ಬಡವ, ಶ್ರೀಮಂತ ಬೇದ ಭಾವ ಮಾಡದೆ ಶಿಕ್ಷಣ ನೀಡಿ : ಮರುಳಶಂಕರ

0
49
loading...

ಕೋಹಳ್ಳಿ 31: ಶಿಕ್ಷಕರು ಹರಿಯುವ ನದಿ ಇದ್ದ ಹಾಗೇ ತಮ್ಮ ಜ್ಞಾನವನ್ನು ಶಾಲಾ ಮಕ್ಕಳಿಗೆ ಉಣಬಡಿಸಬೇಕು, ಮಕ್ಕಳು ಸ್ವಾಮಿ ವಿವೇಕಾನಂದರಂತೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಎಂದು ಅಥಣಿಯ ಶೆಟ್ಟರ ಮಠದ ಮರುಳಶಂಕರ ದೇವರು ಹೇಳಿದರು.
ಅವರು ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗುರುಗಳು ಮಕ್ಕಳಲ್ಲಿ ಬಡವ, ಶ್ರೀಮಂತ ಎಂಬ ಬೇದ ಭಾವ ಮಾಡದೆ ಎಲ್ಲರನ್ನು ಒಂದೇ ದೃಷ್ಠಿಕೊನದಿಂದ ನೋಡಿ ಶಿಕ್ಷಣ ನೀಡಬೇಕು. ಮಕ್ಕಳಿಗೆ ತೃಪ್ತಿಯಾಗುವ ಶಿಕ್ಷಣ ಕೊಡುವುದು ಮತ್ತು ಶಿಕ್ಷಕರು ಶಿಕ್ಷಕ ವೃತ್ತಿಯನ್ನು ಅರಿತು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಶಿಕ್ಷಕರ ಕರ್ತವ್ಯವಾಗಿದೆ. ಶಾಲೆಯ ಆಡಳಿತ ಮಂಡಳಿಯವರು ಸೇವಕನಾಗಿ ದುಡಿದರೆ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯುತ್ತವೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುರೇಶ ಅಥಣಿ ಅಧ್ಯಕ್ಷತೆ ವಹಿಸಿದ್ದರು, ಶಂಕರಯ್ಯಾ ಹೀರೆಮಠ, ಎಸ್ ಎಲ್ ಪೂಜಾರಿ, ಗುರಲಿಂಗ ಝರೆ, ಶ್ರಿಕಾಂತ ಆಲಗೂರ, ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.
ಸಾಗರ ಝರೆ ನಿರೂಪಿಸಿದರು, ಶಿಕ್ಷಕ ಆರ್ ಎಸ್ ಹಾರೂಗೇರಿ ಸ್ವಾಗತಿಸಿದರು. ಪೂಜಾ ಸಾವಂತ ವಂದಿಸಿದರು.

loading...

LEAVE A REPLY

Please enter your comment!
Please enter your name here