ವಸತಿರಹಿತರಿಗೆ, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ : ಚಿನ್ನಪ್ಪಗೌಡರ

0
69
loading...

ಗೋಕಾಕ 25: ಭಾರತ ಸರ್ಕಾರವು ನಗರ ವಸತಿರಹಿತ ಕುಟುಂಬಗಳಿಗೆ ಗೃಹ ನಿರ್ಮಿಸಿಕೊಳ್ಳಲು “ ಹೌಸಿಂಗ ಪಾರ ಆಲ್’’ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ ಜಾರಿಗೆ ತಂದಿದ್ದು, ಸದರ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಜಾರಿಗೊಳಿಸಿಲಾಗಿದೆ ಎಂದು ನಗರ ಸಭೆ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು ಈ ಯೋಜನೆಯ ಪ್ರಮುಖ ಉದ್ದೇಶ ಆರ್ಥಿಕ ದುರ್ಬಲ ವರ್ಗ ಮತ್ತು ಕಡಿಮೆ ಆದಾಯ ಹೊಂದಿರುವ ಹಾಗೂ ಬಡ ಕುಟುಂಬಗಳಿಗೆ ನೂತನ ಗೃಹ ನಿರ್ಮಾಣಕ್ಕಾಗಿ/ ಪ್ರಸ್ತುತ ಇರುವ ಚಿಕ್ಕ ಮನೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ/ಮನೆಯನ್ನು ಖರೀದಿಸಲು ಸಾಧ್ಯವಾಗುವಂತೆ ಸಿಗಬಹುದಾದ ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿಯ ಮೇಲೆ ಶೇ 6.5ರ ನಿಗದಿತ ಬಡ್ಡಿ ಸಹಾಯಧನವನ್ನು ಒದಗಿಸಲಾಗುವದು ಎಂದು ತಿಳಿಸಿದ್ದಾರೆ.
ಸೌಲಭ್ಯ ಪಡೆಯಲಿಚ್ಚಿಸುವ ಫಲಾನುಭವಿಗಳು ಆರ್ಥಿಕವಾಗಿ ದುರ್ಬಲ ವರ್ಗದವರಾಗಿದ್ದು, ವಾರ್ಷಿಕ ರೂ. 3. ಲಕ್ಷ ದಿಂದ 6 ಲಕ್ಷದ ವರೆಗೆ ಆದಾಯ ಹೊಂದಿದ್ದು ಅಥವಾ ಕಡಿಮೆ ಆದಾಯ ಹೊಂದಿರುವ ಕುಟುಂಬವು ಹಾಗೂ ಬಡ ಕುಟುಂಬಗಳು ರೂ.87 ಸಾವಿರ ರೂಗಳ ಆದಾಯ ಹೊಂದಿದ್ದು ಸ್ವಯಂ ಘೋಷಿತ ಆದಾಯ ಪ್ರಮಾಣ ಪತ್ರ ಅಥವಾ ಅಫಿಡವಿಟ್ ಸಲ್ಲಿಸಬೇಕು.
ಸಾಲಮಿತಿ: ಆರ್ಥಿಕ ದುರ್ಬಲ ವರ್ಗದವರು ಗರಿಷ್ಠ ರೂ. 6.00ಲಕ್ಷವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, 6 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆಯಲು ಇಚ್ಚಿಸಿದರೂ ಸಬ್ಸಿಡಿ ಮೊತ್ತವು ಕೇವಲ 6.00ಲಕ್ಷವರೆಗಿನ ಸಾಲಕ್ಕೆ ಮಾತ್ರ ಸಹಾಯಧನ ಸೌಲಭ್ಯ ದೊರೆಯುತ್ತಿದ್ದು ಹೆಚ್ಚಿನ ಸಾಲಕ್ಕೆ ಸಹಾಯಧನ ಸೌಲಭ್ಯವಿರುವದಿಲ್ಲ.
ಸಾಲ ಮರುಪಾವತಿ ಅವಧಿ: ಸದರೀ ಯೋಜನೆಯಡಿ ಮನೆ ಸಾಲ ಮರುಪಾವತಿ ಅವಧಿಯು 15 ವರ್ಷಗಳು ಅಥವಾ ಸಾಲದ ಅವಧಿ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಬ್ಯಾಂಕಿನ ಮಾರ್ಗಸೂಚಿಗಳ ಅನುಗುಣವಾಗಿರುತ್ತದೆ.
ಫಲಾಮಭವಿಗಳ ಅರ್ಹತೆ: ಯೋಜನೆಯಡಿ ಸೌಲಭ್ಯ ಪಡೆಯ ಬಯಸುವ ಫಲಾನುಭವಿಯು ತನ್ನ ಹೆಸರಿಗೆ ಹಾಗೂ ತನ್ನ ಅವಲಂಬಿತರ ಹೆಸರಿಗೆ ಮನೆ ಹೊಂದಿರಬಾರದು. ಫಲಾನುಭವಿಯು ಸ್ವಂತ ನಿವೇಶನ ಹೊಂದಿದ್ದು ಪಕ್ಕಾ ಮನೆ ಹೊಂದಿರಬಾರದು. ಈಗಾಗಲೇ 40ಚ.ಮೀ ಅಳತೆಯ ಮನೆ ಹೊಂದಿದ್ದು ಹೆಚ್ಚುವರಿ ಕೋಣೆ ನಿರ್ಮಿಸಿಕೊಳ್ಳಲು ಸಹ ಈ ಸೌಲಭ್ಯ ಪಡೆಯಬಹುದು. ಗೃಹ ನಿರ್ಮಾಣ ಸಹಕಾರಿ ಸಂಘಗಳಲ್ಲಿ ನಿವೇಶನ ಹೊಂದಿದವರು ಸಹ ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.
ಸಲ್ಲಿಸಬೇಕಾದ ದಾಖಲಾತಿಗಳು: ಸ್ವಯಂ ಘೋಷಿತ ಆದಾಯ ಪ್ರಮಾಣ ಪತ್ರ, ನಿವೇಶನ ಮಾಲಿಕತ್ವದ ದಾಖಲೆ, ನಿವೇಶನ ತೆರಿಗೆ ಪಾವತಿಸಿರುವ ದಾಖಲೆ. ಪಡಿತರ ಚೀಟಿ/ಮತದಾನ ಗುರುತಿನ ಚೀಟಿ/ಆಧಾರ ಕಾರ್ಡ, ಮನೆ ನಿರ್ಮಾಣಕ್ಕೆ ನಗರಸಭೆಯ ಅನುಮತಿ ಪತ್ರ, ಇಂಜನೀಯರರಿಂದ ಮನೆ ನಿರ್ಮಾಣ ಅಂದಾಜು ಪಟ್ಟಿ. ಸಂಬಂಧಿತ ಬ್ಯಾಂಕಿನವರು ಕೋರುವ ಇನ್ನಿತರ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಸಮುದಾಯ ಸಂಘಟನಾಧಿಕಾರಿ ಕೆ.ಬಿ.ಬೆಣ್ಣಿ ಮೊ 9448860544 ಕಚೇರಿಯ ಸಮಯದಲ್ಲಿ ಸಂಪರ್ಕಿಸಬೇಕೆಂದು ಪೌರಾಯುಕ್ತರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here