ಟ್ರಕ್-ಬೈಕ್ ಡಿಕ್ಕಿ ಸ್ಥಳದಲ್ಲಿ ಇಬ್ಬರು ಸಾವು

0
23
loading...

ನಿಪ್ಪಾಣಿ 02: ಕುಡಿದ ಅಮಲಿನಲ್ಲಿ ಟ್ರಕ್ ಚಲಾಯಿಸಿ ಬೈಕ್ ಹಾಗೂ ರಸ್ತೆ ಬದಿನಿಂತಿದ್ದ ಟ್ರಕ್‍ಗೆ ಡಿಕ್ಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರವಿವಾರದಂದು ರಾತ್ರಿ 10 ಗಂಟೆ ಸುಮಾರಿಗೆ ಪಟ್ಟಣದ ಹೊರಭಾಗ ರಾಷ್ಟ್ರೀಯ ಹೆದ್ದಾರಿ ರಶ್ಮಿ ಹೋಟೇಲ್ ಬಳಿ ಹಾಗೂ ಯಮಗರ್ಣಿ ಗ್ರಾಮದ ಬಳಿ ಹೀಗೆ 5 ಕಿ.ಮೀ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಕೊಡ್ನಿ ಗ್ರಾಮದ ನಿವಾಸಿ ಭೈರು ಶಿಂಗೆ (46) ಹಾಗೂ ಟ್ರಕ್ ಕ್ಲೀನರ್ ಎಂ.ಕೆ.ಹುಬ್ಬಳಿ ನಿವಾಸಿ ಬಸವರಾಜ ಸಿದ್ದಪ್ಪಾ ಕಲೇದ(26) ಮೃತಪಟ್ಟ ದುರ್ದೈವಿಗಳು.ದತ್ತಾ ಭೈರು ಶಿಂಗೆ(12) ಹಾಗೂ ಟ್ರಕ್ ಚಾಲಕ ಬೈಲಹೊಂಗಲ ತಾಲೂಕು ನೇಗಿನಹಾಳ ನಿವಾಸಿ ಪ್ರಕಾಶ ಫಕೀರಪ್ಪಾ ಹಡಗಿನಹಾಳ(30) ಗಂಭೀರವಾಗಿ ಗಾಯಗೊಂಡಿದ್ದು ಸರಕಾರಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ : ಐಶರ್ ಕಂಟೇನರ್‍ನಲ್ಲಿ ಬೈಲಹೊಂಗಲದಿಂದ ಆದಿತ್ಯ ಕಂಪನಿ ಐಸಕ್ರೀಂ ಭರಿಸಿಕೊಂಡು ಚಾಲಕ ಪ್ರಕಾಶ ಹಾಗೂ ಕ್ಲೀನರ್ ಬಸವರಾಜ ನಿಪ್ಪಾಣಿಯಲ್ಲಿ ಡಿಲೇವರಿ ನೀಡಿದ್ದಾರೆ. ಬಳಿಕ ಕೊಲ್ಲಾಪುರಕ್ಕೆ ತೆರಳುವಾಗ ಕುಡಿದ ಅಮಲಿನಲ್ಲಿದ್ದ ಐಶರ್ ಚಾಲಕನ ನಿಯಂತ್ರಣ ತಪ್ಪಿ ಪಟ್ಟಣದ ಹೊರಭಾಗ ರಾಷ್ಟ್ರೀಯ ಹೆದ್ದಾರಿ ರಶ್ಮಿ ಹೋಟೇಲ್ ಬಳಿ ಕೊಡ್ನಿ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರ ತಂದೆ ಮಗನ ಮೇಲೆ ಟ್ರಕ್ ಹರಿಸಿ ಪಲಾಯನಗೈದಿದ್ದಾನೆ. ಕೊಡ್ನಿ ಗ್ರಾಮದ ಭೈರು ಮೃತಪಟ್ಟಿದ್ದಾನೆ.ಬಳಿಕ 5 ಕಿ.ಮೀ ಅಂತರದಲ್ಲಿಯೇ ಯಮಗರ್ಣಿ ಗ್ರಾಮದ ಬಳಿ ಸರ್ವೀಸ್ ರಸ್ತೆ ಮೇಲೆ ನಿಂತಿದ್ದ ಮರಳು ತುಂಬಿದ 2 ಲಾರಿಗೆ ಐಶರ್ ಚಾಲಕ ಢಿಕ್ಕಿ ಹೊಡೆದಿದ್ದಾನೆ.ಐಶರ್ ನುಜ್ಜುಗುಜ್ಜಾಗಿದೆ.ಕ್ಲೀನರ್ ಬಸವರಾಜ ಮೃತಪಟ್ಟಿದ್ದಾನೆ.ಸ್ಥಳೀಯ ಬಸವೇಶ್ವರ ಚೌಕ ಪೊಲೀಸ ಠಾಣೆ ಮತ್ತು ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here