ಶಿಕ್ಷಕರ ಸಮಸ್ಯೆ ಎದುರಿಸುತ್ತಿದ್ದ ದುಧಮಳಾ ಮತ್ತು ಡಿಗ್ಗಿ ಶಾಲೆಗಳು

0
31
loading...


ಜೋಯಿಡಾ : ಸರಕಾರದಿಂದ ಕಳೆದ ಹತ್ತಾರು ವರ್ಷಗಳಿಂದ ಖಾಯಂ ಶಿಕ್ಷಕರನ್ನು ನೇಮಕ ಮಾಡದೇ ಇರುವುದರಿಂದ ಗೌರವ ಶಿಕ್ಷಕರನ್ನು ನೇಮಿಸಿ ಶಿಕ್ಷಣ ಇಲಾಖೆ ಆಡಳಿತವನ್ನು ದೂಡಿಕೊಂಡು ಬಂದಿತ್ತು. ಈಗ ಸರಕಾರದಿಂದ ಜೋಯಿಡಾ ತಾಲೂಕಿನಗೆ 57 ಶಿಕ್ಷಕರನ್ನು ಹೊಸದಾಗಿ ನೇಮಕ ಮಾಡಿರುವುದರಿಂದ ಈಗಾಗಲೇ ನೇಮಿಸಿಕೊಂಡ 43 ಗೌರವ ಶಿಕ್ಷಕರು ಮನೆಗೆ ಹೋಗಬೇಕಾಗಿದೆ.
ತಾಲೂಕಿನ ಒಟ್ಟು 159 ಶಾಲೆಗಳಲ್ಲಿ 453 ಶಿಕ್ಷಕ ಹುದ್ದೆಗಳು ಮಂಜೂರಿ ಇದೆ. ಆದರೆ ತಾಲೂಕಿನಲ್ಲಿ ಇಲ್ಲಿಯವೆಗೆ ಕೇವಲ 306 ಖಾಯಂ ಶಿಕ್ಷಕರಿದ್ದು ತಾಲೂಕಿನಲ್ಲಿ ಒಟ್ಟು 147 ಶಿಕ್ಷಕ ಹುದ್ದೆಗಳು ಖಾಲಿಯಿತ್ತು. ಈ 147 ಹುದ್ದೆಗಳನ್ನು ತುಂಬಬೇಕೆಂದು ಕಳೆದ ಅನೇಕ ವರ್ಷಗಳಿಂದ ಬೇಡಿಕೆ ಇತ್ತು. ಆದರೆ ಸರಕಾರ ಇಲ್ಲಿಯ ತನಕ ಹೊಸ ಶಿಕ್ಷಕರನ್ನು ನೇಮಕ ಮಾಡಿರಲಿಲ್ಲ. ಈ ಸಾಲಿನಲ್ಲಿ 147 ಶಿಕ್ಷಕರ ಕೊರತೆ ಇರುವ ಬೇಡಿಕೆಯನ್ನು ಸಲ್ಲಿಸಲಾಗಿತ್ತಾದರೂ ಸರಕಾರದಿಂದ ಕೇವಲ 133 ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಮಾಡಲಾಗಿತ್ತು. ಅದರಂತೆ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 133 ಅತಿಥಿ ಶಿಕ್ಷಕರು ಶಾಲೆಗಳಲ್ಲಿ ಉಪನ್ಯಾಸ ಮಾಡುತ್ತಾ ಬಂದಿದ್ದರು. ಆದರೆ ತಾಲೂಕಿಗೆ ಈಗ 57 ಹೊಸ ಶಿಕ್ಷಕರು ನೇಮಕ ವಾಗಿರುವುದರಿಂದ 43 ಅತಿಥಿ ಶಿಕ್ಷಕರು ಮನೆಗೆ ಹೋಗಬೆಕಾದ ಅನಿವಾರ್ಯತೆ ಎದುರಾಗಿದ್ದು ಶೈಕ್ಷಣಿಕ ವರ್ಷ ಮುಗಿಯುವ ಈ ಸಂದರ್ಭದಲ್ಲಿ ಇಲಾಖೆ ಯಾವರೀತಿಯಾಗಿ ಪರಿಸ್ತಿತಿ ನಿಭಾಯಿಸುತ್ತದೆ ಕಾದುನೋಡಬೇಕು.
