ಕರ್ನಾಟಕ ಪೊಲೀಸ್ ಕಾಯ್ದೆ-1963

0
316
loading...

ರೌಡಿ ಶಿಟರ್ ಹೆಸರಿನಲ್ಲಿ ಪೊಲೀಸರಿಂದ ಹಣ ವಸೂಲಿ!

ಭರಮಗೌಡಾ ಪಾಟೀಲ
ಬೆಳಗಾವಿ 13: ಸಾಮಾನ್ಯವಾಗಿ ಪೊಲೀಸ್ ಠಾಣೆಗಳಿಗೆ ಹೋದಾಗ ಪೊಲೀಸ್ ಠಾಣೆಯ ಪ್ರವೇಶದ್ವಾರದಲ್ಲಿ ಪ್ರಮುಖವಾದ ಜಾಗೆಯಲ್ಲಿ ಎದ್ದು ಕಾಣುವಂತೆ ಎರಡು ಗುಂಪುಗಳನ್ನೊಳಗೊಂಡ ಛಾಯಾಚಿತ್ರಗಳಯುಳ್ಳ ವ್ಯಕ್ತಿಗಳ ಬೋರ್ಡಗಳನ್ನು ರೋಗ್ಸ್ ಗ್ಯಾಲರಿ ಎಂಬ ಶೀರ್ಷಿಕೆಯಡಿ ಕಾಣುತ್ತವೆ. ಅದೇ ರೀತಿ ಪೊಲೀಸರು ಸಾಮಾನ್ಯ ಜನರನ್ನು ಹೆದರಿಸಲು ರೌಡಿ ಶಿಟರ್ ಪಟ್ಟಿಗೆ ಸೇರಿಸುತ್ತವೆ, ಹುಷಾರ! ಎಂದು ಬೆದರಿಸುವುದು ಇಂದು ಸಾಮಾನ್ಯವಾಗಿ ಕಾಣುತ್ತೇವೆ.
ಇಲ್ಲಿ ರೌಡಿ ಶಿಟರ್‍ಗಳು ಎಂದರೆ ಏನು? ಯಾರನ್ನು ರೌಡಿ ಶಿಟರ್ ಪಟ್ಟಿಗೆ ಸೇರಿಸಲಾಗುತ್ತದೆ? ಏಕೆ ಸೇರಿಸಲಾಗುತ್ತದೆ? ಇದರ ಉದ್ದೇಶ ಮತ್ತು ಪರಿಣಾಮಗಳು ಏನು? ಎಂದು ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಮತ್ತು ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಇದನ್ನೆ ಕೆಲ ಪೊಲೀಸ್ ಸಿಬ್ಬಂದಿಗಳು ತಮ್ಮಗೆ ಇಷ್ಟ ಬಂದತೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಜನರಿಂದ ಕೇಳಿ ಬರುತ್ತಿವೆ.
ರೌಟಿ ಶಿಟರ್ ಸಂಬಂಧದಲ್ಲಿ ರಾಜ್ಯದಲ್ಲಿರುವ ಏಕೈಕ ಕಾಯ್ದೆ ಎಂದರೆ ಕರ್ನಾಟಕ ಪೊಲೀಸ್ ಕಾಯ್ದೆ-1963 ಈ ಕಾಯ್ದೆಯಡಿ ರೌಡಿ ಶಿಟರ್ ಅಥವಾ ಇಸ್ಟರಿ ಶೀಟರ್ಸ್ ಹೇಗೆ ತೆಗೆಯಬೇಕು, ಯಾವ ಸಂದರ್ಭದಲ್ಲಿ ತೆಗೆಯಬೇಕು ಮತ್ತು ಇದರ ಕಾರ್ಯಸೂಚಿಯ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ.
ಪ್ರಮುಖವಾಗಿ ರೌಡಿ ಶಿಟನ್ನು ತೆಗೆಯುವ ಮುಖ್ಯ ಉದ್ದೇಶ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪದೇ ಪದೇ ಬಾಗಿಯಾಗುವರನ್ನು ಮತ್ತು ಅದನ್ನು ಕಾಯಕವನ್ನಾಗಿ ಮಾಡಿಕೊಂಡಿರುವ ವ್ಯಕ್ತಿಯನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರೌಡಿ ಶಿಟನ್ನು ತೆಗೆಯುತ್ತಾರೆ.
ಜಿಲ್ಲೆಯಲ್ಲಿ ಈಗಾಗಲೇ ನೂರಾರು ಜನರ ಮೇಲೆ ರೌಡಿ ಶಿಟರ್ ಪ್ರಕರಣಗಳನ್ನು ದಾಖಲಾಗಿವೆ. ಕೆಲವೊಂದು ರೌಡಿ ಶಿಟ್ 10 ವರ್ಷಗಳು ಆಗಿದ್ದರು ಸಹ ಮುಂದುವರೆಸಲಾಗುತ್ತಿದೆ. ಆದರೆ ಈ ರೀತಿ ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ರೀತಿ ತೆಗೆಯಲ್ಪಟ್ಟ ರೌಡಿ ಶಿಟ್ 2 ವರ್ಷಗಳ ತನಕ ಮಾತ್ರ ಊರ್ಜಿತವಾಗಿರುತ್ತದೆ. ಈ ರೌಡಿ ಶಿಟ್ ಮುಂದುವರೆಸಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದು ಜನೇವರಿಯಿಂದ ಡಿಸೆಂಬರ ಕೊನೆಯವರೆಗೆ ಮುಂದುವರೆಸಬಹುದಾಗಿದೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವುದು ಅತೀ ಅವಶ್ಯವಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ರೌಟಿ ಶಿಟ್ ಮುಂದುವರೆಸಿದರೆ ಅದಕ್ಕೆ ಕಾನೂನು ಊರ್ಜಿತವಾಗುವುದಿಲ್ಲ ಎಂಬ ನಿಯಮಾವಳಿಗಳಿವೆ. ಒಮ್ಮೆ ರೌಡಿ ಶಿಟ್ ಪ್ರಾರಂಭಿಸಿದ ನಂತರ ಠಾಣಾಧಿಕಾರಿಗಳು ಅದನ್ನು ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಮುಕ್ತಾಯಗೊಳಿಸಬಹುದಾಗಿದೆ.
ಈ ರೌಡಿ ಶಿಟ್ ತೆಗೆವುದರಿಂದ ಸಂಬಂಧಪಟ್ಟ ಪೊಲೀಸರಿಗೆ ಈ ಕಾನೂನು ಬಾಹಿರ ಕೃತ್ಯಗಳಲ್ಲಿ ನಡೆಸುವ ವ್ಯಕ್ತಿಗಳ ಬಗ್ಗೆ ನಿರಂತರವಾಗಿ ಗಮನ ಹರಿಸಲು ಮತ್ತು ಅಂತಹ ವ್ಯಕ್ತಿಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸಹಕಾರಿಯಾಗಲೆಂಬ ಸದುದ್ದೇಶದಿಂದ ಈ ರೌಟಿ ಶಿಟರ್ ತೆಗೆಯುವ ಅಧಿಕಾರವನ್ನು ಪೊಲೀಸ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಜಿಲ್ಲೆಯ ಕೆಲವೊಂದು ಪೊಲೀಸ್ ಸಿಬ್ಬಂದಿಗಳು ಇದನ್ನೆ ಬಂಡವಾಳ ಮಾಡಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಕಾಡುತ್ತಿವೆ.
==>
ರೌಡಿ ಶಿಟ್ ಹೆಸರಿನಲ್ಲಿ ಜನರನ್ನು ಹೆದರಿಸಿ ಹಣ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳು. ಪೊಲೀಸ್ ಇಲಾಖೆಯಲ್ಲಿನ ನಿಷ್ಠಾವಂತ ಹಾಗೂ ಪ್ರಾಮಾಣಿಕ ಸಿಬ್ಬಂದಿಗಳ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಇಂತಹ ಸಿಬ್ಬಂದಿಗಳಿಗೆ ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡಾ ಅವರು ಇತ್ತ ಕಡೆ ಗಮನ ಹರಿಸಿಬೇಕಾಗಿದೆ.
==>
ಈ ರೌಡಿ ಶಿಟ್ ತೆಗೆವುದರಿಂದ ಸಂಬಂಧಪಟ್ಟ ಪೊಲೀಸರಿಗೆ ಈ ಕಾನೂನು ಬಾಹಿರ ಕೃತ್ಯಗಳಲ್ಲಿ ನಡೆಸುವ ವ್ಯಕ್ತಿಗಳ ಬಗ್ಗೆ ನಿರಂತರವಾಗಿ ಗಮನ ಹರಿಸಲು ಮತ್ತು ಅಂತಹ ವ್ಯಕ್ತಿಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸಹಕಾರಿಯಾಗಲೆಂಬ ಸದುದ್ದೇಶದಿಂದ ಈ ರೌಟಿ ಶಿಟರ್ ತೆಗೆಯುವ ಅಧಿಕಾರವನ್ನು ಪೊಲೀಸ ಅಧಿಕಾರಿಗಳಿಗೆ ನೀಡಲಾಗಿದೆ.

loading...

LEAVE A REPLY

Please enter your comment!
Please enter your name here