ಗ್ರಾಹಕರಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿದ ಸುರಭಿ ಸೊಸೈಟಿ

0
28
loading...


ಅಂಕೋಲಾ : ಕಳೆದ 16 ವರ್ಷಗಳಿಂದ ಪಟ್ಟಣದ ಅಂಬಾರಕೋಡ್ಲ ರಸ್ತೆಗೆ ಹೊಂದಿಕೊಂಡಿರುವ ಸುರಭಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿ., ಅಂಕೋಲಾ ನೂರಾರು ಗ್ರಾಹಕರಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿ ಕಳೆದ 3 ತಿಂಗಳುಗಳಿಂದ ಬಾಗಿಲು ಮುಚ್ಚಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪಿಗ್ಮಿ, ಮುದ್ದತ್ತು ಠೇವಣಿ ಸೇರಿದಂತೆ ಅನೇಕ ಖಾತೆಗಳಲ್ಲಿ ಹಣ ತೊಡಗಿಸಿದ ಸುಮಾರು 80 ಮಂದಿ ಗ್ರಾಹಕರಿಗೆ 5,17,300 ರೂ. ಈ ಸೊಸೈಟಿಯಲ್ಲಿ ಪಂಗನಾಮವಾಗಿರುವ ಕುರತು ಬಳಲೆ ಗ್ರಾಮದ ಕೆಲ ಗ್ರಾಹಕರು ಮಂಗಳವಾರ ಪೊಲೀಸ ಠಾಣೆಗೆ ಬಂದು ನ್ಯಾಯ ಒದಗಿಸುವಂತೆ ಕೋರಿದರು.

ಸೊಸೈಟಿಯ ಗ್ರಾಹಕ ಬೊಮ್ಮಯ್ಯ ಜಾನು ಹರಿಕಂತ್ರ ಅವರು ಮಾತನಾಡಿ ನಾನು 50 ಸಾವಿರ ರೂ. ಎಪ್‍ಡಿ ಇಟ್ಟಿರುತ್ತೇನೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಠೇವಣಿ ಅವಧಿ ಮುಗಿದಿರುತ್ತದೆ ಆದರೆ ಸೊಸೈಟಿಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲಾ. ನಂತರ ಸೊಸೈಟಿಗೆ ಹೋಗಿ ವಿಚಾರಿಸುವ ವೇಳೆ ಸೊಸೈಟಿ ಬಾಗಿಲು ಮುಚ್ಚಿರುವುದರಿಂದ ನನಗೆ ಅನ್ಯಾಯವಾಗಿರುವ ಕುರಿತು ಉಪ-ನಿಬಂಧಕರಿಗೆ 18.01.2016 ರಂದು ಸೊಸೈಟಿ ವಿರುದ್ದ ದೂರು ನೀಡಿರುತ್ತೇನೆ. ಇಲ್ಲಿಯ ತನಕ ಯಾವುದೇ ಮಾಹಿತಿ ನೀಡಿಲ್ಲದ ಕಾರಣ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಸ್ಥಿತಿ ಬಂದಿತು ಎಂದರು. ಅಲ್ಲದೇ ಪಿಗ್ಮಿ ಸಂಗ್ರಾಹಕ ಬಾಬು ಹನುಮಾ ಆಗೇರನಿಗೆ ಪಿಗ್ಮಿ ಗ್ರಾಹಕರು ಸೊಸೈಟಿಯ ಬಗ್ಗೆ ವಿಚಾರಿಸಿದ್ದಾಗ ಸ್ಪಷ್ಟವಾದ ಮಾಹಿತಿ ನೀಡಿಲದ ಕಾರಣದಿಂದ ಸೊಸೈಟಿ ಗ್ರಾಹಕರಿಗೆ ಅವಿಶ್ವಾಸಕ್ಕೆ ಕಾರಣವಾಯಿತು ಎನ್ನಲಾಗಿದೆ.