ತಾಲೂಕಿನ 32 ಹಿರಿಯ ಪ್ರಾಥಮಿಕ ಶಾಲೆಗಳಿಗೆ 32 ಶಿಕ್ಷಕರು ಹಾಗೂ 25 ಕಿರಿಯ ಪ್ರಾಥಮಿಕ ಶಾಲೆಗಳಿಗೆ 25 ಒಟ್ಟು 57 ಹೊಸ ಶಿಕ್ಷಕರನ್ನು ತಾಲೂಕಿನಲ್ಲಿ ನೇಮಕ ಮಾಡಲಾಗಿದೆ. ತಾಲೂಕಿನಲ್ಲಿ ಹೊಸ ಶಿಕ್ಷಕರನ್ನು ನೇಮಕಗೊಂಡ ಹಿರಿಯ ಪ್ರಾಥಮಿಕ ಶಾಲೆಗಳು ನುಜ್ಜಿ, ಅಣಶಿ, ಕುಂಡಲ, ಚಾಪೋಲಿ (ಕಾ), ಕಾರ್ಟೊಳಿ, ನಾಗೊಡಾ, ಹೆಣಕೊಳ, ಉಳವಿ, ಕುಂಭಾರವಾಡಾ, ಚಾಂದೇವಾಡಿ, ಅಖೇತಿ, ಶಿಂಗರಗಾಂವ, ಕೊನಶೇತ್, ಪಾಳಡಾ, ತಿನೈಘಾಟ, ಕ್ಯಾಸಲ್‍ರಾಕ್, ಡಿಗ್ಗಿ, ಕರಂಜೆ, ದುಧಮಳಾ, ರಾಮನಗರ, ಯರಮುಖ, ಕುಂಭಾರವಾಡಾ, ಉಳವಿ, ಜಗಲಪೇಟ, ರಾಮನಗರ, ಅಸು, ಜೋಯಿಡಾ, ಬಾಪೇಲಿ ಕ್ರಾಸ್, ಹನುಮಾನಲೇನ, ವಿರ್ನೊಲಿ, ಅವೇಡಾ, ಬಾಮಣಗಿ. ಕಿರಿಯ ಪ್ರಾಥಮಿಕ ಶಾಲೆಗಳಾದ ಅಂಬೋಳಿ, ಮಾರಸಂಗಾಳ, ಚಾಪಾಳಿ, ವಿರಲ, ಬೊಂಡೇಲಿ, ಮಿರಾಶಕುಂಬೇಲಿ, ಮಾಲಂಬಾ, ಕರಂಬಾಳ, ಮೆಸ್ತಬಿರೋಡಾ, ಮಾತ್ಕರ್ಣಿ,, ಕುರಾವಳಿ, ಕಾಮರಾಳಿ, ನುಜ್ಜಿಪಾಟ್ನೆ, ಪಾಂಜೇಲಿ, ಕುಯೇಸಿ, ಕರ್ಕಮನೆ, ಸಿದ್ದೋಲಿ, ಅಂಬಾಳಿ, ಬರಲಕೋಡ, ಖಾನಗಾಂವ, ಕುಂಬೇಲಿನಾಕಾ, ಬಾಪೇಲಿ, ದುರ್ಗಾಹಟ್ಟಿ, ವಿರಂಜೋಳ, ದುಧಮಳಾ ಈ ರೀತಿಯಾಗಿ ಶಿಕ್ಷಕರನ್ನು ನೇಮಕಮಾಡಿ ಸರಕಾರದಿಂದ ಅಧೇಶಮಾಡಲಾಗಿದೆ.
ಖಾಯಂ ಶಿಕ್ಷಕರು ಇಲ್ಲದೇ ಅನೇಕ ಶಾಲೆಗಳ ಬಾಗಿಲು ಮುಚ್ಚಿತ್ತು. ಅನೇಕ ಶಾಲೆಗಳಲ್ಲಿ ಗೌರವ ಶಿಕ್ಷಕರನ್ನು ನೇಮಿಸಿ ಬಾಗಿಲು ತೆರೆಯುವಂತಾಗಿತ್ತು. ತಾಲೂಕಿಗೆ ಈಗ ಹೊಸದಾಗಿ 57 ಶಿಕ್ಷಕರು ನೇಮಕ ಮಾಡಿದರೂ ಇನ್ನೂ 90 ಖಾಯಂ ಶಿಕ್ಷಕರ ಬೇಡಿಕೆಯಿದ್ದು ಇದನ್ನು ಸರಕಾರ ಆದಷ್ಟು ಬೇಗ ತುಂಬುವ ಕೆಲಸಮಾಡಿದಲ್ಲಿ ಹಿಂದುಳಿದ ಗಡಿ ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣ ಕಾಣಬಹುದಾಗಿದೆ.

loading...

LEAVE A REPLY

Please enter your comment!
Please enter your name here