಕ್ಕುಂದ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಸಂಗೂಳ್ಳಿ, ದಿನೇಶ ವಳಸಂಗ, ಮಹಾಂತೇಶ ಗಿರನಟ್ಟಿ, ಬಾಬಣ್ಣ ನರಗುಂದ, ಹಾಗೂ ಬಸವೇಶ್ವರ ಯುವಕ ಮಂಡಳಿಯ ಸದಸ್ಯರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here