ಭಕ್ತಿಪಂಥ ದೇಶದ ಬುನಾದಿ

0
59
loading...

ಅರಟಾಳ 17; ಭಕ್ತಿಪಂಥ ಈ ದೇಶದ ಬುನಾದಿಯಾಗಿದೆ.ಸಂತರು,ಶರಣರು,ದಾಸರು ಬಾಳಿದ ಪುಣ್ಯ ಭೂಮಿ ನಮ್ಮದು.ಗುರುವಿನ ಭಕ್ತಿ ಮಾಡುವದರಿಂದ ಮುಕ್ತಿ ಸಿಗುತ್ತದೆ ಎಂದು ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು ನುಡಿದರು.
ಅವರು ಇಂಚಗೇರಿ ಮಠದಲ್ಲಿ ನಡೆದ ಶ್ರೀ ಗಿರಿಮಲ್ಲೇಶ್ವರ ಹಾಗು ಗುರುಪುತ್ರರೇಶ್ವರ ಮಹಾರಾಜರ ಸಪ್ತಾಹದಲ್ಲಿ ಆಶಿರ್ವಚನ ನೀಡಿ ಸಂಸಾರದ ಜೋತೆಗೆ ಪಾರಮಾರ್ಥ ಮುಖ್ಯ.ಇಂಚಗೇರಿ ಸಂಪ್ರದಾಯವು ಜಾತಿ ಪಂಥವೆನ್ನದೆ ಎಲ್ಲರು ಒಂದೇ ತಾಯಿಯ ಮಕ್ಕಳಂತೆ ನೋಡಿಕೊಳ್ಳತ್ತದೆ.ಈ ಕ್ಷೇತ್ರವು ಪುಣ್ಯ ಕ್ಷೇತ್ರವಾಗಿದೆ.ಇಲ್ಲಿ ವಾಸಿಸುವ ಜನರು ಒಂದೆ ಕುಟುಂಬದ ಸದಸ್ಯರಂತೆ ಪ್ರತಿದಿನ ದೇವರ ದ್ಯಾನ, ಭಜನೆ,ನಿತ್ಯನೇಮ ಮಾಡುತ್ತಾ ಜೀವನ ಪಾವನವಾಗುತ್ತದೆ ಎಂಬುದನ್ನು ನಿರೂಪಿಸಿ ತೋರಿಸಿದಾರೆ.ಗುರುವಿನ ನಾಮಸ್ಮರಣೆಯಿಂದ ಭವದ ಜಂಜಡ ದೂರವಾಗಿ ಸದ್ಗುರುವಿನ ಕರುಣೆ ಲಭಿಸುತ್ತದೆ.ನಾನು ನನ್ನದು ನನಗೆ ಎನ್ನದೆ ಯಾರು ನಡೆಯುವರೋ ಅವರು ಮುಕ್ತಿ ಸುಖವನ್ನು ಪಡೆಯುವರು.ಗುರು ಉಪದೇಶದಿಂದ ಜನ್ಮ ಜನ್ಮದ ಪಾಪ ದೂರವಾಗುತ್ತದೆ.ಮಾನವ ದೇವರಾಗಲು ಅದ್ಯಾತ್ಮದಿಂದ ಮಾತ್ರ ಸಾದ್ಯ.ಜೀವನದಲ್ಲಿ ದಾನ ಧರ್ಮ ಮಾಡುವದರಿಂದ ಸಂತೋಷದ ಜೋತೆಗೆ ನೆಮ್ಮದ್ದಿ ಸಿಗುತ್ತದೆ.ಸವೋದಯ ತತ್ವ,ಒಕ್ಕಲುತನದ ಮಹತ್ವ,ಸ್ತ್ರೀ ಶಿಕ್ಷಣ,ಸತ್ಯ,ಅಹಿಂಸೆ.ಬ್ರಹ್ಮಚರ್ಯ,ಸರ್ವಧರ್ಮ ಸಮನ್ವಯ ತತ್ವದಲ್ಲಿ ಜನರಿಗೆ ತಿಳಿಸಿದ ಮಹಾನೆ ಸಂಪ್ರದಾಯ ಇಂಚಗೇರಿ ಮಠ ಎಂದು ನುಡಿದರು.

loading...

LEAVE A REPLY

Please enter your comment!
Please enter your name here