ಒಳ್ಳೆಯ ಭಾವನೆಯಿಂದಿ ಭಾಗ್ಯವಂತರಾಗುತ್ತಿರಿ: ಜಂಬಗಿ

0
22
loading...

ಹಾರೂಗೇರಿ 19: ಉತ್ತಮ ಕಾರ್ಯ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ, ಭಾವನೆ ಒಳ್ಳೆಯದಿದ್ದರೆ ಭಾಗ್ಯ ತಾನಾಗಿಯೇ ಹುಡುಕಿಕೊಂಡು ಬರುತ್ತದೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಜಗತ್ತಿನಲ್ಲಿಯೇ ಕೀರ್ತಿವಂತರಾಗಬೇಕೆಂದು ವಿಶ್ರಾಂತ ಪ್ರಾಚಾರ್ಯ ಬಿ.ಎ ಜಂಬಗಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಶ್ರೀ. ಎಮ್,ಬಿ ಪಾಟೀಲ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಜೈಜೀನೆಂದ್ರ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸನ್2015-16ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಮತ್ತು ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣದ ಕೊರತೆ ಇತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹಾರೂಗೇರಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿ ಪಟ್ಟಣವು ಶಿಕ್ಷಣ ಕಾಶಿಯಾಗಿ ಮಾರ್ಪಟ್ಟಿದೆ, ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ನೌಕರಿಗಾಗಿ ಕಲಿಯದೇ ವಿಶ್ವದಲ್ಲಿಯೇ ಭಾರತ ದೇಶವನ್ನು ಭವ್ಯದಿವ್ಯ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರು ಸಂಕಲ್ಪಿಸಬೇಕೆಂದು ಬಾಲಕೃಷ್ಣ ಜಂಬಗಿ ಕರೆ ನೀಡಿದರು.
ಸಮಾರಂಭದ ಗೌರವ ಅತಿಥಿಯಾಗಿ ಆಗಮಿಸಿದ್ಧ ಪುರಸಭೆ ಮುಖ್ಯಾಧಿಕಾರಿ ಜೆ.ವ್ಹಿ ಹಣ್ಣಿಕೇರಿ ಮಾತನಾಡಿ ಜೀವನದಲ್ಲಿ ಎಷ್ಟು ಹಣ ಸಂಪಾದಿಸುತ್ತಿಯೋ ಅನ್ನೋದು ಮುಖ್ಯವಲ್ಲ, ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದು ತುಂಬಾ ಮುಖ್ಯ, ಆನಿಟ್ಟಿನಲ್ಲಿ ಬಿಎಸ್‍ಡಬ್ಲ್ಯು ಹಾಗೂ ಎಮ್‍ಎಸ್‍ಡಬ್ಲ್ಯು ಕಲಿತ ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣ ಮಾಡುವ ಪ್ರಜ್ಞಾವಂತ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿ/ ನಿಯರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ಮಲಗೌಡ ಪಾಟೀಲ, ಸಂಸ್ಥೆಯ ಚೇರಮನ್ ಈರಣಗೌಡ ಪಾಟೀಲ, ಆರ್.ಜೆ ಪಾಟೀಲ, ಬಿ.ಜೆ ಆಲಗೂರ, ಎಸ್,ಎಮ್ ಪಾಟೀಲ, ಬಿ,ಎ ಕೊಂಡಾಳಿ, ಎಮ್,ಟಿ ವಗ್ಗೆ, ಜೆ,ಎ ಆಲಗೂರ, ಮಹಾಂತೇಶ ಮುಗಳಖೋಡ, ಎಸ್,ಎಮ್ ಗೌಡರ, ಅಮರ ಸಣ್ಣಕ್ಕಿನವರ, ಶ್ರೀಮತಿ ಎಮ್,ಜಿ ಸದಲಗಿ, ಕುಮಾರಿ ಎಮ್,ವಾಯ್ ದೊಡಮನಿ, ಆಶಾ ಧರ್ಮಟ್ಟಿ, ಪೂಜಾ ಕುರಾಣಿ, ವಿದ್ಯಾ ಬಿರಾದರ, ಕೀರ್ತಿ ಮಾಳಿ, ಹನುಮಂತ ಅಥಣಿ, ರಾಕೇಶ ಮಗದುಮ್ ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಸಿದ್ಧಾರೂಡ ಕೊಕಟನೂರ ಸ್ವಾಗತಿಸಿದರು, ಪ್ರಮೋದ ಚಂಡಕೆ ನಿರೂಪಿಸಿದರು, ರಾಕೇಶ ಕಾಂಬಳೆ ವಂದಿಸಿದರು.

loading...

LEAVE A REPLY

Please enter your comment!
Please enter your name here