ಪ್ರಾಸಬದ್ಧ ಹೇಳಿಕೆ ಒಡಪುಗಳಾಗಿ ಮಾರ್ಪಡುತ್ತವೆ

0
127
loading...


ಧಾರವಾಡ 19: ಜನಪದ ಸಾಹಿತ್ಯದ ಅಭಿವ್ಯಕ್ತಿಯ ಹಲವು ಪ್ರಕಾರಗಳಲ್ಲಿ ಒಡಪುಗಳು ಹಾಗೂ ಸೋಬಾನೆಪದಗಳು ಒಂದು ಜನಪ್ರಿಯ ಪ್ರಕಾರವಾಗಿದೆ ಎಂದು ಡಾ. ಎನ್.ಬಿ.ಸಂಗಾಪೂರ ಹೇಳಿದರು.
ಎಸ್.ಜೆ.ಎಂ.ವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಅಂತರ್ ಮಹಾವಿದ್ಯಾಲಯಗಳ ಒಡಪು ಹಾಗೂ ಸೋಬಾನೆ ಪದಗಳ ಸ್ಪರ್ಧೆಯಲ್ಲಿ ಮಾತನಾಡಿ, ವಿವಿಧ ಮಂಗಳಕರ ಸಮಾರಂಭಗಳಲ್ಲಿ ಸತಿಪತಿಗಳು ಪರಸ್ಪರ ಹೆಸರು ಹೇಳುವಾಗ ಬಳಸುವ ಪ್ರಾಸಬದ್ಧ ಹೇಳಿಕೆಗಳೇ ಒಡಪುಗಳು. ಅಲ್ಲದೆ ಸೋಬಾನೆ ಪದಗಳು. ಇಂದಿನ ವೈಚಾರಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಾಂತಿಯಿಂದಾಗಿ ಮಾನವ ಬದುಕಿನ ಪಾರಂಪರಿಕ ಮೌಲ್ಯಗಳು ನಶಿಸಿ ಹೊಗುತ್ತಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಅಥವಾ ಜನಪದ ಹಾಡುಗಳ ಮೂಲಕ ಬದುಕಿನ ಮೌಲ್ಯಗಳನ್ನು ಅರ್ಥ ಪೂರ್ಣವಾಗಿ ನಿವೇಧಿಸುವ ನಿಟ್ಟಿನತ್ತ ಮಹಾವಿದ್ಯಾಲಯದಲ್ಲಿ “ಒಡಪು ಹಾಗೂ ಸೋಭಾನೆಪದ”ಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಂದಿನ ತಾಂತ್ರಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಗೀತವನ್ನೆ ಪ್ರಧಾನ ಅಂಶವಾಗಿಟ್ಟುಕೊಂಡಿರುವ ಸಮಾಜದಲ್ಲಿ ಗ್ರಾಮೀಣ ಬದುಕನ್ನು ತೆರೆದಿಡುವಂತ ಇಂತಹ ಸ್ಪರ್ಧೆಗಳು ಅವಶ್ಯಕಗಳು. ಜನಪದ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಪೂರ್ಣವಾಗಿ ಮುಟ್ಟಿಸುವಂತವು. ಅಲ್ಲದೆ ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸ ಬೇಕಾದಂತಹ ಅವಶ್ಯಕತೆ ಇದೆ. ಜನಪದ ವಿಲ್ಲದೆ ಸಮಾಜವಿಲ್ಲ. ಮಾನವ ಬದುಕಿನ ಹಂತಗಳನ್ನು ಅರ್ಥ ಪೂರ್ಣವಾಗಿ ಹೆಣೆದಿಡುವ ಇಂತಹ ಕಾರ್ಯಕ್ರಮಗಳು ಎಂದಿಗೂ ಪ್ರಸ್ತುತವೆಂದರು.
ಶ್ರೀಮತಿ. ವ್ಹಿ.ಕೆ.ಮಠ, ಡಾ. ಪುಷ್ಪಾ ಬಸನಗೌಡರ, ಡಾ. ಎಸ್.ಪಿ.ಮನಗುಂಡಿ, ಶ್ರೀಮತಿ ಜೆ.ಪಿ.ಯಂಡಿಗೇರಿ ಉಪಸ್ಥಿತರಿದ್ದರು. ರೂಪಾ ಗಂಗಮ್ಮನವರ ನಿರೂಪಿದರು. ಶಶಿಕಲಾ ಹಿರೇಮಠ ವಂದಿಸಿದರು.

loading...

LEAVE A REPLY

Please enter your comment!
Please enter your name here