ಛತ್ರಪತಿ ಶಿವಾಜಿ ಅವರ ಜನ್ಮದಿನ ಆಚರಣೆ

0
25
loading...


ಹಳಿಯಾಳ : ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಜನ್ಮದಿನದ ಅಂಗವಾಗಿ ಮರಾಠಾ ಭವನ, ತಾಲೂಕಾ ಕಚೇರಿ ಹಾಗೂ ಜೀಜಾಮಾತಾ ಮಹಿಳಾ ಸಂಘದ ವತಿಯಿಂದ ಪ್ರತ್ಯೇಕವಾಗಿ ಕಾರ್ಯಕ್ರಮಗಳು ಜರುಗಿದವು.
ಮರಾಠಾ ಪರಿಷತ್ ವತಿಯಿಂದ ಮರಾಠಾ ಭವನದಲ್ಲಿ ಬೆಳಿಗ್ಗೆ ಬಾಲಶಿವಾಜಿಗೆ ಸಾಂಪ್ರದಾಯಿಕವಾಗಿ ತೊಟ್ಟಿಲಲ್ಲಿ ಹಾಕಲಾಯಿತು. ಜೀಜಾಮಾತಾ ಮಹಿಳಾ ಸಂಘದ ಕಚೇರಿ ಆವರಣದಲ್ಲಿಯೂ ಸಹ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬಾಲಶಿವಾಜಿಗೆ ತೊಟ್ಟಿಲು ತೂಗಿದರು. ತಾಲೂಕಾ ಕಚೇರಿಯಲ್ಲಿ ತಾಲೂಕಾಡಳಿತದಿಂದ ಏರ್ಪಡಿಸಲಾದ ಸಮಾರಂಭದಲ್ಲಿ ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರು ಶಿವಾಜಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ತಾಲೂಕಾ ಕಚೇರಿಯಲ್ಲಿ:- ತಹಶೀಲ್ದಾರ ವಿದ್ಯಾಧರ ಗುಳಗುಳಿ ರವರು ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಿ ಶಿವಾಜಿ ಮಹಾರಾಜರ ಜೀವನ ಸಾಧನೆ ಅನುಕರಣೀಯವಾಗಿದೆ ಎಂದರು. ನಿವೃತ್ತ ಶಿಕ್ಷಕ ಆರ್.ಎಸ್. ಅರಸಿನಗೇರಿ ಅವರು ಶಿವಾಜಿ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ರವೀಂದ್ರ ಮೆಟಗುಡ್ಡ, ಹಿರಿಯ ಅಧ್ಯಾತ್ಮಿಕ ಚಿಂತಕ ಎಂ.ಎನ್. ತಳವಾರ, ಜೀಜಾಮಾತಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಎನ್.ಎಸ್. ಜಿವೋಜಿ, ಲಯನ್ಸ್ ಕ್ಲಬ್‍ನ ಜಿ.ಡಿ. ಗಂಗಾಧರ, ಶಿರಸ್ತೇದಾರ ಅನಂತ ಚಿಪ್ಪಲಕಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಮರಾಠಾ ಭವನದಲ್ಲಿ:- ಬಾಲಶಿವಾಜಿಗೆ ಸಾಂಪ್ರದಾಯಿಕವಾಗಿ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮದಲ್ಲಿ ಅಂಬಾಭವಾನಿ ಮರಾಠಾ ಮಹಿಳಾ ತಾಲೂಕಾ ಘಟಕದ ಅಧ್ಯಕ್ಷೆ ವಜ್ರೇಶ್ವರಿ ಶೆಟವಣ್ಣವರ, ಲಕ್ಷ್ಮೀ ಗೋವಿಂದ ದಲಾಲ, ಚಂದನ ನಾಗೇಂದ್ರ ಜಿವೋಜಿ, ಜ್ಯೋತಿ ಸಿ. ಗರಗ, ಜನುಬಾಯಿ ರವಿದಾಸ ಸುಂಟಕಾರ ಮೊದಲಾದವರು ಪಾಲ್ಗೊಂಡಿದ್ದರು. ನಂತರ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿರವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿಠ್ಠಲ ಗೌಡಾ, ಎನ್.ಎಸ್. ಜಿವೋಜಿ, ಗೋವಿಂದ ದಲಾಲ, ಅಪ್ಪಾಜಿ ಶಾಪುರಕರ, ಪ್ರಕಾಶ ಫಾಕ್ರೆ, ಕೃಷ್ಣಾ ಶಾಪುರಕರ, ಮಂಜುನಾಥ ಅಳ್ನಾವರಕರ, ಗಣಪತಿ ಕರಂಜೇಕರ, ರವಿದಾಸ ಸುಂಟಕಾರ, ಕಿರಣ ಶೆಟವಣ್ಣವರ ಮೊದಲಾದವರು ಪಾಲ್ಗೊಂಡಿದ್ದರು. ನಂತರ ಅಶ್ವಾರೂಢ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮರಾಠಾ ಭವನದಲ್ಲಿ ಶಿವಾಜಿ ಜನ್ಮದಿನ ಸಮಾರಂಭ ನಡೆಸಲಾಯಿತು.
