ಪಡಿತರ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹ

0
25
loading...


ಭಟ್ಕಳ : ಪಡಿತರ ಸರಿಯಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಟ್ಕಳ ತಾಲ್ಲೂಕಿನ ಹೆಬಳೆ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ತಹಶೀಲ್ದಾರ್ ವಿ.ಎನ್ ಬಾಡಕರ್‍ಗೆ ಮನವಿ ಸಲ್ಲಿಸಿದರು.
ಜಾಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಡಿಯಲ್ಲಿರುವ ರೇಶನ್ ಅಂಗಡಿಯಲ್ಲಿ ನಾವುಗಳು ಪ್ರತಿ ತಿಂಗಳೂ ಪಡಿತರವನ್ನು ಪಡೆದುಕೊಳ್ಳುತ್ತಿದ್ದೆವು.
ಆದರೆ ಈಗ ಈ ತಿಂಗಳಿನಿಂದ ಸದ್ರಿ ಪಡಿತರ ಅಂಗಡಿಯು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವುದರಿಂದ ಪಡಿತರ ವಿತರಣೆ ಮಾಡುತ್ತಿಲ್ಲ.ಅಲ್ಲದೇ ಸರ್ಕಾರದಿಂದ ಪಡಿತರ ಬಂದಿಲ್ಲ ಎಂದು ಅಂಗಡಿಯಲ್ಲಿ ಹೇಳಲಾಗುತ್ತಿದೆ.
ಇದರಿಂದ ಹೆ¨ಳೆ ಗ್ರಾಮದ ನೂರಾರು ಬಡ ಕುಟುಂಬಗಳು ಪಡಿತರ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದು,ಈಗ ಇರುವ ಪಡಿತರ ಅಂಗಡಿಯಲ್ಲೇ ಮೊದಲಿನಂತೆ ಎಲ್ಲರಿಗೂ ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರರು ಭರವಸೆ ನೀಡಿದರು.
ಪ್ರಮುಖರಾದ ಮಹಾಬಲೇಶ್ವರ ನಾಯ್ಕ,ಪ್ರಕಾಶ ಡಿ.ನಾಯ್ಕ,ಮಾದೇವ ಜೆ.ನಾಯ್ಕ,ಲಕ್ಷ್ಮೀ ನಾಯ್ಕ,ಮಳ್ಳಿ ನಾಯ್ಕ,ಮಂಜಮ್ಮ ನಾಯ್ಕ,ಕುಪ್ಪಮ್ಮ ನಾಯ್ಕ,ವಿಘ್ನೇಶ್ವರ ನಾಯ್ಕ,ಮೊಹಿದ್ದೀನ್ ಶೇಖ್,ಲಕ್ಷ್ಮಣ ಮೊಗೇರ್ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here