ಮಹದಾಯಿ ನದಿ ಜೋಡಣೆಗೆ ರೈತರಿಂದ ಧರಣಿ ಸತ್ಯಾಗ್ರಹ

0
25
loading...


ನರಗುಂದ : ರೈತರೆಲ್ಲರೂ ಸಹಮತದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರೈತರ ಪಕ್ಷ ಗೆಲ್ಲುವಂತೆ ಮತ ಹಾಕಬೇಕು. ನಾವೆಲ್ಲ ಬ್ರಿಟಿಷರ ದಾಸ್ಯ ಸಂಕೋಲೆಯಿಂದ ದೇಶ ಬಿಡುಗಡೆಗೊಳಿಸಲು ಹೋರಾಟ ಮಾಡಿ ಸ್ವತಂತ್ರಪಡೆದು ನಂಬಿ ನಮ್ಮವರನ್ನೇ ಆಡಳಿತಕ್ಕೆ ಇದುರವರೆಗೂ ಕೂರಿಸಿ ವಂಚನೆಗೊಂಡಿದ್ದೇವೆ. ಇನ್ನು ಮೇಲೆ ರೈತರೇ ಸರ್ಕಾರವನ್ನು ನಡೆಸುವತ್ತ ಕಾಳಜಿವಹಿಸಬೇಕಿದೆ. ಮಹದಾಯಿ ನ್ಯಾಯಾಧಿಕರಣ ವಿಚಾರಣೆಗೆ ದಿನ ಸಮೀಪಿಸಿದಾಗಲೇ ಆ ದಿನ ಮುಂದಕ್ಕೆ ಹಾಕುವ ಷಡ್ಯಂತ್ರ ನಡೆದಿದೆ ಎಂದು ನಾವೆಲ್ಲ ಈಗೀಗ ಕಂಡುಕೊಂಡಿದ್ದೇವೆ. ಕಳೆದ ವರ್ಷ ಅಕ್ಟೋಬರ್‍ದಲ್ಲಿ ನಡೆಯಬೇಕಾದ ಮಹದಾಯಿ ನದಿ ನಿರಿನ ವಿವಾದದ ಕೊನೆ ಹಂತದ ವಿನಾಚರಣೆ ದಿನಸಮೀಪದಲ್ಲಿದ್ದರೂ ಕೂಡಾ ನ್ಯಾಯಮೂರ್ತಿ ಪಾಂಚಾಲ್ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲವೆಂಬ ಕಾರಣದಿಂದ ಈ ವರ್ಷದ ಫೆ. 23 ಕ್ಕೆ ಮುಂಡೂಡಲಾಗಿತ್ತು. ಆದರೆ ಫೆ. 23 ಇನ್ನೆರಡು ದಿನ ಬಾಕಿ ಇರುವಾಗಲೇ ಕಳೆದ ಎರಡು ದಿನದ ಹಿಂದೆ ಈ ವಿವಾದ ಚರ್ಚೆಯನ್ನು ಎ. 27 ಕ್ಕೆ ,ಮುಂದೂಡಿ ರೈತರ ಮೇಲೆ ಸರ್ಕಾರಗಳು ಗದಾ ಪ್ರಹಾರ ಮಾಡುವತ್ತ ಸಾಗಿವೆ. ಇನ್ನು ನಾವೆಲ್ಲ ಸಮ್ಮುನೆ ಸರ್ಕಾರಗಳನ್ನು ಶಪಿಸುವುದನ್ನು ಬಿಟ್ಟು ನಾವೆಲ್ಲ ರೈತರು ಒಂದಾಗಿ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕು. ನಮ್ಮ ಹೋರಾಟ ನೀರು ಪಡೆಯುವವರೆಗೆ ಮುಂದುವರೆಯಲಿದೆ ಎಂದು ರೈತ ಮುಖಂಡ ವಿಠಲ ಜಾಧವ ಇಂದಿಲ್ಲಿ ಹೇಳಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮಂಗಳವಾರ 223 ನೇ ದಿನಕ್ಕೆ ಕಾಲಿರಿಸಿದ್ದು ಸಭೆಯಲ್ಲಿ ಮಾತನಾಡಿದ ಅವರು, ರೈತರ ಬದುಕು ನೆಮ್ಮದಿಯಿಂದ ಸಾಗಲು ಸರ್ಕಾರಿಂದ ಭೇಕಾಗಿರುವ ಎಲ್ಲ ಸೌಲಭ್ಯಗಳನ್ನು ನಾವೆಲ್ಲ ಕಟ್ಟು ನಿಟ್ಟಾಗಿ ಪ್ರತಿಭಟಣೆ ಮೂಲಕ ಪಡೆಯಬೇಕಾಗಿದ್ದು ಅನಿವಾರ್ಯವಾಗಿದ್ದರಿಂದ ಈ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಮಹದಾಯಿ ನದಿ ನಿರಿನ ವಿವಾದ ವಿಚಾರಣೆ ಪಾಂಚಾಲ ಅವರು ಅನಾರೋಗ್ಯಂದಿಂದ ಇರುವ ಮಾತ್ರಕ್ಕೆ ಎಷ್ಟು ಭಾರಿ ಮುಂದೂಡಲಾಗುತ್ತಿದೆ. ಮೂರು ವರ್ಷದ ಅವಧಿಯಲ್ಲಿ ಮುಗಿಯಬೇಕಿದ್ದ ಈ ವಿವಾದ ಇತ್ಯರ್ಥ ಇನ್ನು ಮುಗಿದಿಲ್ಲ. ಇನ್ನೆರಡು ವರ್ಷ ಈ ವಿವಾದವನ್ನು ಜೀವಂತವಿರಿಸುವ ಮಟ್ಟಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯೂ ಕೆಲವಡೆಗಳಿಂದ ಕೇಳಿ ಬರುತ್ತಿದೆ. 