ಕಾರಾಗೃಹದ ಮೊಬೈಲ್ ಜಾಮರ್ ವ್ಯಾಪ್ತಿ ಕಡಿಮೆಗೆ ರಹವಾಸಿಗಳ ಒತ್ತಾಯ

0
21
loading...

ಬೆಳಗಾವಿ:17 ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರನಿಂದ ಸುತ್ತಮುತ್ತಲಿನ ನಿವಾಸಗಳಲ್ಲಿ ಮೊಬೈಲ್ ಸೇವೆ ಸ್ಥಗೀತಗೊಂಡಿದೆ ಕೂಡಲೇ ಅದನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಹಿಂಡಲಗಾ, ಗಣೇಶಪುರ, ವಿಜಯನಗರ, ಸುಳಗಾ, ಮಣ್ಣೂರ ಹಾಗೂ ಅಂಬೇವಾಡಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಕೇಂದ್ರ ಕಾರಾಗೃಹ ಅಧಿಕ್ಷಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುರಕ್ಷತೆಯ ಅನಿವಾರ್ಯದಿಂದ ಮೊಬೈಲ್ ಜಾಮರನ್ನು ಅಳವಡಿಸಲಾಗಿದೆ. ಕಳೆದ 15 ದಿನಗಳಿಂದ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐಡಿಯಾ, ಬಿಎಸ್‍ಎನ್‍ಎಲ್ ಕಂಪೆನಿಯ ಮೊಬೈಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮೊಬೈಲ್ ಸಂಪರ್ಕ ಸೇವೆ ಬಾರದ ಹಿನ್ನೆಲೆಯಲ್ಲಿ ಅನೇಕ ವ್ಯಾಪಾರಸ್ತರು, ಕಾರ್ಮಿಕರು ಹಾಗೂ ಗುತ್ತಿಗೆದಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತದ ಸಂದರ್ಭದಲ್ಲಿ, ಹೆರಿಗೆ, ರೋಗಿಗಳಿಗೆ ತರ್ತು ಪರಿಸ್ಥಿತಿಯಲ್ಲಿ ಅಂಬುಲೇನ್ಸ್ ಸೇವೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸುರಕ್ಷತೆಯ ನಿಟ್ಟಿನಲ್ಲಿ ಕೇಂದ್ರ ಕಾರಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್ ವ್ಯಾಪ್ತಿಯನ್ನು ಕಡಿಮೆ ಮಾಡದಿದ್ದರೆ ಮುಂಬರು ದಿನಗಳಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಕೇಶ ಮೂಲಿಮನಿ, ಹನುಮಂತ ರಾಚಟನೂರ, ದೇವಪ್ಪ ಮೂಗಿ, ಯಮನೇಶ ಕಾತರಕಿ, ಜಾವೇದ ಮುಲ್ಲಾ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here