ತಾಲೂಕಿನಲ್ಲಿ ಬೀಡು ಬಿಟ್ಟ ಪೋಲಿಸರು: ಗೊಂದಲಮಯ ವಾತವರಣ

0
33
loading...


ಭಟ್ಕಳ : ಜಿಲ್ಲೆಯ ನೂರಾರು ಸಂಖ್ಯೆಯ ಪೊಲೀಸರು ತಾಲೂಕಿನಲ್ಲಿ ಬೀಡು ಬಿಟ್ಟಿರುವದ್ದು ಸಾರ್ವಜನಿಕ ವಲಯದಲ್ಲಿ ಗೊಂದಲಮಯ ವಾತವರಣ ನಿರ್ಮಾಣಕ್ಕೆ ಕಾರಣವಾದ ದೃಶ್ಯ ಭಟ್ಕಳದಲ್ಲಿ ಸೋಮವಾರ ಸಂಜೆ ಕಂಡು ಬಂದಿದೆ.
ಒಂದೆ ಸಮನೆ ಬರುತ್ತಿರುವ ಪೊಲೀಸರನ್ನು ಕಂಡ ಸಾರ್ವಜನಿಕರು ಒಮ್ಮೆಲೆ ಹೌಹಾರಿದ್ದರು. ಈ ತರಹದ ಪೊಲೀಸರು ಭಟ್ಕಳಕ್ಕೆ ಏಕೆ ಬಂದಿದ್ದಾರೆ ಎನ್ನುವ ಗೊಂದಲ ಧೀರ್ಘಕಾಲದ ಚರ್ಚೆಗೆ ಒಳಗಾಯಿತು. ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೋನಾಯಿಸಿ ಕೇಳಿದರೂ ಸಮರ್ಪಕವಾದ ಮಾಹಿತಿ ಬರಲಿಲ್ಲ. ವ್ಯಾಟ್ಸಪ್, ಫೆಸ್‍ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ವಿಧವಿಧದ ಕಮೆಂಟಗಳು ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಇನ್ನೆನಾದರೂ ಅಹಿತಕರ ಘಟನೆ ನಡೆಯಿತೊ, ಗಲಭೆಗಳಾಯಿತೊ ಎಂದು ಹುಬ್ಬೆರಿಸುವಂತ ಸ್ಥಿತಿ ನಿರ್ಮಾಣವಾಗಿತ್ತು.
ಶಿರಸಿಯಲ್ಲಿ ಸಂಸದ ಅನಂತ ಕುಮಾರ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಭಟ್ಕಳದ ಮುಸ್ಲಿಮ್‍ರು ಪ್ರತಿಬಟಿಸಬಹುದು ಎನ್ನುವ ಮುಂದಾಲೋಚನೆಯಿಂದ ಭಟ್ಕಳಕ್ಕೆ ಪೊಲೀಸರ ಆಗಮನವಾಗಿದೆ ಎಂದು ತಿಳಿದು ಬಂದಿದ್ದು ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಡುವಂತಾಯಿತು.
ಅಷ್ಟಕ್ಕೂ ಬಂದ ಪೊಲೀಸರೆಷ್ಟು: ಎಚ್‍ಸಿಪಿಸಿ 500, 20ಪಿಎಸ್‍ಐ, 8ಸಿಪಿಐಗಳು, 3ಡಿಎಸ್‍ಪಿಗಳು, 1ಎಡಿಸನಲ್ ಎಸ್‍ಪಿ, 1 ಎಸ್‍ಪಿ ಅಷ್ಟೆ ಅಲ್ಲದೆ 30 ಮಹಿಳಾ ಪೊಲೀಸ್ ಸಿಬ್ಬಂದಿಗಳು ಭಟ್ಕಳಕ್ಕೆ ಆಗಮಿಸಿ ಬೀಡು ಬಿಟ್ಟಿದ್ದಾರೆ. ಪೊಲೀಸರ ಆಗಮನದ ಹಿನ್ನಲೆಯಲ್ಲಿ ಭಟ್ಕಳದ ವಾತವಾರಣ ಬೀಗುಗೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ವಿವಿದ ಬಾಗಗಳಿಂದ ಆಗಮಿಸಿದ ಪೊಲೀಸರಿಗೆ ಸರಿಯಾದ ವಾಸ್ತವ್ಯವಿಲ್ಲದೆ ಆಸರಕೇರಿಯ ನಿಚ್ಚಲಮಕ್ಕಿ ಕಲ್ಯಾಣ ಮಂಟಪ, ಕಡವಿನಕಟ್ಟೆ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಆಶ್ರಯ¥ಡೆಯಲು ಪೇಚಾಡುತ್ತಿರುವದು ಕಂಡು ಬಂದಿದೆ.
ಪೊಲೀಸರಿಗೆ ಉಳಿಯಲು ವಿವಿದೆಡೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಡುಗೆ ಮಾಡಿ ಬಡಿಸಲು ಅಡುಗೆಯವರನ್ನು ನೆಮಿಸಲಾಗಿದೆ. ಸಾಮೂಹಿಕ ಬೋಜನಕ್ಕಾ ಇಲ್ಲಿನ ಸಮುದಾಯ ಭವನದಲ್ಲಿ ಎರ್ಪಾಟು ಮಾಡಲಾಗಿದೆ. ಸಿ.ಪಿ.ಐ ಪ್ರಶಾಂತ ನಾಯಕ ಭಟ್ಕಳ

loading...

LEAVE A REPLY

Please enter your comment!
Please enter your name here