ಕೇಂದ್ರ ರೈಲ್ವೆ ಬಜೆಟ್ ಜನಪರವಾಗಿದೆ: ಸಂಸದ ಸುರೇಶ ಅಂಗಡಿ

0
19
loading...

ಬೆಳಗಾವಿ:25 ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೆ ಕೇಂದ್ರ ಸಚಿವ ಸುರೇಶ ಪ್ರಭು ಅವರು ಮಂಡಿಸಿದ ಎರಡನೇ ರೈಲ್ವೆ ಬಜೆಟ್ ಜನಪರವಾಗಿದೆ ಎಂದು ಸಂಸದ ಸುರೇಶ ಅಂಗಡಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಪ್ರಸಕ್ತ ಬಜೆಟ್‍ನಲ್ಲಿ ಒಟ್ಟು ಮೊತ್ತ 1.21 ಕೋಟಿರೂ. ಗಳಲ್ಲಿ ಹೊಸದಾಗಿ ಮೂರು ಸೂಪರ್ ಪಾಸ್ಟ್ ರೈಲುಗಳನ್ನು ಘೋಷಿಸಲಾಗಿದೆ. 2019ರ ವೇಳೆಗೆ ಜನಪರ ಸೇವೆಗೆ ಲಭ್ಯವಾಗುವ ಉತ್ತರ, ದಕ್ಷಿಣ – ಪೂರ್ವ, ಪಶ್ಚಿಮವಲಯಗಳ ಸಕರಕು ಸಾಗಾಣಿ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಇತಿಹಾಸದಲ್ಲಿಯೇ ಮೊದಲಬಾರಿಗೆ 1600 ಕಿ.ಮೀ ರೈಲ್ವೆ ವಿದ್ಯುತೀಕರಣ ಮಾಡಿಸಲಾಗಿದೆ. ವಿದ್ಯುತೀಕರಣಕ್ಕೆ ಆಧ್ಯತೆ ನೀಡಿ ಎರಡು ಸಾವಿರ ವಿದ್ಯುತೀಕರಣದ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here