ತಂತ್ರಜ್ಞಾನಗಳ ದುರ್ಬಳಿಕೆಯಾಗುತ್ತಿರುವುದು ವಿಷಾದನೀಯ

0
22
loading...

ರಾಮದುರ್ಗ 02: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್, ಸ್ಮಾಟ ಪೋನಗಳ ಟ್ಯಾಬ್ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಖ್ಯಾತ ಸಾಹಿತಿ ಪ್ರೊ| ಬಿ. ಸುಕನ್ಯಾ ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಸಿ.ಎಸ್. ಬೆಂಬಳಗಿ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಂದೆ-ತಾಯಿ ಪ್ರಭಾವಕ್ಕಿಂತಲೂ ಹೆಚ್ಚಾಗಿ ಮಾಧ್ಯಮ ಮತ್ತು ಮೊಬೈಲಗಳ ಪ್ರಭಾವ ವಿದ್ಯಾರ್ಥಿಗಳ ಮೇಲಾಗುತ್ತಿದೆ. ಎಲ್ಲ ದುರ್ಗುಣಗಳನ್ನು ಟಿ.ವಿ, ಮೊಬೈಲ್ ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಕಾರಣ ತಂದೆ-ತಾಯಿಗಳನ್ನು ಗೌರವಿಸಿ, ಮರ್ಯಾದೆ ಕೊಡಿ ವಿದ್ಯಾರ್ಥಿಗಳಾದ ನೀವು ಯಾವಾಗಲೂ ಅವರ ಹಿಂದೆ ಇರಿ ಎಂದಿಗೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ, ನೀವು ನಿಮ್ಮ ತಂದೆ-ತಾಯಿಯರವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದರೆ ನಿಮ್ಮ ಮಕ್ಕಳು ನಿಮ್ಮನ್ನು ಎಲ್ಲಿ ಕಳುಹಿಸಿತ್ತಾರೆಂಬುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಶಿಕ್ಷಕರು ತಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಿದರೆ ಮುಂಬರುವ ವರ್ಷಗಳಲ್ಲಿ ಭಾರತದ ಭವಿಷ್ಯವನ್ನು ಇನ್ನು ಉಜ್ವಲಗೊಳಿಸಬಹುದು. ಶಿಕ್ಷಕರು ಇನ್ನೊಬ್ಬರಿಗೆ ಮಾದರಿಯಾಗುವ ಹಾಗೆ ತಮ್ಮ ಶಿಕ್ಷಣ ಕಾರ್ಯವನ್ನು ನಿರ್ವಹಿಸಬೇಕು. ಶಿಕ್ಷಕರ ವೃತ್ತಿ ಎಲ್ಲ ವೃತ್ತಿಗಳಲ್ಲೂ ಪವಿತ್ರ ಎಂದು ಹೇಳಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಎಂ. ಜಗತಾಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಹಾನ ಸಾಧನೆ ಮಾಡಿದ ಮಹನೀಯರ ಪುಸ್ತಕಗಳನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಹೇಳಿದರು.
ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿನ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಗೌರವ ಕಾರ್ಯದರ್ಶಿ ಎಸ್.ಐ. ಪುರಾಣಿಕ, ವಿ.ಎ.ಅದೃಶ್ಯಪ್ಪನವರ ಸೇರಿದಂತೆ ಸಂಸ್ಥೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ.ಬಿ.ಪಾಟೀಲ ಸ್ವಾಗತಿಸಿದರು. ಪ್ರೊ| ಬಿ.ಬಿ.ವಂದಾಲ ಪರಿಚಯಿಸಿದರು. ಡಿ.ಎಂ.ಮೊಗೇರ ವಾರ್ಷಿಕ ವರದಿ ಓದಿದರು. ಆರ್.ಎಲ್. ಕುಳ್ಳೂರ ನಿರೂಪಿಸಿದರು. ರಶ್ಮಿ ತೊಲಗಿ ವಂದಿಸಿದರು.

loading...

LEAVE A REPLY

Please enter your comment!
Please enter your name here