ರಾಷ್ಟ್ರ ರಕ್ಷಣೆಯಲ್ಲಿ ಸೇನೆಯ ಪಾತ್ರ ಮಹತ್ವದಾಗಿದೆ: ಅಂಗಡಿ

0
21
loading...

ಬೆಳಗಾವಿ 06: ದೇಶದ ಯುವವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಶಿಸ್ತನ್ನು ರೂಢಿಸುವಲ್ಲಿ ಎನ್‍ಸಿಸಿ ಪ್ರಧಾನವಾದ ಪಾತ್ರವಹಿಸುತ್ತಿದೆ. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುತ್ತಿರುವುದು ಸ್ವಾಗತಾರ್ಹವೆಂದು ಸಂಸದ ಸುರೇಶ ಅಂಗಡಿ ಹೇಳಿದರು.

ಅವರು ಶನಿವಾರ ನಗರದ ಕೆಎಲ್‍ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಬೆಳಗಾವಿ ಎನ್‍ಸಿಸಿ ಗ್ರುಫ್ ಹೆಡ್‍ಕ್ವಾಟರ್ಸ ವತಿಯಿಂದ ಜರುಗಿದ ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡು ಚಿನ್ನದ ಹಾಗೂ ಬೆಳ್ಳಿ ಪದಕಗಳನ್ನು ಪಡೆದ ಎನ್‍ಸಿಸಿ ಕೆಡೆಟ್‍ಗಳನ್ನು ಸತ್ಕರಿಸಿ ಮಾತನಾಡಿದರು.
ಬೆಳಗಾವಿ ಶಾಲಾ ಕಾಲೇಜುಗಳು ಎನ್‍ಸಿಸಿ ಕೆಡೆಟ್‍ಗಳಿಗೆ ಸೂಕ್ತವಾದ ತರಬೇತಿಯನ್ನು ನೀಡಿ ರಾಷ್ಟ್ರದಲ್ಲಿ ಜರುಗಿದ ಗಣರಾಜ್ಯೋತ್ಸವ ಶಿಬಿರಕ್ಕೆ ಪ್ರತಿನಿಧಿಸುವಲ್ಲಿ ಶ್ರಮಿಸಿರುವುದು ಶ್ಲಾಘನೀಯ. ಭವಿಷ್ಯದ ವಿದ್ಯಾರ್ಥಿಗಳನ್ನು ನಿರ್ಮಿಸುವುದರಿಂದ ದೇಶವನ್ನು ಸದೃಢವಾಗಿ ಮುನ್ನಡೆಸಲು ಸಾಧ್ಯ. ರಾಷ್ಟ್ರ ರಕ್ಷಣೆ ಹಾಗೂ ನಿರ್ಮಾಣದಲ್ಲಿ ಸೇನೆಯ ಪಾತ್ರ ಅತ್ಯಂತ ಮಹತ್ವ ಹಾಗೂ ಮೌಲಿಕವಾಗಿದ್ದು ನಮ್ಮ ಭಾರತೀಯ ಸೇನೆಯು ಈ ನಿಟ್ಟಿನಲ್ಲಿ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಯುವ ಪ್ರತಿಭೆಗಳನ್ನು ನಿರ್ಮಾಣಗೊಳಿಸುತ್ತಿರುವ ಎನ್‍ಸಿಸಿ ಕೊಡುಗೆ ಮೌಲಿಕವಾಗಿದೆ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ರೀತಿಯ ಸೌಲತ್ತುಗಳನ್ನು ನೀಡಲು ಸಿದ್ಧವಿದೆ ಎಂದರು.
ಬೆಳಗಾವಿ ಎನ್‍ಸಿಸಿ ಗ್ರುಫ ಕಮಾಂಡರ್ ಕರ್ನಲ್ ಕ್ರಿಪಾಲ ಸಿಂಗ್ ಮಾತನಾಡಿ. ಎನ್‍ಸಿಸಿ ಕೆಡೆಟ್‍ಗಳ ಮಾನಸಿಕ ಹಾಗೂ ಶಾರೀರಕ ಬೆಳವಣಿಗೆಯಲ್ಲಿ ಮಹತ್ವದ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ. ನಮ್ಮ ಬೆಳಗಾವಿ ಕೆಡೆಟ್‍ಗಳು ಪರಿಶ್ರಮದಿಂದ ಇಂದು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡು ವಿಶೇಷ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್‍ಡಿಸಿ ಪರೇಡ್‍ನಲ್ಲಿ ಪಾಲ್ಗೊಂಡು ಸಾಧನೆಗೈದ ಬೆಸ್ಟ್ ಕೆಡೆಟ್ ನಿನಾದ ಹಲಗೇಕರ್(ಚಿನ್ನದ ಪದಕ ವಿಜೇತ), ದ್ವಿತೀಯ ಬೆಸ್ಟ್ ಕೆಡೆಟ್ ದರ್ಶನಾ ಕಥಾರಿಯಾ(ಬೆಳ್ಳಿಪದಕ ವಿಜೇತ), ಇರ್ಫಾನ್‍ವುಲ್ಲಾ ಶೇಖ್, ವಿಜಯಲಕ್ಷ್ಮಿ ಹಡಗಲಿ, ಶ್ವೇತಾ ಕದಮ್, ಸುರಜ್ ಹಲ್ದಕಂಕರ್, ಶರಧಿ ಎಸ್. ಅವರನ್ನು ಸತ್ಕರಿಸಲಾಯಿತು.
26 ಕರ್ನಾಟಕ ಬಟಾಲಿನ್ ಕಮಾಡಿಂಗ್ ಆಫೀಸರ್ ಕರ್ನಲ್ ಡಿ.ಎಸ್.ಶುಕ್ಲಾ ಹಾಗೂ ಲೆಫ್ಟಿನೆಂಟ್ ಕರ್ನಲ್ ಕೆ.ಬೆನ್ನಲ್ಕರ್ ಆಯೋಜಿಸಿದ್ದರು. ವೇದಿಕೆ ಮೇಲೆ ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್. ಮಸಳಿ.ಬೆಳಗಾವಿ ಎನ್‍ಸಿಸಿ ಗ್ರುಪ್‍ನ ಕರ್ನಲ್ ಆರ್.ಎಸ್.ಜಾಲಾ, ಕರ್ನಲ್ ರುಮಾಲೆ ಎನ್‍ಪಿ, 25 ಕರ್ನಾಟಕ್ ಬಟಾಲಿಯನ್ ಕಮಾಡಿಂಗ್ ಆಫೀಸರ್ ಸುನೀಲ್ ಪಾಟೀಲ, ಕರ್ನಲ್ ವಾಯ್‍ಎಸ್ ರೆಡೂ, 8 ಏರ್‍ನ ಗ್ರುಫ್ ಕ್ಯಾಪ್ಟನ್ ಎಚ್.ಎಸ್.ಕುಲಕರ್ಣಿ ಉಪಸ್ಥಿತರಿದ್ದರು. ಶ್ರೀಧರ ಲಕ್ಕಣ್ಣವರ ಹಾಗೂ ಕೆಡೆಟ್ ಮರೀನಾ ಮಾರ್ಟಿನ್ ಕಾರ್ಯಕ್ರಮ ನಿರೂಪಿಸಿದರು. ಲೆಪ್ಟ್‍ನೆಂಟ್ ಮಹೇಶ ಗುರನಗೌಡರ ವಂದಿಸಿದರು.

loading...

LEAVE A REPLY

Please enter your comment!
Please enter your name here