ತಾ.ಪಂ ಮತ್ತು ಜಿ.ಪಂಗೆ ನಾಮಪತ್ರಗಳ ಸಲ್ಲಿಕೆ

0
18
loading...


ಯಲ್ಲಾಪುರ,01: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ತಾ.ಪಂಗೆ 18 ಹಾಗೂ ಜಿ.ಪಂಗೆ 5 ಸೇರಿ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಯಿತು. ಒಟ್ಟು ತಾ.ಪಂಗೆ 39 ಹಾಗೂ ಜಿ.ಪಂಗೆ 11 ಸೇರಿ 50 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬಿಜೆಪಿ ಅಭ್ಯರ್ಥಿ ವಿಠ್ಠಲ ಜಾನು ಪಾಂಡ್ರಮೀಶೆ, ನಾಮಪತ್ರ ಸಲ್ಲಿಸಿದರು. ನಂದೊಳ್ಳಿ ತಾ.ಪಂ. ಕ್ಷೇತ್ರದಿಂದ ಬಿಜೆಪಿಯಿಂದ ನಂದೊಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ. ಆರ್. ಹೆಗಡೆ, ತಿಮ್ಮಣ್ಣ ಭಟ್ಟ ಘಟ್ಟಿ, ನಾಗರಾಜ ಕವಡಿಕೆರೆ, ಶ್ರೀಧರ ಗುಮ್ಮಾನಿ, ಗಜಾನನ ಭಟ್ಟ ಬಲೇಕಣಿ ನಾಮಪತ್ರ ಸಲ್ಲಿಸಿದರು. ಕಿರವತ್ತಿಯಿಂದ ಬಿಜೆಪಿಯ ಪಾರ್ವತಿ ಸಾಂಬಾಜಿ ಕಾಂಬಳೆ, ಆನಗೋಡದಿಂದ ರವೀಂದ್ರ ಕೋಟೆಮನೆ, ಕುಂದರಗಿಯಿಂದ ನಾಗವೇಣಿ ಮಾದೇವ ನಾಯ್ಕ, ಉಮ್ಮಚಗಿಯಿಂದ ಪ್ರತಿಮಾ ಮಂಜುನಾಥ ಭಟ್ಟ, ಕಂಪ್ಲಿಯಿಂದ ಸುಶೀಲಾ ಶಾಂತಾರಾಮ ಸಿದ್ದಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿಮಾಜಿ ಶಾಸಕ ವಿ.ಎಸ್ ಪಾಟೀಲ,ತಾಲೂಕಾಧ್ಯಕ್ಷ ರಾಘವೇಂದ್ರ ಭಟ್ಟ,ಪ.ಪಂ ಸದಸ್ಯ ಯೋಗೇಶ ಹಿರೇಮಠ,ಜಿಲ್ಲಾಕಾರ್ಯದರ್ಶಿ,ಉಮೇಶಶ ಭಾಗ್ವತ,ಕಾರ್ಯಕರ್ತರಾದ ಎಮ.ಆರ್ ಹೆಗಡೆ ಕುಂಬ್ರಿಗುಡ್ಡೆ, ನಾರಾಯಣನಾಯ್ಕ, ಶ್ರೀನಿವಾಸ ಗಾಂವ್ಕರ ಮುಂತಾದವರು ಇದ್ದರು.

ತಾಲೂಕಾ ಪಂಚಾಯತ್ ಕಂಪ್ಲಿ ಕ್ಷೇತ್ರಕ್ಕೆ ಜೆಡಿಎಸ್ ನಿಂದ ರೋಜಿನಾ ನಾಗೇಶ್ ಸಿದ್ದಿ, ಕುಂದುರ್ಗಿ ಕ್ಷೇತ್ರದಿಂದ ಮಂಜುಳಾ ಮಂಜ ದೇವಾಡಿಗ, ನಂದೊಳ್ಳಿಯಿಂದ ರಮೇಶ ಸದ್ಗುಣ ಪಟಗಾರ, ಮದನೂರಿನಿಂದ ಅಬ್ದುಲ್ ಅತ್ತಾರ ಸೋಮವಾರ ನಾಮಪತ್ರ ಸಲ್ಲಿಸಿದರು. ಇಡಗುಂದಿ ಜಿ.ಪಂ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸೀತಾ ಗಣಪತಿ ಭಟ್ಟ, ಕಂಪ್ಲಿ ಜಿ.ಪಂ ಕ್ಷೇತ್ರಕ್ಕೆ ಜೆಡಿಎಸ್ ನಿಂದ ತಾ.ಪಂ. ಮಾಜಿ ಉಪಾಧ್ಯಕ್ಷೆ ಚಂದ್ರಕಲಾ ದೇವಾಡಿಗ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ವಿಶ್ವೇಶ್ವರ ಜೊಷಿ, ಸುಧಾಕರ ನಾಯ್ಕ, ಜಿ.ಕೆ.ಭಟ್ಟ, ಎಸ್.ವಿ. ಗಾಂವಕಾರ ಇದ್ದರು.
ಮದನೂರು ತಾ.ಪಂ. ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ವಿಠ್ಠು ಬೋಮ್ಮು ಶಳಕೆ, ಜಿ.ಪಂ ಕಂಪ್ಲಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಕವಿತಾ ಕೃಷ್ಣ ಆಚಾರಿ, ಸಂಗೀತಾ ನಾಗು ಶೆಳಕೆ, ಬಿಜೆಪಿಯಿಂದ ರೂಪಾ ಗಜಾನನ ಬೂರ್ಮನೆ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾದ ರಾಜಶೇಖರ ಡಂಬಳ ನಾಮಪತ್ರ ಸ್ವೀಕರಿಸಿದರು.ಚುನಾವಣಾ ವಿಕ್ಷಕರಾದ ಕೆ.ಎಸ್ ಜಗದೀಶ ಉಪಸ್ಥಿತರಿದ್ದು ಪರಿಶೀಲಿಸಿದರು

loading...

LEAVE A REPLY

Please enter your comment!
Please enter your name here