ನಿಜವಾಗುತ್ತಿದೆ ಕೋಟಿ ಹಣದ ಲೂಟಿ ಕಿತ್ತೂ ಹೋದ ಸಿಮೆಂಟ್ ರಸ್ತೆ

0
24
loading...


ದಾಂಡೇಲಿ : 2013-14 ನೇ ಸಾಲಿನಲ್ಲಿ ನಗರಕ್ಕೆ ಮಂಜೂರಾದ ನಗರೋತ್ತಾನ ಕಾಮಗಾರಿಯ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆದಿರುವುದು ಒಂದೆಡೆಯಾದರೇ, ಖುದ್ದು ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಬಂದು ನಗರೋತ್ತಾನದ ರಸ್ತೆ ನೋಡಿ ಸಂಬಂಧಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರೂ ಪರಿಣಾಮ ಮಾತ್ರ ಶೂನ್ಯ.
ರೂ:15 ಕೋಟಿ ವೆಚ್ಚದ ನಗರೋತ್ತಾನ ಕಾಮಗಾರಿ ಬಹುಷ: ತುಂಡುಗುತ್ತಿಗೆ ನೀಡಿರುವುದರಿಂದಲೇ ಸಂಪೂರ್ಣ ಹದೆಗೆಟ್ಟಿದೆ ಎಂಬ ಮಾತಿಗೆ ಇಂಬುಕೊಡುವಂತೆ ನಗರದ ಪ್ರಮುಖ ವಾಣಿಜ್ಯ ರಸ್ತೆಯಾದ ಲಿಂಕ್ ರಸ್ತೆಗೆ ಹಾಕಲಾದ ಸಿಮೆಂಟ್ ಕಿತ್ತು ಹೋಗುತ್ತಿದೆ. ಬಹುವರ್ಷಗಳವರೆಗೆ ಇರಬೇಕಾದ ಈ ರಸ್ತೆಯ ಸಧ್ಯದ ಸ್ಥಿತಿ ನೋಡಿದರೇ ಇದರ ಬಾಳ್ವಿಕೆ ಮಾತ್ರ ಅತ್ಯಲ್ಪ ವರ್ಷಕ್ಕೆ ಸೀಮಿತವಾಗುವತ್ತ ಹೊರಟಿರುವುದಕ್ಕೆ ನಾಗರೀಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಇವೆಲ್ಲವುಗಳನ್ನು ಗಮನಿಸಿದಾಗ ಕೋಟಿ ಮೊತ್ತದ ಕಾಮಗಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಲೂಟಿಯಾಗಿದೆ ಎಂಬ ಮಾತು ನಿಜವಾಗುತ್ತಿದೆ.

loading...

LEAVE A REPLY

Please enter your comment!
Please enter your name here