ಗ್ರಾಹಕರ ಆಹಾವಲು ಕೇಳಿದ ಸಿ.ಪಿ.ಐ. ಅರುಣಕುಮಾರ ಕೋಳೂರ ಅವರು ಸೊಸೈಟಿಯ ಅಧ್ಯಕ್ಷ ನಾರಾಯಣ ರಾಮ ನಾಯಕ ಬೆಳಸೆ ಅವರನ್ನು ಕರೆಯಿಸಿ ವಿಚಾರಿಸಿದಾಗ ಈ ಅವ್ಯವಹಾರದಲ್ಲಿ ಸೊಸೈಟಿಯ ವ್ಯವಸ್ಥಾಪಕ ಸೂರ್ವೆ ಗ್ರಾಮದ ರತೀಶ ಚಂದ್ರಹಾಸ ಹಿಚ್ಕಡ ಅವರೇ ನೇರ ಹೊಣೆಗಾರರಾಗಿರುತ್ತಾರೆ. ಈಗಾಗಲೇ ಸಹಾಯಕ ನಿಬಂಧಕ ಕುಮಟಾ ಅವರು ನಮ್ಮ ಎಲ್ಲಾ ನಿರ್ದೇಶಕರಾದ ವೆಂಕಟ್ರಮಣ ವಿಠೋಬಾ ನಾಯಕ, ಉದಯ ಹಮ್ಮಣ್ಣ ನಾಯಕ, ಹೊನ್ನಪ್ಪ ಶಿವಪ್ಪ ನಾಯಕ ಮೊಗಟಾ, ಪ್ರಕಾಶ ಗೌಡ ಹಡವ, ಸುಪರ್ಣಾ ವೆಂಕಟ ನಾಯಕ, ಮಂಜುಳಾ ರಾಮ ನಾಯಕ, ಪ್ರಭಾಕರ ಗೌಡ, ರಾಮಚಂದ್ರ ಗೌಡ, ಹೇಮಂತ ದೇವು ಆಗೇರ ಇವರೆಲ್ಲರಿಗೂ ಬುಧವಾರ ಪಿ.ಎಲ್.ಡಿ.ಬ್ಯಾಂಕಿನಲ್ಲಿ ಸಭೆ ಕರೆದಿರುವ ಕುರಿತು ನೋಟಿಸ್ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿಯ ಗ್ರಾಹಕರಾದ ಸತೀಶ ಗೌಡ, ಮಾಲಿನಿ ಗೌಡ, ಮಹಾಬಲೇಶ್ವರ ಗುನಗಾ, ರಾಜು ನಾಯಕ, ಗಿರಿಜಾ ಗುನಗಾ ಸೇರಿದಂತೆ ಇತರರಿದ್ದರು.

ಸುರಭಿ ಸೊಸೈಟಿಯ ಗ್ರಾಹಕ ಬೊಮ್ಮಯ್ಯ ಹರಿಕಂತ್ರ ಅವರು ಉಪ-ನಿಬಂಧಕ ಕಾರವಾರ ಅವರಿಗೆ ಸೊಸೈಟಿಯಲ್ಲಿ ಅವ್ಯವಹಾರದ ಕುರಿತು 18.01.2016 ರಂದು ದೂರು ನೀಡಿರುವ ಈ ಹಿನ್ನೆಲೆಯಲ್ಲಿ ಉಪ-ನಿಬಂಧಕರು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ 08.02.2016 ರಂದು ಆದೇಶ ನೀಡಿದರು. ಈಗಾಗಲೇ ಅಂಕೋಲಾ ಸಹಕಾರಿ ಅಭಿವೃದ್ಧಿ ಅಧಿಕಾರಿವರಿಗೆ ಸೊಸೈಟಿ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿ ದ್ದೇನೆ. ಯಾವುದೇ ರೀತಿಯಲ್ಲಿ ಹಣ ತೊಡಗಿಸಿದ ಗ್ರಾಹಕರಿಗೆ ಸೊಸೈಟಿಯಿಂದ ಅನ್ಯಾಯವಾದಂತೆ ನೋಡಿ ಕೊಳ್ಳುತ್ತೇನೆ.

loading...

LEAVE A REPLY

Please enter your comment!
Please enter your name here