ಭಟ್ಕಳದಲ್ಲಿ ಜಿ.ಎಸ್.ಬಿ ಸಮಿತಿಯಿಂದ ಪರೀಕ್ಷಾ ತಯಾರಿ ಕಾರ್ಯಾಗಾರ

0
35
loading...


ಭಟ್ಕಳ : ಜಿ.ಎಸ್.ಬಿ ಸಮಿತಿಯಿಂದ ಪರೀಕ್ಷಾ ತಯಾರಿ ಕಾರ್ಯಾಗಾರವನ್ನು ನಡೆಸಲಾಯಿತು.
ಬಟ್ಕಳ ತಾಲೂಕಿನಲ್ಲಿ ಜಿ.ಎಸ್.ಬಿ ಸಮಾಜದ ಪ್ರೌಢ ಶಾಲೆ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ನಿವೃತ್ತ ಶಿಕ್ಷಕ ಆರ್.ಡಿ.ಪ್ರಭು ಉದ್ಘಾಟಿಸಿದರು.
ಶಿಕ್ಷಕ ಕೆ.ಎಲ್.ಶ್ಯಾನಭಾಗ್ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪರೀಕ್ಷಾ ಸಮಯವನ್ನು ಎದುರಿಸುವ ಕೌಶಲ್ಯ, ವಿವಿಧ ಹಂತಗಳಲ್ಲಿ ಅಭ್ಯಾಸಮಾಡುವ ಕ್ರಮ ಹಾಗೂ ವಿದ್ಯಾರ್ಥಿಗಳ ಪಾಲಕರು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಎಸ್.ಬಿ. ಮಹಿಳಾ ಅಧ್ಯಕ್ಷೆ ಲತಾ ಪೈ, ಸಮಿತಿ ಸದಸ್ಯ ಗಿರಿಧರ ನಾಯಕ, ಕಲ್ಪೇಶ ಪೈ, ಹರೀಶ ಕಾಮತ ಉಪಸ್ಥಿತರಿದ್ದರು. ಅಧ್ಯಕ್ಷ ಕಿರಣ ಶಾನಭಾಗ ಸ್ವಾಗತಿಸಿದರು, ಉಪಾಧ್ಯಕ್ಷ ಅನಿಲ ಪೈ ವಂದಿಸಿದರು, ಶ್ರೀನಾಥ ಪೈ ನಿರೂಪಿಸಿದರು.

ಭಟ್ಕಳ: ಬೆಂಗಳೂರಿನ ನಾರಾಯಣ ಹೃದಯಾಲಯ , ಶ್ರೀ ಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬೆಂಗಳೂರು, ಸಪ್ತಗಿರಿ ಡೆಂಟಲ್ ಕ್ಲಿನಿಕ್ ಬೆಂಗಳೂರು, ಮೀನಾ ಎಡಿಡಿ ಚ್ಯಾರಿಟಿ ಇನೀಷಿ0iÉುೀಟಿವ್ ಪೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಕಾಯ್ಕಿಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರವನ್ನು ಮೀನಾ ಎಡಿಡಿ ಚ್ಯಾರಿಟಿ ಇನೀಷಿ0iÉುೀಟಿವ್ ಪೌಂಡೇಶನ್ ಆಡಳಿತ ನಿರ್ದೇಶಕಿ ಡಾ. ಆಶಾ ಪ್ರಭು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ತಮ್ಮ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಉದ್ದೇಶದಿಂದ ಸ್ಥಾಪನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಎರ್ಪಡಿಸಲು ಇದೊಂದು ಉತ್ತಮ ಅವಕಾಶವಾಗಿದ್ದು ತಮ್ಮ ಸಂಸ್ಥೆಯ ಯಾವುದೇ ವೈದ್ಯಕೀಯ ಸೇವೆ ಸಲ್ಲಿಸಲು ಸದಾ ಸಿದ್ಧವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ಡಾ. ಐ. ಆರ್. ಭಟ್ಟ ಮಾತನಾಡಿ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಜನತೆಗೆ ಆರೋಗ್ಯ ಸೇವೆ ನೀಡಲು ತೀರ್ಮಾನಿಸಿ, ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ವಿವಿಧ ಆಸ್ಪತ್ರೆಯ ತಜ್ಞ ವೈದ್ಯರಿಂದ ಶಿಭಿರ ಎರ್ಪಡಿಸಲಾಗುತ್ತಿದೆ. ಜನತೆ ಇದರ ಸದುಪಯೋಗ ಪಡೆಯಬೇಕು. ಗ್ರಾಮೀಣ ಜನತೆಯು ಕೂಡಾ ಆರೋಗ್ಯದ ಕುರಿತು ಜ್ಞಾನ ಹೊಂದುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಮಾಲಾ ಮಾತನಾಡಿ ಗ್ರಾಮೀಣ ಭಾಗದ ಜನತೆಗೆ ವೈದ್ಯಕೀಯ ಸೌಲಭ್ಯ ಪಡೆಯುವುದು ದುಬಾರಿಯಾಗಿರುವ ದಿನದಲ್ಲಿ ಅಗತ್ಯವಿದ್ದವರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಬೆಂಗಳೂರಿನಿಂದ ವಿವಿಧ ತಜ್ಞ ವೈದ್ಯರು ಆಗಮಿಸಿದ್ದು ಜನತೆಗೆ ಸದುಪಯೋಗವಾಗಬೇಕು ಎಂದು ಹಾರೈಸಿದರು.
ವೇದಿಕೆಯಲ್ಲಿ ಡಾ. ಅರವಿಂದ, ಡಾ. ರಾಘವೇಂದ್ರ, ಡಾ. ದೇವರಾಜ್, ಡಾ. ಸಿದ್ಧಾರ್ಥ, ಡಾ. ಮಂಜುನಾಥ, ಡಾ. ಲಿಖಿತ, ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಗಣೇಶ ಜೋಗಿ, ಬಾಬು ಜೈನ್ ಮುಂತಾದವರು ಉಪಸ್ಥಿತರಿದ್ದರು. ಲಾವಣ್ಯ ಸಂಗಡಿಗರು ಪ್ರಾರ್ಥಿಸಿದರು. ಕೆ. ಮರಿಸ್ವಾಮಿ ಸ್ವಾಗತಿಸಿದರು. ಎಂ. ವಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಾಯ ನಾಯ್ಕ ವಂದಿಸಿದರು.
ನಂತರ ನಡೆದ ಶಿಭಿರದಲ್ಲಿ ನುರಿತ ತಜ್ಞ ವೈದ್ಯರಾದ ಹೃದಯ ತಪಾಸಣೆ, ನರರೋಗ ತಜ್ಞರು, ಮೂತ್ರಪಿಂಡ ತಜ್ಞರು, ಕ್ಯಾನ್ಸರ್ ತಜ್ಞರು, ಸ್ತ್ರೀರೋಗ ತಜ್ಞರು, ದಂತ ವೈದ್ಯರು ಹಾಗೂ ಸಾಮಾನ್ಯ ಆರೋಗ್ಯ ತಜ್ಞರು ಭಾಗವಹಿಸಿ ನೂರಾರು ಜನರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

loading...

LEAVE A REPLY

Please enter your comment!
Please enter your name here