ನಾಳೆಯಿಂದ ಬೆಳವಡಿ ಮಲ್ಲಮ್ಮನ ಉತ್ಸವ

0
21
loading...

ಬೈಲಹೊಂಗಲ 27: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ವೀರವನಿತೆ ಬೆಳವಡಿ ಮಲ್ಲಮ್ಮನ 2016ನೇ ಉತ್ಸವ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಫೆ.28, 29ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಅವರು ಶುಕ್ರವಾರ ಸಾಯಂಕಾಲ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಉತ್ಸವದ ಭೀತ್ತಿ ಪತ್ರ ಬಿಡುಗಡೆ ಮಾಡಿ, ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಫೆ.28ರಂದು ಬೆಳಗ್ಗೆ 10ಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ಹಾಗೂ ಮಲ್ಲಮ್ಮನ ವಿಜಯಜ್ಯೋತಿಯನ್ನು ಬರಮಾಡಿಕೊಳ್ಳಲಾಗುವದು. ಸಣ್ಣ ಕೈಗಾರಿಕಾ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10.15ಕ್ಕೆ ಜಾನಪದ ಕಲಾವಾಹಿನಿ ಉದ್ಘಾಟನೆಯನ್ನು ವಿಧಾನ ಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸುವರು. ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವವಹಿಸುವರು. ಬೆಳಗ್ಗೆ 10.30ಕ್ಕೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ವಸ್ತು ಪ್ರದರ್ಶನ ಉದ್ಘಾಟಿಸುವರು.
ವೀರರಾಣಿ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ 11ಕ್ಕೆ ಬೆಳಗಾವಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯರ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿಯ ಮಹಿಳಾ ಪ್ರತಿನಿಧಿಗಳ ಬೃಹತ್ ಸಮಾವೇಶ ನಡೆಯಲಿದೆ. ಮಹಿಳಾ ಸಬಲೀಕರಣ ವಿಚಾರ ಸಂಕಿರಣದಲ್ಲಿ ಡಾ.ಸ್ಮೀತಾ ಸುರೇಬಾನಕರ ಅಧ್ಯಕ್ಷತೆವಹಿಸುವರು. ಧಾರವಾಡದ ಡಾ.ಪ್ರಜ್ಞಾ ಮತ್ತಿಗಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಡಾ.ಸಂತೋಷ ಹಾನಗಲ್ಲ ಆಶಯ ನುಡಿ ಹೇಳುವರು. ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲಿ ಮಹಿಳೆ ಕುರಿತು ಬೆಳಗಾವಿ ಡಾ.ನಾಗರತ್ನ ಪರಾಂಡೆ ಉಪನ್ಯಾಸ ನೀಡುವರು. ಕರ್ನಾಟಕ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ನಾಯಕತ್ವ ಕುರಿತು ಡಾ.ಅರ್ಚನಾ ಅಥಣಿ ಉಪನ್ಯಾಸ ನೀಡುವರು. ಶಿಕ್ಷಣ ಮತ್ತು ಮಹಿಳೆ ಕುರಿತು ಧಾರವಾಡದ ಡಾ.ವಿದ್ಯಾ ಕುಂದರಗಿ ಉಪನ್ಯಾಸ ನೀಡುವರು.
ಫೆ.28ರಂದು ಸಂಜೆ 7ಕ್ಕೆ ಬೆಳವಡಿ ಮಲ್ಲಮ್ಮನ ಉತ್ಸವ ಉದ್ಘಾಟನೆ ನಡೆಯಲಿದೆ. ಹೂಲಿ ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು. ಸಣ್ಣ ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆವಹಿಸುವರು. ಅತಿಥಿಗಳಾಗಿ ವಿಧಾನ ಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ಸಂಸದ ಸುರೇಶ ಅಂಗಡಿ, ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ, ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಸೇರಿದಂತೆ ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಆಗಮಿಸುವರು.
ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆ ಪ್ರೌಢ ಶಾಲೆ ಆವರಣದಲ್ಲಿ ಫೆ.28ರಂದು ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರ ವರೆಗೆ ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಮಹಿಳಾ ಮತ್ತು ಪುರುಷ ವ್ಹಾಲಿಬಾಲ್ ಪಂದ್ಯಾಟಕ್ಕೆ ಜಿ.ಪಂ.ಸದಸ್ಯ ಈರಣ್ಣಾ ಕರೀಕಟ್ಟಿ ಚಾಲನೆ ನೀಡುವರು. ಬಾಲಕಿಯರ ಖೋ-ಖೋ ಪಂದ್ಯಾಟಕ್ಕೆ ತಾ.ಪಂ.ಸದಸ್ಯೆ ಅಮೃತಾ ಕಕ್ಕಯ್ಯನವರ ಚಾಲನೆ ನೀಡುವರು. ಮಹಿಳಾ ಮತ್ತು ಪುರುಷ ಕಬ್ಬಡ್ಡಿ ಪಂದ್ಯಾಟಕ್ಕೆ ಗ್ರಾ.ಪಂ.ಅಧ್ಯಕ್ಷೆ ಈರವ್ವ ತಳವಾರ ಚಾಲನೆ ನೀಡುವರು. ಮಹಿಳಾ ಮತ್ತು ಪುರುಷ ಜಂಗೀ ಕುಸ್ತಿಗಳಿಗೆ ಶಾಸಕ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡುವರು.
ಫೆ.28ರಂದು ಸಂಜೆ 5ರಿಂದ ರಾತ್ರಿ 12ರ ವರೆಗೆ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಭಜನಾ ಮಂಡಳಿಯಿಂದ ಭಜನೆ, ಪರಶುರಾಮ ಸಂಗನ್ನವರ ಅವರಿಂದ ಜಾನಪದ ಸಂಗೀತ, ಅಮ್ಮಾಜಿ ನೃತ್ಯ ಶಾಲೆಯಿಂದ ನೃತ್ಯ ವೈವಿಧ್ಯ, ಗುರುರಾಜ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಮಲ್ಲಪ್ಪ ಹೊಂಗಲ ಅವರಿಂದ ಹಾಸ್ಯ ಕಾರ್ಯಕ್ರಮ, ಎಂ.ಕೆ.ಹುಬ್ಬಳ್ಳಿ ಶ್ರೀ ಕೃಷ್ಣಾ ಬಾಲೇಶ ಅವರಿಂದ ಶಹನಾಯಿ ವಾದನ, ಬೆಳವಡಿ ವಿ.ಆರ್.ಎಂ.ಎಸ್ ನೃತ್ಯ ತಂಡದಿಂದ ಉಳುವಾ ಯೋಗಿ ನೃತ್ಯ ರೂಪಕ, ಬೆಂಗಳೂರಿನ ಸ್ನೇಹಾ ಪುರೋಹಿತ ಸಮೂಹ ನೃತ್ಯ, ಬೆಂಗಳೂರಿನ ಬಿ.ಆರ್.ಛಾಯಾ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ, ಹುಬ್ಬಳ್ಳಿಯ ಜಿ.ವಿ.ಕಲಾ ಬಳಗದಿಂದ ಭೇಷ್ ಆತ ಬಿಡ ಹಾಸ್ಯ ನಾಟಕ ನಡೆಯಲಿದೆ. ಫೆ.29ರಂದು ಸಂಜೆ 5ರಿಂದ ರಾತ್ರಿ 12ರ ವರೆಗೆ ನಾನಾ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಡೊಳ್ಳಿನ ಪದ, ನೃತ್ಯ ರೂಪಕ, ಭಾವಗೀತೆ, ಮೂಗಿನಿಂದ ಕೊಳಲು ವಾದನ, ಶಹನಾಯಿ ವಾದನ, ಜಾನಪದ ಸಂಗೀತ, ನೆರಳು-ಬೆಳಕಿನ ಆಟ, ಸುಗಮ ಸಂಗೀತ, ಕಥಕ ನೃತ್ಯ ವೈವಿಧ್ಯ, ಕಿರು ನಾಟಕ ಅಜ್ಞಾನ ರಾಕ್ಷಸ, ರಸಮಂಜರಿ ಕಾರ್ಯಕ್ರಮ, ನಾಟಕ, ಬಿರವ್ವನ ಬಾಳೆಹಣ್ಣು ನಡೆಯಲಿದೆ.

