ಕಾರ್ಮಿಕರ ಮೇಲಿನ ದೌಜ್ರ್ಯನ್ಯವನ್ನು ಖಂಡಿಸಿದ ಮಾನಸಯ್ಯಾ

0
20
loading...


ಧಾರವಾಡ,01: ಕಳೆದ 6 ವರ್ಷಗಳಿಂದ ಟಾಟಾ ಮಾರ್ಕೊಪೆÇೀಲು ಕಂಪನಿ ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಕಾರ್ಮಿಕರಿಗೆ ಸಂಘ ಸ್ಥಾಪಿಸಲು ಅವಕಾಶ ನೀಡಿಲ್ಲ ಇದನ್ನು ವಿರೋಧಿಸಿ ಕಾರ್ಮಿಕರಿಗೆ ಸಂಘ ಸ್ಥಾಪಿಸಲು ಅವಕಾಶ ನೀಡುವುದು ಸೇರಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕ್ರಾಂತಿಕಾರಿ ಕಾಮಗಾರ ಯೂನಿಯನ್ (ಟಿಯುಸಿಐ) ವತಿಯಿಂದ ಶಹರದಲ್ಲಿ ಪ್ರತಿಭಟನೆ ನಡೆಸಿ ನಂತರ ಆರ್‍ಎಲ್‍ಎಸ್ ಶಾಲಾ ಮೈದಾನದಲ್ಲಿ ಜಾಗೃತ ಸಮಾವೇಶ ನಡೆಸಿತು.
ಟಿಯುಸಿಐ ರಾಜ್ಯ ಸಮಿತಿ ಅಧ್ಯಕ್ಷ ಆರ್.ಮಾನಸಯ್ಯಾ ಮಾತನಾಡಿ, ರಾಜ್ಯ ಕಾರ್ಮಿಕ ಸಂಘಟನೆ ತನ್ನ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿದ್ದ ರ್ಯಾಲಿಯನ್ನು ತಡೆಯಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಪ್ರಯತ್ನ ಮಾಡಿರುವುದು ದುರಂತದ ಸಂಗತಿಯಾಗಿದೆ. ಆದರೆ ಉಚ್ಚನ್ಯಾಯಾಲಯ ಕಾರ್ಮಿಕರ ಮೇಲಿನ ದೌಜ್ರ್ಯನ್ಯವನ್ನು ಖಂಡಿಸಿ, ರ್ಯಾಲಿ ನಡೆಸಲು ಅನುಮತಿ ನೀಡಿರುವುದು ಶ್ಲಾಘನೀಯ ಎಂದರು.
ನಾವು ಪ್ರತಿಭಟನೆ ನಡೆಸಲು ಉದ್ದೇಶಿಸಿದ ರ್ಯಾಲಿಯ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್‍ಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಕ್ರಮ ಖಂಡಿಸಿ ನಮ್ಮ ಸಂಘಟನೆ ಹೈಕೋರ್ಟ್‍ಗೆ ಮೊರೆ ಹೋದೇವು. ಆದರೆ ಉಚ್ಛನ್ಯಾಯಾಲಯ ನಮ್ಮ ನ್ಯಾಯಯುತ ಹೋರಾಟವನ್ನು ಪರಿಗಣಿಸಿ ಭಾನುವಾರ ನಿಗಯಾಗಿದ್ದ ರ್ಯಾಲಿ ನಡೆಸಲು ಅವಕಾಶ ನೀಡಿದೆ ಎಂದರು.
ಟಿಯುಸಿಐ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಂಜಯ್ ಶಿಂಗ್ವೀ ಮಾತನಾಡಿ, ಕಾರ್ಮಿಕರಿಗೆ ತಮ್ಮದೇಯಾದ ಸಂಘ ಸ್ಥಾಪಿಸಿಕೊಂಡು ತಮ್ಮ ಬೇಡಿಕೆಗಳನ್ನು ಸರಕಾರ ಹಾಗೂ ಕಂಪನಿಯ ಮುಂದೆ ಇಡುವ ಅಧಿಕಾರವಿದೆ. ಆದರೆ ಕಂಪನಿಗಳಲ್ಲಿ ಕಾರ್ಮಿಕರು ಸಂಘ ಸ್ಥಾಪಿಸಲು ಇರುವ ಅಧಿಕಾರವನ್ನು ರಾಜ್ಯ ಸರಕಾರ ಕಸಿದುಕೊಂಡಿದೆ ಎಂದರು.
ರಾಜ್ಯಾದ್ಯಂತ ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ಭದ್ರತೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಾರ್ಮಿಕರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ಕಾನೂನುಬಾಹಿರವಾಗಿ ವಜಾಗೊಳಿಸಿದ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅಮಾನತ್ತುಗೊಳಿಸಿದ 19 ಕಾರ್ಮಿಕರ ಅಮಾನತ್ತು ಆದೇಶ ಹಿತೆಗೆದು ಕೊಳ್ಳಬೇಕು. ಮಾಸಿಕ ರೂ.1136ಗಳಂತೆ ಪ್ರತಿಯೊಬ್ಬ ಕಾರ್ಮಿಕನಿಗೆ 10 ತಿಂಗಳ ಬಾಕಿ ವೇತನ ನೀಡಬೇಕು. ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಉಚಿತ ಕ್ಯಾಂಟಿನ್, ಸಮವಸ್ತ್ರ, ಆರೋಗ್ಯ ಸುರಕ್ಷೆ, ಸಾರಿಗೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಟಿಯುಸಿಐ ಸಂಘಟನೆಯ ಅಂಬರೀಷ ಪಾಟೀಲ, ರಾಜ್ಯ ಕಾರ್ಯದರ್ಶಿ ಚನ್ನಪ್ಪ ಕೋಟ್ರೆಕಿ, ರಾಜಶೇಖರ, ಭೀಮರಾಯ, ಆರ್.ರಡ್ಡಿ , ರಾಮಕಿರಣ ಸೇರಿದೆಂತೆ ಟಾಟಾ ಮಾರ್ಕೊಪೆÇೀಲೊ ಹಾಗೂ ವಿವಿಧ ಕಂಪನಿಯ ಕಾರ್ಮಿಕರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here