ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪುಠಾಣಿಗಳು

0
24
loading...


ಭಟ್ಕಳ : ಪೊಲೀಸರನ್ನು ಕಂಡು ಭಯಭೀತರಾಗಿ ಮನೆ ಸೇರುತ್ತಿದ್ದ ಕಾಲವೊಂದಿತ್ತು. ವಿದ್ಯಾರ್ಥಿಗಳಂತೋ ಪೊಲೀಸ್‍ಜೀಪ್‍ಕಂಡರೆ ಸಾಕು ಹೆದರಿ ಸೂಸು ಮಾಡಿಕೊಳ್ಳತ್ತಿದ್ದರು.ಆದರೆ ಈಗ ಕಾಲ ಬದಲಾವಣೆಯಾಗಿದೆ.ಪೊಲೀಸರುಕೂಡ ಮನುಷ್ಯರೇ.ಅವರಲ್ಲಿಯೂ ಮಾನವೀಯತೆಇದೆ.ಪೊಲೀಸರು ಹೆಚ್ಚೆಚ್ಚು ಜನಸ್ನೇಹಿಗಳಾಗುತ್ತಿದ್ದಾರೆ.ಪೊಲೀಸ್ ಇಲಾಖೆ ಕೆಲಸ ಮಾಡುವ ತನ್ನ ಸ್ಟೈಲ್‍ಕೂಡ ಬದಲಾಯಿಸಿಕೊಂಡಿದೆ.
ಗುರುವಾರ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಜಾಮಿಯಾಬಾದ್ ನಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ನ ಕಿಂಡರ್‍ಗಾರ್ಟನ್(ಕೆಜಿ) ವಿದ್ಯಾರ್ಥಿಗಳು ನಗರಠಾಣೆಗೆ ಭೇಟಿ ನೀಡಿದ್ದು ಪಿ.ಎಸ್.ಐಕುಡಗುಂಟೆಯವರು ವಿದ್ಯಾರ್ಥಿಗಳನ್ನು ಪುಠಾಣಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡುಕೈಕುಲುಕಿದರು. ಅವರ ಪ್ರೀತಿಯಚಾಕೊಲೆಟ್ ನೀಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನುಗೆದ್ದುಕೊಂಡರು.
ವಿದ್ಯಾರ್ಥಿಗಳಿಗೆ ವಿವಿಧ ಸರ್ಕಾರಿ ಇಲಾಖೆಗಳನ್ನು ಪರಿಚಯಿಸುವ ಭಾಗವಾಗಿ ನ್ಯೂ ಶಮ್ಸ್ ಸ್ಕೂಲ್ ನ ಎಲ್.ಕೆ.ಜಿ ಹಾಗು ಯು.ಕೆ.ಜಿ.ಒಟ್ಟು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರ ಪೊಲೀಸ್‍ಠಾಣೆಗೆ ಭೇಟಿ ನೀಡುವುದರ ಮೂಲಕ ಪೊಲೀಸ್‍ಠಾಣೆಯನ್ನು ತಿಳಿದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಶಾಲಾ ಸಂಯೋಜಕ ಎಂ.ಆರ್.ಮಾನ್ವಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here