ಮನೆಗೆ ಅಕಸ್ಮಿಕ ಬೆಂಕಿ ತಗುಲಿ ಲಕ್ಷಂತಾರ ರೂ. ಹಾನಿ

0
24
loading...


ಮುಂಡಗೋಡ : ಮನೆಗೆ ಅಕಸ್ಮಿಕ ಬೆಂಕಿ ತಗುಲಿ ಪರಿಕರಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಬವಿಸಿದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಪಾಳಾ ಗ್ರಾಮದ ಕೆ.ಇ.ಬಿ ರಸ್ತೆಯಯಲ್ಲಿರುವ ಫಾತೀಮಾಬಿ ಇಬ್ರಾಹಿಂಸಾಬ ಉಪ್ಪಿನ ಇವರಿಗೆ ಸೇರಿದ ಮನೆಯೇ ಬೆಂಕಿಗಾಹುತಿಯಾಗಿದ್ದು, ಚಿಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕಣವಿ ಕಾತೂರ ಜಾತ್ರೆಗೆ(ಉರುಸು) ಗೆಂದು ಮನೆಯವರೆಲ್ಲ ಬೆಳಿಗ್ಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 12 ಘಂಟೆಯ ವೇಳೆಯಲ್ಲಿ ಈ ಘಟನೆ ನಡೆದಿದೆ. ಅಕ್ಕಪಕ್ಕದವರು ಬೆಂಕಿ ನಂದಿಸಲು ಹರಸಹಾಸ ಪಡುತ್ತಿರುವಾಗ ಮುಂಡಗೋಡ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಮುಂದಾಗಬಹುದಾದ ಮತ್ತಷ್ಟು ಹಾನಿ ಹಾಗೂ ಅನಾಹುತ ತಪ್ಪಿಸಿದ್ದಾರೆ. ಬೆಂಕಿ ಅನಾಹುತದಿಂದ ಮನೆಯಲ್ಲಿಟ್ಟಿದ್ದ 25 ಸಾವಿರ ನಗದು ಸಹಿತ ಸುಮಾರು 2 ಲಕ್ಷ ದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಪಾಳಾ ಹೊಬಳಿ ಉಪತಹಶೀಲ್ದಾರ ವಿ.ಜಿ.ನಾಂiÀiಕ, ಗ್ರಾಮ ಲೆಕ್ಕಿಗ ರಾಘವೇಂದ್ರ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.

loading...

LEAVE A REPLY

Please enter your comment!
Please enter your name here