ಮಾಯಕ್ಕನ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

0
40
loading...

ಚಿಂಚಲಿ 27: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಪ್ರಸಿದ್ದ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಶಕ್ತಿದೇವತೆ ಮಾಯಕ್ಕಾದೇವಿಯ ಮಹಾನೈವೇದ್ಯ ಲಕ್ಷಾಂತರ ಭಕ್ತರ ಮಧ್ಯ ವೈಭವದಿಂದ ಜರಗಿತು, ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ ಭವ್ಯ ಪಲ್ಲಿಕ್ಕಿ ಉತ್ಸವ ಜರುಗಲಿದೆ.

ಭರತ ಹುಣ್ಣಿಮೆಯ ಐದು ದಿನಗಳ ನಂತರದ ಹಸ್ತಾ ನಕ್ಷತ್ರದ ನೈವದ್ಯಗೋಳ್ಳುವ ಅನಾದಿಕಾಲದ ಸಂಪ್ರದಾಯದಂತೆ ಜರಗುವ ಈ ಉತ್ಸವದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ಜಮಾಯಿಸಿದ್ದರು.

ದೇವಿಯ ಭಕ್ತರು ಐತಿಹಾಸಿಕ, ಹಾಲಹಳ್ಳದಲ್ಲಿ ಪವಿತ್ರ ಸ್ನಾನಮಾಡಿ ಅಲ್ಲಿಂದ ದೇವಸ್ಥಾನದವರಗೆ ಮಡಿಬಟ್ಟೆಯಲ್ಲಿಯೇ ಬಂದು ಪೂಜೆ ಸಲ್ಲಿಸುತಿದ್ದರು. ಇನ್ನೂ ಕೆಲವು ಭಕ್ತರು ದೀರ್ಘ ನಮಸ್ಕಾರಗಳೊಂದಿಗೆ ಭಕ್ತಿ ಸೇವೆ ಸಲ್ಲಿಸಿದರು. ದೇವಿಯ ದರ್ಶನಕ್ಕಾಗಿ ಭಕ್ತರು ಬೆಳಗಿನಿಂದಲೇ ಸಾಲುಗಟ್ಟಿ ನಿಂತಿದ್ದರು.

ಭಕ್ತಾಧಿಗಳಿಂದ ‘ಮಾಯಕ್ಕಾ ನಾವಾನ ಚಾಂಗ್‍ಬೋಲೋ’ ಆಯಿ ಘೋಡ್ಯಾಚ ನಾವಾನ ಚಾಂಗ್‍ಬೋಲೋ’ ಎನ್ನುವ ಭಕ್ತಿಪೂರ್ವಕ ಜಯ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಕ್ತಿಯಿಂದ ಪರಸ್ಪರ ಭಂಡಾರ ತೂರುತ್ತ ಗರ್ಭಗುಡಿಗೆ ಬರುವ ಗುಂಪುಗಳು ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆಯೇ ನೊಡುಗರ ಗಮನ ಸೆಳೆದವು. ಬೆಳಿಗ್ಗೆ ದೇವಿಗೆ ವಿಶೆಷ ಪೂಜೆ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾನೈವೇದ್ಯ ಮೊದಲಾದ ಧಾರ್ಮಿಕ ಆಚರಣೆಗಳು ದೇವಿಗೆ ಸಾಂಪ್ರದಾಯಿಕವಾಗಿ ಸಮರ್ಪಣೆಯಾದವು.

ಭರತ ಹುಣ್ಣಿಮೆಯಿಂದ ಶಿವರಾತ್ರಿ ಅಮುವಾಸೆವರಗೆ ಸುಮಾರು 15-20 ದಿನಗಳಕಾಲ ನಡೆಯುವ ಈ ಬೃಹತ ಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮೀಳನಾಡು, ಗೋವಾ ರಾಜ್ಯಗಳಿಂದಲೂ ಅಸಂಖ್ಯ ಭಕ್ತರು ಭಾಗವಹಿಸಿದ್ದರು.

