ತಂದೆ-ತಾಯಿರನ್ನು ದೂರ ಮಾಡದಿರಿ : ಪ್ರೊ. ವಕ್ಕುಂದ

0
25
loading...

ರಾಮದುರ್ಗ 03ಃ ದ್ವಿತೀಯ ಪಿ.ಯು ವರ್ಷದ ಫಲಿತಾಂಶವು ವಿದ್ಯಾರ್ಥಿಗಳ ವೃತ್ತಿ ಬದುಕನ್ನು ರೊಪಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಆದ್ದರಿಂದ. ಇಂದಿನ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡಿದಾಗ ಮಾತ್ರ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ. ಎಂದು ಪ್ರೊ.ಬಸವರಾಜ ವಕ್ಕುಂದ ಹೇಳಿದರು.
ಸ್ಥಳೀಯ ಸಿ.ಎಸ್.ಬೆಂಬಳಗಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಿ.ಯು ಪರಿಕ್ಷಾ ಪೂರ್ವ ತಯಾರಿ ಕುರಿತು ಬುಧವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಜನ್ಮ ನೀಡಿದ ತಂದೆ ತಾಯಿಯರನ್ನು ಅನ್ಯರ ಮಾತು ಕೇಳಿ ಅವರನ್ನು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ನಾವುಗಳೆಲ್ಲರೂ ಇಂದು ಸಂಪಾದನೆಯಲ್ಲಿ ಲಕ್ಷಾಂತರ ಸಂಬಳ ತೆಗೆದುಕೊಳ್ಳುತ್ತಿದ್ದವೆ, ಕಾರಣ ನಮ್ಮನ್ನು ಹೆತ್ತವರು ಎನ್ನುವುದನ್ನು ಮರೆಯದೆ ತಂದೆ ತಾಯಿಯರನ್ನು ಪ್ರತಿಯಿಂದ ಗೌರವಿಸಿ ಅವರನ್ನು ಅನಾತಾಶ್ರಮಕ್ಕೆ ಕಳಿಸದೆ ಚನ್ನಾಗಿ ನೋಡಿಕೊಳ್ಳಬೇಕು. ಮತ್ತು ಪರೀಕ್ಷೆಗಳು ಪ್ರಮಾಣ ಪತ್ರಗಳನ್ನು ಪಡೆಯುವದು ಶಿಕ್ಷಣವಲ್ಲ ಜೀವನದ ಪರೀಕ್ಷೆಯಲ್ಲಿ ಉತ್ತಿರ್ಣವಾಗುವ ಶಿಕ್ಷಣ ಪಡೆಯುವ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಪಂಪ, ಬೇಂದ್ರೆ, ಬಾರ್ಲಿಚಾಪ್ಲಿನ್, ಅಬ್ದುಲ್‍ಕಲಾಂ ರ ಜೀವನ ಚರೀತ್ರೆಯ ಕಥಾ ಸಾರವನ್ನು ಓದಿ ತಮ್ಮ ಜ್ಞಾನ ಬಂಡಾರವನ್ನು ಸಂಪಾದಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ ಸಮಿತಿಯ ಅಧ್ಯಕ್ಷರಾದ ಶ್ರೀ ಪಿ.ಎಂ.ಜಗತಾಪ ಮಾತನಾಡುತ್ತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತೆದ್ದೇವೆ. ಈ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ನುರಿತ ಶಿಕ್ಷಕರಿಂದ ಪರಿಕ್ಷೇಯ ಪೂರ್ವ ತಯಾರಿ ಕಾರ್ಯಾಗಾರ
