ಜಿಪಂ,ತಾಪಂ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

0
21
loading...


ಕಾರವಾರ : ಉತ್ತರ ಕನ್ನಡ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರ ಆಯ್ಕೆಗಾಗಿ ಶನಿವಾರ ಮತದಾನ ನಡೆಯಲಿದ್ದು ಚುನಾವಣೆಗೆ ಸಂಪೂರ್ಣ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
1143 ಮತಗಟ್ಟೆಗಳು:ಜಿಲ್ಲೆಯಲ್ಲಿ 4,22,550 ಪುರುಷ ಹಾಗೂ 4,10,835 ಮಹಿಳಾ ಮತದಾರರು ಸೇರಿ 8,33,385 ಮತದಾರರಿದ್ದು ಮತದಾನಕ್ಕೆ 1143 ಮತಗಟ್ಟೆಗಳನ್ನು ತೆರೆಯಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 6286ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ 1257 ಮತಗಟ್ಟೆ ಅಧಿಕಾರಿಗಳು, 1257 ಸಹಾಯಕ ಮತಗಟ್ಟೆ ಅಧಿಕಾರಿಗಳು 3772 ಪೆÇೀಲಿಂಗ್ ಆಫೀಸರ್‍ಗಳು ಸೇರಿದ್ದಾರೆ. ಒಟ್ಟು 1143 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಇದರಲ್ಲಿ 228ಸೂಕ್ಷ್ಮ, 107 ಅತಿಸೂಕ್ಷ್ಮ ಮತ್ತು 808ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ನೀತಿ ಸಂಹಿತೆ ಅನುಷ್ಟಾನಕ್ಕಾಗಿ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶೇ.10ರಷ್ಟು ಮತಗಟ್ಟೆ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ.
ಮತದಾನ ಕಡ್ಡಾಯ:ಸರ್ಕಾರ ಈಗಾಗಲೇ ಮಾಡಿರುವ ತಿದ್ದುಪಡಿ ಪ್ರಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಕಡ್ಡಾಯವಾಗಿ ಮತದಾನ ಮಾಡಬೇಕಾಗಿದೆ. ಯಾವುದೇ ಅಭ್ಯರ್ಥಿಯ ಪರವಾಗಿ ಮತದಾನ ಮಾಡಲು ಬಯಸದ ಮತದಾರರಿಗೆ ವಿದ್ಯುನ್ಮಾನ ಮತಯಂತ್ರದ ಕೆಳಗಿನ ಅಂಕಣದಲ್ಲಿ `ನೋಟಾ'(ಮೇಲ್ಕಂಡ ಯಾರೂ ಅಲ್ಲ) ನಮೂದಿಸಲು ಅವಕಾಶ ನೀಡಲಾಗಿದೆ.
ಕ್ಷೇತ್ರದ ವ್ಯಾಪ್ತಿ ದೊಡ್ಡ:ಕಡಿಮೆ ಅವಧಿ, ದೊಡ್ಡ ಕ್ಷೇತ್ರದ ಕಾರಣದಿಂದ ಅಭ್ಯರ್ಥಿಗಳು ಎಲ್ಲೆಡೆ ತಲುಪಲು ಸಾಧ್ಯವಾಗಿಲ್ಲ. ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳಿರುವುದರಿಂದ,ಕೆಲ ಕ್ಷೇತ್ರದ ವ್ಯಾಪ್ತಿ 30 ಕಿಮೀ ದಾಟುವುದರಿಂದ ಅಭ್ಯರ್ಥಿಗೆ ಮನೆ ಮನೆ ತಲುಪುವುದು ಕಷ್ಟವಾಗಿದೆ. ಅಲ್ಲದೇ ಪ್ರಚಾರಕ್ಕೆ ಕೇವಲ ಆರೇ ದಿನ ಸಿಕ್ಕಿದ್ದೂ ಅಭ್ಯರ್ಥಿಗಳ ಇಕ್ಕಟ್ಟಿಗೆ ಕಾರಣವಾಗಿದೆ. ಚುನಾವಣಾ ವೆಚ್ಚದ ಮಿತಿಯ ಕಾರಣಕ್ಕೆ ಇದುವರೆಗೂ ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷದ ಫಂಡ್ ಹೆಚ್ಚೇನೂ ಬಂದಿಲ್ಲ ಎನ್ನವಾಗಿದೆ.
ಕಾಂಗ್ರೆಸ್‍ನಿಂದ ಜಿ.ಪಂ.ಅಭ್ಯರ್ಥಿಗಳಿಗೆ 1 ಲಕ್ಷ, ತಾ.ಪಂ.ಅಭ್ಯರ್ಥಿಗಳಿಗೆ 50 ಸಾವಿರ ನಿಗದಿ ಮಾಡಲಾಗಿದೆ. ಅದರನ್ನು ಆಯಾ ತಾಲೂಕಿನ ಶಾಸಕರು ಅಥವಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಅಭ್ಯರ್ಥಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂಬ ಮಾಹಿತಿ ಇದೆ. ಮೊದಲ ಹಂತದಲ್ಲಿ ಅರ್ಧ ಹಣವನ್ನು ಬಹುತೇಕ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಇನ್ನು ಬಿಜೆಪಿಯಿಂದ ಜಿ.ಪಂ.ಕ್ಷೇತ್ರಕ್ಕೆ 50 ಸಾವಿರ ನಿಗದಿ ಮಾಡಲಾಗಿದೆ.
ಒರಿಸ್ಸಾ, ತಮಿಳುನಾಡು ಮತ ಯಂತ್ರಗಳು:ಶೇ. 10 ರಷ್ಟು ಹೆಚ್ಚುವರಿ ಮತ ಯಂತ್ರಗಳನ್ನು ಇಡಲಾಗಿದೆ. ಒಟ್ಟು 2636 ಮತ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ.ಅದರಲ್ಲಿ ತಿರುನೇಲ್‍ವೇಲಿಯ 2582, ಸೇಲಂನ 227 ಬ್ಯಾಲೆಟ್ ಯುನಿಟ್‍ಗಳು, ಒರಿಸ್ಸಾದ 200 ಕಂಟ್ರೋಲ್ ಯುನಿಟ್‍ಗಳಿವೆ.
ಕ್ಷೇತ್ರ ಬಿಡಲು ಸೂಚನೆ:ಚುನಾವಣೆ ಮತದಾನ ಪ್ರಾರಂಭವಾಗುವ 48 ಗಂಟೆ ಮೊದಲು ಬಹಿರಂಗ ಪ್ರಚಾರ ಕೊನೆಗೊಳಿಸಲಾಗಿದೆ. ಫೆ.11ರ ಸಂಜೆ 6ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು, ಪಕ್ಷಗಳ ಮುಖಂಡರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ವಾಸ್ತವ್ಯ ಮುಂದುವರಿಸುವಂತಿಲ್ಲ. ಆಯಾ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ವ್ಯಾಪ್ತಿಯ ಮತದಾರರಲ್ಲದವರು ಕ್ಷೇತ್ರದಿಂದ ಹೊರ ಹೋಗಬೇಕು. ಚುನಾವಣಾ ನಿರ್ದೇಶನಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಎಚ್ಚರಿಸಿದ್ದಾರೆ.

loading...

LEAVE A REPLY

Please enter your comment!
Please enter your name here