ಬಿಜೆಪಿ ಮುಖಂಡರು ಕಾಂಗ್ರೇಸ್ ಸೇರ್ಪಡೆ

0
55
loading...

ರಾಯಬಾಗ 07: ಕಳೆದ ಅವಧಿಯಲ್ಲಿ ರಾಯಬಾಗ ಗ್ರಾಮೀಣ ಜಿ.ಪಂ. ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇನ್ನು ಹೆಚ್ಚಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತಮಗೆ ಎರಡನೇ ಬಾರಿಗೆ ಚುನಾಯಿಸಲು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದು ರಾಯಬಾಗ ಗ್ರಾಮೀಣ ಜಿ.ಪಂ. ಅಭ್ಯರ್ಥಿ ಪ್ರಣಯ ಪಾಟೀಲ ಮನವಿ ಮಾಡಿದರು.
ರಾಯಬಾಗ ಗ್ರಾಮೀಣ ಮತಕ್ಷೇತ್ರದ ಹಳ್ಳದಹರಿತೋಟ, ಶಿವಾಜಿಪಾರ್ಕ, ಗ್ರಾಮಗಳಲ್ಲಿ ಸಭೆ ನಡೆಯಿಸಿ ಮತಯಾಚಿಸಿದರು. ಬಳಿಕ ಮಾತನಾಡಿದ ಅವರು ತಾಲೂಕಿನಲ್ಲಿ ರಾಜಕೀಯ ಹೊಸ ಬೆಳವಣಿಗೆಯಿಂದ ಚುನಾವಣೆ ರಂಗು ಪಡೆದುಕೊಂಡಿದೆ. ಜಿ.ಪಂ. ಮತ್ತು ತಾ.ಪಂ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಜಯಸಾಧಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಪ್ರಣಯ ಪಾಟೀಲ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅಶೋಕ ನಾಯಿಕ, ವಿಜಯ ನಾಯಿಕ, ಸುರೇಶ ಹೆಗಡೆ, ಶಂಕರ ಬಂತೆ, ಅಜ್ಜಪ್ಪ ಗೆನ್ನೆವ್ವರ, ಮಲ್ಲಪ್ಪ ಮೇತ್ರಿ, ನಿಂಗಪ್ಪಾ ಬಂತೆ, ಸುನೀಲ ಬಂತೆ, ರಾಯಪ್ಪಾ ಗೆನ್ನವ್ವರ, ಪಪ್ಪು ಹೊಸಮನಿ, ಮಾರುತಿ ಹೊಸಮನಿ, ಮುತ್ತಪ್ಪ ನಿಡಗುಂದಿ, ಲಗಮಾ ಮಜಗಿ, ಸುರೇಶ ಘಂಟಿ ಪಕ್ಷಕ್ಕೆ ಸೇರ್ಪಡೆಗೊಂಡರು.

loading...

LEAVE A REPLY

Please enter your comment!
Please enter your name here