ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ನೀಡಿದ್ದಾರೆ

0
30
loading...

ಫಸಲ್ ಬಿಮಾ ಯೋಜನೆ ಸಮಾವೇಶದಲ್ಲಿ ಬಿಎಸ್‍ವೈ ಹೇಳಿಕೆ
ಬೆಳಗಾವಿ:27 ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಮೇಲೆ ಕಾಂಗ್ರೆಸ್ ಮುಖಂಡರು ಬೇಜವಾಬ್ದಾರಿ ಹೇಳಿಕೆ ನೀಡಿದರೂ 18 ತಿಂಗಳುಗಳ ಅವಧಿಯಲ್ಲಿ ಜನಪರ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಶನಿವಾರ ನಗರದ ಸಾವಗಾಂವ ರಸ್ತೆಯ ಸಮಿಪದ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೇಂದ್ರ ಸರಕಾರದ ಫಸಲ್ ಬಿಮಾ ಯೋಜನೆ ಸಮಾವೇಶದಲ್ಲಿ ಮಾತನಾಡಿದರು. 21ನೇ ಶತಮಾನ ಭಾರತೀಯರ ಶತಮಾನ ಎಂದು ಸಂಕಲ್ಪತೊಟ್ಟು ಪ್ರಧಾನಿ ನರೇಂದ್ರ ಮೋದಿ ಹೋರಾಟ ನಡೆಸುತ್ತಿದ್ದಾರೆ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ನಂತರ ನೇಗಿಲಯೋಗಿಯ ಬಗ್ಗೆ 10 ವರ್ಷಗಳ ಆಡಳಿತ ನಡೆದ ಕಾಂಗ್ರೆಸ್ ಸರಕಾರ ಚಿಂತನೆ ಮಾಡದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮೊದಲಬಾರಿಗೆ ರೈತರ ಪರವಾಗಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ್ಕೆ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 600 ಕೋಟಿ ರೂ.ಗಳನ್ನು ಅನುದಾನ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಖಾತೆ ಹಣ ಹಾಕದೆ ತನ್ನ ಖಾತೆಗೆ ಹಾಕಿಕೊಂಡಿದ್ದಾನೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್‍ನ ರಾಹುಲ ಗಾಂಧಿ ಬಚ್ಚಾ ಇದ್ದಿರಿ ಲೋಕಸಭೆಯ ಸಂಸತನಲ್ಲಿ ಮಾತನಾಡಲು ಬಿಜೆಪಿ ಮುಖಂಡರು ಅವಕಾಶ ನೀಡುತ್ತಿಲ್ಲ ಎಂದು ಬೊಟ್ಟು ಮಾಡಿ ತೋರಿಸುತ್ತಿರಿ ಅದರ ಬದಲು ನಿಮ್ಮ ನಾಯಕರ ಸಮಯವನ್ನು ತೆಗೆದುಕೊಂಡು ಒಬ್ಬರೇ ಮಾತನಾಡಿ ಎಂದು ಚಾಟಿ ಎಟು ಬಿಸಿದರು.
ಕೇಂದ್ರ ರಾಸಾಯನಿಕ ಖಾತೆಯ ಸಚಿವ ಅನಂತಕುಮಾರ ಮಾತನಾಡುತ್ತ, ಕರ್ನಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಜಿಲ್ಲಾ, ತಾಲೂಕಾ ಪಂಚಾಯತ ಚುನಾವಣೆ ಮುಗಿದ ನಂತರ ಸರಕಾರದ ಕ್ಷಣಗಣನೆಗೆ ಪ್ರಾರಂಭವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೈತ ವಿರೋಧಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ಸರಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ಮಾಡಲಾಗದ ರೈತ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ದುರಾಡಳಿತದ ವಿರುದ್ಧ ರೈತರು ಚಂಡಮಾರುತ ನಿರ್ಮಾಣ ಮಾಡಿ ಕಾಂಗ್ರೆಸ್ ಸರಕಾರವನ್ನು ಬೇರು ಸಮೇತ ಕಿತ್ತುಹಾಕುವ ಸಂಕಲ್ಪ ತೊಡಬೇಕಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿ.ವಿ.ಸದಾನಂದಗೌಡಾ, ಸಿ.ಎಮ್.ಸಿದ್ದೇಶ್ವರ, ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ, ಸಂಸದರಾದ ಸುರೇಶ ಅಂಗಡಿ, ಡಾ. ಪ್ರಭಾಕರ ಕೋರೆ, ಕೆ.ಎಸ್.ಈಶ್ವರಪ್ಪ, ಮುರುಳಿಧರರಾವ್ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here