ಕಲಾ ವಿಭಾಗ: ಇತಹಾಸ ವಿಷಯಕ್ಕೆ ಬನಹಟ್ಟಿಯ ಎಸ್.ಆರ್.ಎ ಕಾಲೇಜಿನ ,ಎಚ್.ಬಿ.ತಳವಾರ, ಸಮಾಜಶಾಸ್ತ್ರ ವಿಷಯಕ್ಕೆ ಸಿಂದಗಿಯ ಸರಕಾರಿ ಕಾಲೇಜಿನ,.ಡಿ.ಆರ್.ಮಠಪತಿ,ರಾಜ್ಯಶಸ್ತ್ರ ವಿಷಯಕ್ಕೆ ಮೇಗುರನ ಸರಕಾರಿ ಕಾಲೇಜಿನ,,ಎಸ್.ಎಂ.ಕುಂಬಾರ ಶಿಕ್ಷಣ ವಿಷಯಕ್ಕೆ ಸರಕಾರಿ ಕಾಲೇಜು ಸುರೇಬಾನದ ಡಾ.ನಾಗರಾಜು ಮರೆನ್ನವರವರು. ವಿಜ್ಞಾನ ವಿಭಾಗ: ಭೌತಶಾಸ್ತ್ರ.ಗಣಿತ.ಜೀವಶಾಸ್ತ್ರ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಬಾಗಲಕೋಟಿಯ ಪ್ರಾಥನಾ ಕಾಲೇಜಿನ ಉಪನ್ಯಾಸಕರಾದ ವ್ಹಿ.ಬಿ.ನಡಮನಿ, ಎಂ.ಎಸ್.ಇಜೇರಿ, ಡಾ.ಚನ್ನಬಸವರಾಜ ಹಾಗೂ ರಸಾಯನಶಾಸ್ತ್ರ ವಿಷಯಕ್ಕೆ ಬಿ.ವಿ.ವಿ ಕಾಲೇಜಿನ ಎಸ್.ಎಸ್.ಪಾತಾಳಿ ವಾಣಿಜ್ಯ ವಿಭಾಗ: ಲೇಕ್ಕಸಾಸ್ತ್ರ ವ್ಯವಹಾರ ಅಧ್ಯಯನ ವಿಷಯಗಳಿಗೆ ಸುರೇಬಾನ ಎಸ್.ಎಫ್.ಎಸ್.ಕಾಲೇಜಿನ ಎಂ.ಎಸ್.ಹಾಲಭಾವಿ, ಆರ್ಥಶಾಸ್ತ್ರ ವಿಷಯಕ್ಕೆ ಹೆಬ್ಬಳ್ಳಿಯ ಸರಕಾರಿ ಕಾಲೇಜಿನ ಶ್ರೀ ಆನಂದ ಹವಾಲ್ದಾರ, ಸಂಖ್ಯಾಶಾಸ್ತ್ರ ವಿಷಯಕ್ಕೆ ಬಾಗಲಕೋಟಿ ಬಿ.ವಿ.ವಿ ಕಾಲೇಜಿನ ಇ.ಸತ್ಯಪ್ರಕಾಶ ಕನ್ನಡ ವಿಭಾಗ ಹಾಗೂ ಇಂಗ್ಲೀಷ ವಿಷಯಕ್ಕೆ, ಬಸವರಾಜ ವಕ್ಕುಂದ, ರವಿ,ಕರ್ಲೆಪ್ಪನವರ,ಮತಿ.ಎ.ಎಸ್.ಎತ್ತನಟ್ಟಿ ತಿ.ಬಿ.ತಗ್ಗಿಹಳ್ಳಿ ಆಗಮಿಸಿವರು.2016 ಮಾರ್ಚ ಪರೀಕ್ಷಾ ಸಿದ್ದತೆಯ ಕಾರ್ಯಕ್ರಮ ಪೆಬ್ರುವರಿ 2 ರಿಂದ ಪೆಬ್ರುವರಿ 9 ರ ವರೆಗೆ ನಡೆಯುವವು. ಪಿ.ಯು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಲು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪಸ್ಥಿತಿ ಪ್ರಾಚಾರ್ಯರು ಎಂ.ಬಿ.ಪಾಟೀಲ ತಿಳಸಿದ್ದಾರೆ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್.ಪುರಾಣಿಕ ಉಪಸ್ಥಿತರಿದ್ದರು ಪ್ರಾಚಾರ್ಯರಾದ ಎಂ.ಬಿ.ಪಾಟೀಲ ಸ್ವಾಗತಿಸಿದರು ಬಿ.ಬಿ.ವಂದಾಲ ಪರಿಚಸಿದರೆ .ಕುಮಾರಿ.ರಶ್ಮಿ ತೊಲಗಿ ವಂದಿಸಿದರು ಎಸ್.ಎಚ್.ನಾಗರೇಶಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here