ಆದಿಶಕ್ತಿ ಮಠದ ಶ್ರೀ ಕೃಷ್ಣಾನಂದ ಸ್ವಾಮೀಜಿ, ಯಡೋಗಾ ಸಿದ್ಧಾರೂಢ ಮಠದ ಸನ್ಯಾಸಿನಿ ನಿರ್ಮಲಾನಂದ ದೇವಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಾತ್ಮಿಕ ಚಿಂತಕ ವಿಠ್ಠಲ ಗೌಡಾ ಶಿವಾಜಿ ಜೀವನದ ಬಗ್ಗೆ ಪ್ರವಚನ ನೀಡಿದರು. ಹಿರಿಯರಾದ ರುದ್ರಗೌಡಾ ಪಾಟೀಲ, ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಎನ್.ಎಸ್. ಜಿವೋಜಿ, ತಾಲೂಕಾಧ್ಯಕ್ಷ ಗೋವಿಂದ ದಲಾಲ, ಅಂಬಾಭವಾನಿ ಮರಾಠಾ ಮಹಿಳಾ ತಾಲೂಕಾ ಘಟಕದ ಅಧ್ಯಕ್ಷೆ ವಜ್ರೇಶ್ವರಿ ಶೆಟವಣ್ಣವರ ವೇದಿಕೆಯಲ್ಲಿದ್ದರು. ಭಾವನಾ ಕೋರ್ವೆಕರ ಪ್ರಾರ್ಥನೆ ಹೇಳಿದರು. ರವಿ ಸುಂಟಕಾರ ಸ್ವಾಗತಿಸಿದರು. ಪ್ರಕಾಶ ಫಾಕ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜು ಮಿಶ್ಯಾಳಿ ಕಾರ್ಯಕ್ರಮ ನಿರೂಪಿಸಿದರು.
ಜೀಜಾಮಾತಾ ಸಂಘದ ವತಿಯಿಂದ:- ಮಂಗಲಾ ಪೀತಾಂಬರ ಕಶೀಲಕರ ಅಧ್ಯಕ್ಷತೆಯಲ್ಲಿರುವ ಜೀಜಾಮಾತಾ ಮಹಿಳಾ ಸಂಘದ ವತಿಯಿಂದ ಅವರ ಕಾರ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮಂಗಲಾ ಕಶೀಲಕರ, ಪದಾಧಿಕಾರಿಗಳಾದ ಲತಾ ಅಸುಕರ, ಭಾರತಿ ಬಿರ್ಜೆ, ತನುಜಾ ಕಾಮ್ರೇಕರ, ಶಾಂತಾ ಹಿರೇಕರ, ಸುರೇಖಾ ಫಾಕ್ರೆ, ಡಾ. ಶ್ರೀದೇವಿ ವಾಡ್ಕರ, ಲಕ್ಷ್ಮೀ ಗುಂಡುಪ್ಕರ, ಭಾರತಿ ಘೇವಡಿ, ಪ್ರೇಮಾ ಬೋಕಡೆ, ಸುರೇಖಾ ಗುನಗಾ ಹಾಗೂ ಅಪೇಕ್ಷಾ ಎನ್‍ಟಿಸಿಯ ಸುವರ್ಣಾ ಮಾದರ ಮೊದಲಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here