ಕಾಣಿಕೆಗಳ ಮಹಾಪೂರ: ಲಕ್ಷಾಂತರ ಭಕ್ತರು ತಮ್ಮ ಇಷ್ಠಾನುಸಾರ ದೇವಿಯ ಶಿಖರಕ್ಕೆ ಭಂಡಾರ ಲೇಪಿಸಿ, ಹವಳ ಮುತ್ತು ಹಾರಿಸುವುದು, ಬೆಳ್ಳಿ, ಬಂಗಾರ, ದವಸ ಧಾನ್ಯ, ಹಣ ಮೊದಲಾದ ಕಾಣಿಕೆ ವಸ್ತುಗಳು ಪ್ರವಾಹದ ರೂಪದಲ್ಲಿ ಹರಿದು ಬರುತ್ತಿದ್ದದ್ದು ಕಂಡುಬಂತು.

ಜನಸಾಗರ ನೂಕು ನುಗ್ಗಲು: ಕ್ಷೇತ್ರದ ಸುತ್ತಲಿನ ಸಮಾರು ಆರೇಳು ಕಿ.ಮಿ ಪ್ರದೇಶದಲ್ಲಿ ನೋಡಿದಲ್ಲೇಡೆ ಭಕ್ತಸಮೂಹವೇ ಎದ್ದು ಕಾಣುತ್ತಿತ್ತು. ಲಕ್ಷಾಂತರ ಭಕ್ತರಿಂದ ಗಿಜುಗುಡುತ್ತಿದ್ದ ಚಿಂಚಲಿ ಕ್ಷೇತ್ರದಲ್ಲಿ ನೂಕು ನುಗ್ಗಲು ಲೆಕ್ಕಿಸದೆ ಭಕ್ತರು ತಮ್ಮ ಹರಕೆ, ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದರು.

ಪೊಲೀಸರು ವಾಹನಗಳನ್ನು ಮುಖ್ಯ ರಸ್ತೆಯಿಂದ ಪಾರು ಮಾಡಲು ಹೈರಾನಾಗಿ ಹೋದರು. ವಿವಿಧೆಡೆಗಳಿಂದ ಜಾತ್ರೆಗೆ ಬಂದ ಭಕ್ತರು ಅಲ್ಲಿಲ್ಲಿ ಬಿಡು ಬಿಟ್ಟು ದೇವಿಯ ನೈವೆದ್ಯಕ್ಕಾಗಿ ಹಾದಿಯುದ್ದಕ್ಕೂ ಒಲೆಹೋಡಿ ಅಡುಗೆ ಮಾಡುತ್ತಿದ್ದ ನಯನ ಮನೋಹರ ದೃಶ್ಯ ಕಂಡುಬಂದವು.

ಕೊಂಕಣಿಗರೇ ಸಿಂಹ ಪಾಲು: ಚಿಂಚಲಿ ಮಾಯಕ್ಕಾ ದೇವಿಯೂ ಮಹಾರಾಷ್ಟ್ರದ ಮಾನ ದೇಶ (ಕೊಂಕಣ)ದಿಂದ ಬಂದಿರುವಳೆಂಬ ಹಿನ್ನಲೆಯಲ್ಲಿ ಈ ಜಾತ್ರೆಯಲ್ಲಿ ಕನ್ನಡಿಗರಗಿಂತಲೂ ಮಹಾರಾಷ್ಟ್ರದ ಭಕ್ತರೆ ಸಿಂಹ ಪಾಲು.

ಕೊಂಕಣ ಭಕ್ತರು ಗಂಡು ಹೆಣ್ಣರೆಂಬ ಭೇದ ಭಾವವಿಲ್ಲದೆ, ದೇವಿಗೆ ಹಾಡು, ಕುಣಿತದ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು. ದೇವಿ ದರ್ಶನಕ್ಕೆ ಬೆಳಗಿನ ಜಾವದಿಂದಲೆ, ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.

ಭಕ್ತರಿಗೆ ಮನರಂಜನೆ ನೀಡಲೆಂದು ಉತ್ಸವಕ್ಕೆ ಆಗಮೀಸಿರುವ ಅನೇಕ ಸಿನಿಮಾ, ನಾಟಕ, ತಮಾಷಾ, ಮೆಳಾ ಅಲ್ಲದೆ ಉತ್ತರ ಭಾರತದ ಕಡೆಯ ಕೇರಳ- ಮದ್ರಾಸಗಳಿಂದ ಆಗಮಿಸಿದ ಪ್ರದರ್ಶನಗಳು ಜಾತ್ರೆಯ ಮೆರಗು ಹೆಚ್ಚಿಸಿದ್ದವು.

loading...

LEAVE A REPLY

Please enter your comment!
Please enter your name here