ದೇಶದ ರೈತರ ಕಲ್ಯಾಣಕ್ಕಾಗಿ ಸಂಕಲ್ಪ ತೊಟ್ಟ ಪ್ರಧಾನಿ ಮೋದಿ

0
31
loading...

ವಿಶ್ವವೇ ಭಾರತದತ್ತ ನೋಡುತ್ತಿದೆ – ಫಸಲ್ ಬಿಮಾ ಯೋಜನೆ ರೈತರಿಗೆ ವರದಾನ
ರಾಜಶೇಖರಯ್ಯಾ ಹಿರೇಮಠ
ಬೆಳಗಾವಿ:27 ರೈತರ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಬರುವ 2017ನೇ ಸಾಲಿನಲ್ಲಿ ದೇಶದ ಎಲ್ಲ ರೈತರಿಗೆ ಮಣ್ಣು ಆರೋಗ್ಯ ತಪಾಸಣಾ ಕಾರ್ಡ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಶನಿವಾರ ಬೆಳಗಾವಿಯ ಸಾವಗಾಂವ ರಸ್ತೆಯ ಸಮಿಪದ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ರೈತರ ಕಲ್ಯಾಣ, ಕೇಂದ್ರ ಸರಕಾರದ ಫಸಲ್ ಬಿಮಾ ಯೋಜನೆಯ ಸಮಾವೇಶದಲ್ಲಿ ಭತ ತೂರವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಮೀನಿನಲ್ಲಿ ಬೆಳೆದ ಬೆಳೆಗಳು ಸರಿಯಾಗಿ ಬಾರದಿರುವುದರಿಂದ ಆರ್ಧಿಕ ನಷ್ಟ ಅನುಭವಿಸುತ್ತಿದ್ದಾನೆ. ಆದ್ದರಿಂದ ಮುಂದಿನ ವರ್ಷದಲ್ಲಿ ದೇಶದ ಎಲ್ಲ ರೈತರಿಗೂ ಮಣ್ಣು ಆರೋಗ್ಯ ತಪಾಸಣಾ ಕಾರ್ಡ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಅವರು ಹೇಳಿದರು.
ರೈತರು ತಮ್ಮ ಗ್ರಾಮದಲ್ಲಿಯೇ ಮಣ್ಣು ಪರೀಕ್ಷೆ ನಡೆಸಲು ಇಂದಿನ ಯುವಕರು ಯಂತ್ರಗಳನ್ನು ಕಂಡುಹಿಯುವ ಪ್ರಯತ್ನ ಮಾಡಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಕೇಂದ್ರ ಸರಕಾರ ಮಾಡಲಾಗುತ್ತಿದೆ. ಇದರಿಂದ ರೈತರ ಜಮೀನಿನಲ್ಲಿ ಉತ್ತಮವಾದ ಬೆಳೆಗಳು ಬರಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.
ದೇಶದ ರೈತರ ಮೂಲ ಸಮಸ್ಯೆ ಬಗೆ ಹರಿದರೇ ದೇಶದ ಅಭಿವೃದ್ಧಿಯಾದಂತೆ. ಕೇಂದ್ರದಲ್ಲಿ ಬಿಜೆಪಿ ಸರಕಾರದ ಕಳೆದ 18 ತಿಂಗಳಿನಿಂದ ಕೃಷಿ, ಉತ್ಪಾದನೆ ಹಾಗೂ ರೈತರ ಸೇವೆಯ ಕಡೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಇಡೀ ವಿಶ್ವವದಲ್ಲಿ ಆರ್ಥಿಕ ಕುಸಿತ ಕಂಡರೂ ಭಾರತ ದೇಶ ಮಾತ್ರ ಆರ್ಥಿಕ ಪ್ರಗತಿಯಲ್ಲಿ ಯಶಸ್ವ ಕಂಡಿದೆ. ಇದರಿಂದ ಇಡೀ ವಿಶ್ವವೇ ಇಂದು ಭಾರತದ ದೇಶದ ಕಡೆಗೆ ನೋಡುತ್ತಿದೆ ಎಂದು ಅವರು ಹೇಳಿದರು.
ಭಾರತ ದೇಶದಲ್ಲಿ 65 ಪ್ರತಿಶತ ಯುವಕರನ್ನು ಹೊಂದಿದೆ. ದೇಶ ಬಲವಾಗಬೇಕಾದರೇ ಯುವಕರು ಕೃಷಿಯತ ಮುಖಮಾಡಿ ದೇಶದ ಅಭಿವೃದ್ಧಿಗೆ ಕೈ ಜೊಡಿಸಿ ಕೃಷಿ ಕ್ಷೇತ್ರದಲ್ಲಿ ಬಲಪಡಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಬೆಳಗಗಳಿಗ ನೀರು ದೊರೆತರೆ ಅವರ ಜಮೀನಿನಲ್ಲಿ ಚಿನ್ನದ ಬೆಳೆ ಬೆಳೆಯುತ್ತಾರೆ. ಆದರೆ ಈ ಹಿಂದಿನ ಕೇಂದ್ರ ಸರಕಾರ 10 ವರ್ಷಗಳಲ್ಲಿ ನೀರು ನಿರ್ವಹಣೆಗೆ ಒತ್ತು ಕೊಟ್ಟಿದರೇ ದೇಶದಲ್ಲಿ ಬರಗಾಲ, ರೈತರ ಆತ್ಮಹತ್ಯೆ ಹಾಗೂ ಬೆಳೆ ಹಾನಿಗಳು ಸಂಭವಿಸುತ್ತಿರಲಿಲ್ಲ ಎಂದು ಕಳವಳವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದು ತಮ್ಮನ್ನು ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಕಬ್ಬಿನ ಬಾಕಿ 61 ಸಾವಿರ ಕೋಟಿ ರೂ,ಗಳ ಬಾಕಿ ಕೊಡಬೇಕಿತ್ತು. ಅದು ಸದ್ಯ 18 ಸಾವಿರ ಕೋಟಿ ಬಾಕಿ ಕೊಡಬೇಕಿದೆ. ಇದು ಕೇವಲ 18 ತಿಂಗಳಲ್ಲಿ ನಿಮ್ಮ ಮನೆಯ ಸೇವಕನಾಗಿ ಕೆಲಸ ಮಾಡಿದ್ದೇನೆ ಆದರೆ ಕಾಂಗ್ರೆಸ್ ಸರಕಾರ ದೇಶದ ಜನರಿಗೆ ಮೋಸ ಮಾಡುತ್ತ ಬಂದಿದೆ ಎಂದು ಗುಡುಗಿದರು.
ದೇಶದಲ್ಲಿನ ರೈತರಿಗೆ ಫಸಲ್ ಬಿಮಾ ಯೋಜನೆಯಿಂದ ಹಲವಾರು ಲಾಭಗಳು ದೊರೆಯಲಿವೆ. ಈ ಯೋಜನೆಯನ್ನು ಮೊದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜಾರಿಗೆ ತಂದರು ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಹಿಂದೆ ಮುಂದೆ ಮಾಡಿ ಧೂಳಿಪಟಮಾಡಿದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಫಸಲ್ ಬಿಮಾ ಯೋಜನೆಯ ಪ್ರಿಮೀಯಮ್‍ನ್ನು ಹೆಚ್ಚಿಗೆ ಮಾಡಿತ್ತು ಇದರಿಂದ ರೈತರು ಈ ಯೋಜನೆತಯಿಂದ ಹಿಂದೆ ಸರಿಯುವ ಪ್ರಸಂಗ ಎದುಯಿತು ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರದಲ್ಲಿ ಹವಮಾನದ ಅನುಸಾರವಾಗಿ ಪ್ರಿಮೀಯಮ್ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೈತರು ಜಮೀನಿನಲ್ಲಿ ಬೆಳೆದ ಬೆಳೆ ನಷ್ಟವಾದರೇ ಏಕಾ ಏಕಿ ಭಯಪಡುವ ಅಗತ್ಯವಿಲ್ಲ. ಫಸ್ ಬಿಮಾ ಯೋಜನೆಯಲ್ಲಿ ಅವರಿಗೆ ಪರಿಹಾರ ನೀಡಲಾಗುವುದು. ಮಳೆಗಾಲ ಬಂದರೂ, ಭೀಕರ ಬರಗಾಲ ಎದುರಾರದೂ ಚಿಂತಿಸುವ ಅಗತ್ಯವಿಲ್ಲ ಪರಿಹಾರ ಸಿಗುತ್ತದೆ. ತಮ್ಮ ಜಮೀನಿನಲ್ಲಿ ಏನೂ ಬೆಳೆ ಬೆಳೆಯದಿದ್ದರು ಪರವಾಗಿಲ್ಲ ಒಂದು ವರ್ಷಕ್ಕೆ ನಿಮ್ಮ ಕುಟುಂಬ ನಡೆಸುವಷ್ಟು ಹಣ ಕೇಂದ್ರ ಸರಕಾರ ಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ವಿಶ್ವಾಸ ಮೂಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ, ಡಿ.ವಿ.ಸದಾನಂದಗೌಡಾ, ಸಿ.ಎಮ್.ಸಿದ್ದೇಶ್ವರ, ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ, ಸಂಸದರಾದ ಸುರೇಶ ಅಂಗಡಿ, ಡಾ. ಪ್ರಭಾಕರ ಕೋರೆ, ಕೆ.ಎಸ್.ಈಶ್ವರಪ್ಪ, ಮುರುಳಿಧರರಾವ್ ಸೇರಿದಂತೆ ಮೊದಲಾದವರು ಹಾಜರಿದ್ದರು.
ಬಾಕ್ಸ್
ಬರಗಾಲ ಪರಿಹಾರವನ್ನು ಕರ್ನಾಟಕಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ 1450 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಿದೆ. ಆದರೆ ಮುಖ್ಯಮಂತ್ರಿಗಳು ರೈತರಿಗೆ ಹಂಚುವ ಬದಲು ಟಿಜೋರಿಯಲ್ಲಿ ಭರ್ತಿ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶವ್ಯಕ್ತಪಡಿಸಿದರು.

