ಬತ್ತಿದ ಕೃಷ್ಣೆ, ಕುಡಿಯುವ ನೀರಿಗಾಗಿ ಪರದಾಟ

0
31
loading...

ಸಂಜೀವ ಬ್ಯಾಕುಡೆ
ಕುಡಚಿ 22: ಲಕ್ಷಾಂತರ ಜನರ ಜೀವನಾಡಿಯಾದ ಕೃಷ್ಣಾ ನದಿ ಈಗ ಬತ್ತಿ ಬರಿದಾಗಿದೆ. ಇನ್ನು ಮಳೆಗಾಲಕ್ಕೆ ನಾಲ್ಕು ತಿಂಗಳು ದೂರವಿದ್ದರೂ ಸದ್ಯ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಒದಗಿ ಬಂದಿದೆ. ನದಿ ಬರಿದಾದದ್ದÀನ್ನು ನೋಡಿದರೆ ಹೋಲ ಗದ್ದೆಗಳನ್ನಂತು ಬಿಟ್ಟುಬಿಡಿ ಕುಡಿಯಲು ನೀರು ಸಿಕ್ಕರೆ ಸಾಕಪ್ಪ ಎನ್ನುತ್ತಿದ್ದಾರೆ ಜನ.
ಈ ನದಿಯನ್ನು ನಂಬಿಕೊಂಡು ತೀರದ ಸಾವಿರಾರು ಹೆಕ್ಟರ್ ಕೃಷಿ ಭೂಮಿ ಇದೆ. ಹೊಲಗದ್ದೆ ಬಿಡಿ ನದಿ ತೀರದಲ್ಲಿರುವ ಕುಡಚಿ ಪಟ್ಟಣದ ಜನ ನೀರಿಗಾಗಿ ಹಾಹಾಕಾರವಾಗಿದೆ. ನೀರು ಇದ್ದಾಗ ಎರಡು ದಿನಕ್ಕೊಮ್ಮೆ ಬರುತ್ತಿದ್ದ ನಲ್ಲಿ ನೀರು ಪುರಸಭೆಯವರು ಪರ್ಯಾಯ ವ್ಯವಸ್ಥೆ ಮಾಡಿದ್ದು ಈಗ ಐದು-ಆರು ಇಲ್ಲಾ ವಾರಕ್ಕೊಮ್ಮೆ ಬರುತ್ತಿದೆ. ಅದು ಕುಡಿಯಕ್ಕೂ ಬಳಸಕ್ಕು ಯೊಗ್ಯವಲ್ಲದ ಸವಳು ನೀರು. ಕುಡಿಯುವ ನೀರಿಗಾಗಿ ಪಕ್ಕದ ಬೋರ್‍ವೆಲ್ ಅವಲಂಭಿತ ಜನ ಅಲ್ಲಲ್ಲಿ ಕೊಡಗಳನ್ನು ತೆಗೆದುಕೊಂಡು ಕುಡಿಯುವ ನೀರನ್ನು ತರುವದು ಕಂಡುಬರುತ್ತಿವೆ.
ಸದ್ಯ ಬರುವ 26ರಂದು ಶಕ್ತಿ ದೇವತೆಯಾದ ಚಿಂಚಲಿ ಮಾಯಕ್ಕಾದೇವಿಯ ಜಾತ್ರೆ ಇದ್ದು ಜಾತ್ರೆಗೆ ತಿಂಗಳ ಪರ್ಯಂತ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವರು. ದರ್ಶನ ಪಡೆಯುವ ಮುಂಚೆ ಅವರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವ ವಾಡಿಕೆ ಇದೆ. ಆದರೆ ಕೃಷ್ಣೆ ಪೂರ್ತಿ ಬತ್ತಿರುವುದರಿಂದ ಯಾತ್ರಾರ್ಥಿಗಳಿಗೂ ಒಂದು ಸಂದಿಗ್ಧ ಸ್ಥಿತಿ ಒದಗಿ ಬಂದಿದೆ.
ನದಿಗೆ ಶಾಸಕರ ಭೇಟ್ಟಿ , ಪರಿಶೀಲನೆ:
ಕುಡಚಿ ಶಾಸಕ ಪಿ. ರಾಜೀವ ಕೃಷ್ಣ ನದಿಗೆ ಭೇಟ್ಟಿ ನೀಡಿ ಪರಿಶೀಲಿಸಿ ಅಂತರ್ಜಲ ಕಡಿಮೆಯಾಗಿದ್ದು ಬೊರ್‍ವೆಲ್ ಹಾಕಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ನದಿಗೆ ನೀರು ಹರಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತೇನೆಂದರು. ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್. ಎ. ಮಹಾಜನ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here