2018 ರ ಒಳಗಾಗಿ ಈ ವಿವಾದ ಇತ್ಯರ್ಥಪಡಿಸಬೇಕೆನ್ನುವ ರಾಜಕೀಯ ನಿಲುವು ಸಧ್ಯದ ಸ್ಥಿತಿಯಲ್ಲಿ ಕೇಳಿ ಬರುವಂತಾಗಿದೆ. ಈಗಾಗಲೇ ಅಪಾರ ಹಣ ನ್ಯಾಯಮೂರ್ತಿಗಳಿಗೆ ವೆಚ್ಚಮಾಡಿದ್ದರಿಂದ ರೈತರು ಇಂತಹ ಗೋಸುಂಬೆ ವರ್ತನೆ ಕುರಿತು ಸರ್ಕಾರಗಳನ್ನು ಟೀಕೆ ಮಾಡುತಿದ್ದಾರೆ ಎಂದು ಸರ್ಕಾರಗಳ ಮೇಲೆ ವಾಗ್ದಾಳಿ ನಡೆಸಿದರು.
ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಮಾತನಾಡಿ, ಮಹದಾಯಿ ನದಿ ನೀರಿನ ವಿವಾದ ರಾಜಕೀಯ ಕಪಿಮುಷ್ಟಿಯಲ್ಲಿ ಸಿಕ್ಕು ರೈತನ್ನು ಕಷ್ಟಕ್ಕೆ ತಳ್ಳಿದೆ. ಬುಧುವಾರ ಫೆ. 24 ರಂದು ಉತ್ತರ ಕರ್ನಾಟಕದ 9 ತಾಲೂಕಿನ ಹೋರಾಟ ಸಮಿತಿ ಸದಸ್ಯರ ಸಭೆ ಗೌಪ್ಯ ಜಾಗೆಯಲ್ಲಿ ಕರೆಯಲಾಗಿದ್ದು ಅಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. 24 ರಂದೇ ಸಭೆಯಲ್ಲಿ ತೆಗೆದುಕೊಂಡ ತಿರ್ಮಾಣಕುರಿತು ಬಹಿರಂಗ ಪಡಿಸುವುದಾಗಿ ತಿಳಿಸಿ ಗಟ್ಟಿಯಾದ ಹೋರಾಟದ ನಿರ್ಧಾವನ್ನೇ ಸಭೆಯಲ್ಲಿ ತೆಗೆದುಕೊಳ್ಳಲಾಗುವುದೆಂದು ವಿವರಿಸಿದರು.
ಬಸವರಾಜ ಸಾಬಳೆ ಮಾತನಾಡಿ, ಪ್ರದಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಮಹದಾಯಿ ನದಿ ನೀರಿನ ಕುರಿತು ಮೋದಿ ಜೊತೆ ಚರ್ಚಿಸಲು ಅನೇಕ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು ಮಹದಾಯಿ ಯೋಜನೆ ಕೈಗೂಡವವರೆಗೆ ನಾವೆಂದು ಧರಣಿ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದರು.
ಡಾ. ಎಚ್..ಆರ್. ಹಿರೇಹಾಳ, ಪರಶುರಾಮ ಜಂಬಗಿ, ಶ್ರೀಶೈಲ ಮೇಟಿ ಮಾತನಾಡಿದರು. ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ, ರಮೇಶ ನಾಯ್ಕರ್, ಅಶೋಕ ತಿಗಡಿ, ಈರಣ್ಣ ಗಡಗಿ, ಪುಂಡಲೀಕಪ್ಪ ಯಾದವ, ಜಗದೀಶ ಗೊಂಡಬಾಳ, ಮಕ್ತುಮಸಾಬ ನಾಯ್ಕರ್, ಚನ್ನಪ್ಪಗೌಡ ಪಾಟೀಲ, ಗುರಪ್ಪ ಸೊಪ್ಪಿನ, ಕಲ್ಲಪ್ಪ ದಿವಟಗಿ, ರಮೇಶ ಕಾಪ್ಸೆ, ಸಂಜು ಶೆಂಡಗೆ, ಭೀಮಪ್ಪ ಮೂಲಿಮನಿ, ಎಸ್.ಕೆ. ಗಿರಿಯಣ್ಣವರ, ಯಲ್ಲಪ್ಪ ಗುಡದರಿ ಅನೇಕರು ಉಪಸ್ಥಿತರಿದ್ದರು.
23 ಎನ್‍ಅರ್‍ಡಿ_2 ಪೊಟೋ ಶಿರ್ಷಿಕೆ) ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮಂಗಳವಾರಕ್ಕೆ 223 ನೇ ದಿನಕ್ಕೆ ಕಾಲಿರಿಸಿದ್ದು ವಿಠಲ ಜಾಧವ ಮಾತನಾಡಿದರು.

loading...

LEAVE A REPLY

Please enter your comment!
Please enter your name here