ಫೆ.29ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಳವಡಿ ಸಂಸ್ಥಾನದ ರಾಜಗುರು ಹಿರೇಮಠದ ಶಿವಮಹಾಂತ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು. ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆವಹಿಸುವರು. ಬೆಂಗಳೂರಿನ ಕರ್ನಾಟಕ ಸಂಸ್ಕøತಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪದ್ಮಾ ಶೇಖರ ಸಮಾರೋಪ ನುಡಿ ಹೇಳುವರು. ಅತಿಥಿಗಳಾಗಿ ಸಣ್ಣ ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕಿತ್ತೂರ ಶಾಸಕ ಡಿ.ಬಿ.ಇನಾಮದಾರ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಆಗಮಿಸಲಿದ್ದಾರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರಗು ತರಬೇಕೆಂದು ಉಪವಿಭಾಗಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಓ ಬಸವರಾಜ ಮಿಲ್ಲಾನಟ್ಟಿ, ಭೂ ದಾಖಲೆಗಳ ಸಹಾಯಕ ನಿರ್ಧೇಶಕ ಮೋಹನ ಶಿವನ್ನವರ, ಉಪತಹಶೀಲ್ದಾರ ಎಸ. ಎಂ. ಗೌಡರ ಇದ್ದರು

loading...

LEAVE A REPLY

Please enter your comment!
Please enter your name here