=>

ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಫಸಲ್ ಬಿಮಾ ಯೋಜನೆಯ ರೈತರ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ 4:25 ನಿಮಿಷಕ್ಕೆ ವೇಧಿಕೆಯ ಮೇಲೆ ಆಗಮಿಸುತ್ತಿದ್ದಂಯೆ ರಣಕಹಳೆ ಮೊಳಗಿತು. ರೈತರನ್ನು ಉದ್ದೇಶಿಸಿ ಮಾತನಾಡುವ ಮುನ್ನ ಕಿತ್ತೂರು ರಾಣಿ ಚನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣನಿಗೆ ಪ್ರಮಾಣಮ ಸಲ್ಲಿಸಿ ಸಮಾವೇಶದಲ್ಲಿ ಭಾಗಿಯಾದ ರೈತ ಬಂಧುಗಳಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತನಾಡಿದರು.

=>
ವೇದಿಕೆಯ ಮೇಲೆ ಬಿಎಸ್‍ವೈ ಜನ್ಮದಿನದ ಶುಭಾಶಯ ಕೊರಿದ ಪ್ರಧಾನಿ
ಫಸಲ್ ಬಿಮಾ ಯೋಜನೆಯ ರೈತ ಸಮಾವೇಶದ ದಿನದಂದೆ ರೈತರ ಸಮ್ಮುಖದಲ್ಲಿಯೇ ರೈತರ ಮುಖಂಡ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೊರಿದರು.

ಮೋದಿ ಸಮಾವೇಶದ ಪ್ರಮುಖ ಅಂಶಗಳು.
· ನೀರು ಕಾರ್ಖಾನೆಯಲ್ಲಿ ಉತ್ಫಾದನೆ ಮಾಡಲು ಸಾಧ್ಯವಿಲ್ಲ ಪರಮಾತ್ಮನ ಪ್ರಸಾದ. ನೀರು ಒಂದು ಹನಿ ಹಾಳಾದರೂ ದೇವರಿಗೆ ಕ್ಷಮೆ ಕೇಳಬೇಕು.

· ರೈತರಿಗೆ ನೀರು ಸಿಕ್ಕರೇ ಮಣ್ಣಿನಲ್ಲಿ ಬಂಗಾರ ಬೆಳೆಯುವ ಶಕ್ತಿ ಸಿಗುತ್ತದೆ.

· ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 18 ತಿಂಗಳಲ್ಲಿ ವಿಶ್ವವೇ ಭಾರತ ದೇಶದತ್ತ ನೋಡುತ್ತಿದೆ.

· ಕೇಂದ್ರದಲ್ಲಿರುವ ಚಿಕ್ಕ ಪಕ್ಷದ ವಿರೋಧಿಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡುವ ದೈರ್ಯವಿಲ್ಲ.

loading...

LEAVE A REPLY

Please enter your comment!
Please enter your name here