ಶಿವ ಸಂಚಾರ ನಾಟಕ ತಂಡದ ನಾಟಕೋತ್ಸವ

0
43
loading...


ಡಂಬಳ(ಮುಂಡರಗಿ) : ಇದು ಬರೀ ನಾಟಕೋತ್ಸವಲ್ಲ ವೈಜಾರಿಕತೆ, ವಾಸ್ತವಿಕತೆ, ಪ್ರಗತಿಪರ ಚಿಂತನೆಗಳ ಸಕಾರತ್ಮಕ ಮೌಲ್ಯವರ್ಧಿತ ಬದುಕಿನ ಪ್ರತಿಬಿಂಬ.
ಹೌದು, ಇಂತಹದೊಂದು ಅಪರೂಪದ ನಾಟಕೋತ್ಸವನ್ನು ಡಂಬಳದ ಶ್ರೀನಿವಾಸ ವೆಂಕಟಾದ್ರಿ ಬಹದ್ದೂರ್ ದೇಸಾಯಿ ಸಾಂಸ್ಕøತಿಕ ವೇದಿಕೆ ಆಶ್ರಯದಲ್ಲಿ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶಿವ ಸಂಚಾರ ನಾಟಕ ತಂಡದ ನಾಟಕೋತ್ಸವ ಜನಮನ ಸೆಳೆಯಿತು.
ಈಗ ರೈತರ ಸರಣಿ ಆತ್ಮಹತ್ಯೆ ಸಂಕಷ್ಟ ಸಂದಿಗ್ಧತೆ ಆತಂಕ ತಂದಿರುವ ಶಕ್ತಿಗಳ ದರ್ಶನ ಉಂಟು ಮಾಡುವ ಧನ್ವಂತರಿ ಚಿಕಿತ್ಸೆ. ಆಧ್ಯಾತ್ಮ ಕಥಾ ಹಂದರಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಭಾತೃತ್ವ ಮತ್ತು ವೈಚಾರಿಕತೆ, ನೈತಿಕ ಮೌಲ್ಯಗಳ ಸಂದೇಶ ಸಾರುವ ಅಪರೂಪದ ಶರಣ ಸಂಸ್ಕøತಿಯ ತವನಿಧಿ ದಾಸಿಮಯ್ಯ. ಚಾತುವರ್ಣವನ್ನು ಭದ್ರಗೊಳಿಸಿದ ಧರ್ಮಗಳ ಜಿಜ್ಞಾಸೆಯನ್ನು ಕಿತ್ತು ಎಸೆಯಲು ಚಾಣಕ್ಯನ ರಾಜತಂತ್ರ ಸೂತ್ರವನ್ನು ಪ್ರಸ್ತುತಪಡಿಸಿತು.
ಹೀಗೇ ಹೊಸ ಆಯಾಮಗಳೊಂದಿಗೆ ಪ್ರೇಕ್ಷಕರನ್ನು ಗಮನ ಸೆಳೆದು ಬರೀ ನಕಾರತ್ಮಕ ಚಿಂತನೆಗಳತ್ತ ಚಿಂತೆ ಹರಿಸಿ, ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಕುತಂತ್ರಿ ವ್ಯವಸ್ಥೆ. ಸಾಧಿಸುವ ದಿಟ್ಟ ಛಲದಿಂದ ಸಾಮಾನ್ಯ ವ್ಯಕ್ತಿ ಚಕ್ರವರ್ತಿಯಾಗುವದು. ಕ್ರಾಂತಿಕಾರ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಹೋರಾಟ ಕಥಾ ವಸ್ತುಗಳು ನೋಡುಗರಲ್ಲಿ ಆತ್ಮವಿಶ್ವಾಸ, ಭರವಸೆಗಳಿಂದ ಸಾಧ್ಯವಾದನ್ನು ಸಾಧಿಸಬಹುದು ಎಂಬುದಕ್ಕೆ ತೋಂಟದ ಡಾ.ಸಿದ್ದಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 3 ದಿನಗಳ ಕಾಲ ಸಾಣ್ಣೇಹಳ್ಳಿಯ ಶಿವಸಂಚಾರ ನಾಟಕೋತ್ಸವ ತಂಡ ಸಾಕ್ಷಿಕರೀಸಿತು.
ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ ನಾಟಕೋತ್ಸವ ಅಧ್ಯಕ್ಷತೆವಹಿಸಿ ಮಾತನಾಡಿ, ನಾಟಕವು ನೈಜತೆ ಮತ್ತು ವಸ್ತು ಸ್ಥಿತಿಯನ್ನು ನೇರವಾಗಿ ಪ್ರೇಕ್ಷಕರಿಗೆ ತೋರಿಸುವ ಅಪರೂಪದ ಮಾಧ್ಯಮವಾಗಿದೆ. ನಾಟಕದಲ್ಲಿ ತತ್ವ, ಸಿದ್ದಾಂತ, ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಲು ಮುಂದಾಗಬೇಕು ಎಂದರು.
ನಾಟಕೋತ್ಸವ ಸಂಚಾಲಕ ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, ಆಧುನಿಕ ಭರಾಟೆ ಮತ್ತು ಪಾಶ್ಚಿಮಾತ್ಯ ಸಂಸ್ಕøತಿ ಮಾರು ಹೋಗಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆ, ಸಂಸ್ಕøತಿ, ಆಚರಣೆ, ಪರಂಪರೆ ಸಂರಕ್ಷಣೆ ದಿಸೆಯಲ್ಲಿ ಸಂಘ-ಸಂಸ್ಥೆ ಮತ್ತು ಸಾರ್ವಜನರಿಕ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಎಪಿಎಂಸಿ ಸದಸ್ಯ ಮರಿತಮ್ಮಪ್ಪ ಆದಮ್ಮನವರ, ಶಿಕ್ಷಕರಾದ ಸಿ.ಆರ್.ಹಿರೇಮಠ, ಎ.ಪಿ.ಮಾನೆ, ಮುಖಂಡರಾದ ವಿ.ಟಿ.ಮೇಟಿ, ಬಸವರಾಜ ಪೂಜಾರ, ಅಶೋಕ ಹಡಪದ, ಡಿ.ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಬಸಯ್ಯ ಹಿರೇಮಠ, ಮಂಜುನಾಥ ಸಂಜೀವಣ್ಣವರ, ಟಿ.ಬಿ.ಕರದಾನಿ, ಯಲ್ಲಪ್ಪ ಬಚನಹಳ್ಳಿ, ಚಂದ್ರಶೇಖರಪ್ಪ ಗಡಗಿ, ಕುಬೇರಪ್ಪ ಬಂಡಿ, ತಿಮ್ಮಣ್ಣ ಚಕ್ರಬೋವಿ, ಕುಬೇರಪ್ಪ ಕೊಳ್ಳಾರ, ಮಳ್ಳಪ್ಪ ಮಠದ, ಗವಿಸಿದ್ದಪ್ಪ ಬಿಸನಹಳ್ಳಿ, ಚಂದ್ರು ಯಳಮಲಿ, ಸಿದ್ದಣ್ಣ ನಂಜಪ್ಪನವರ, ಬಸವರಾಜ ಬೀಜವಾಡ, ಬಸವರಾಜ ಬೇವಿನಮರದ, ಎನ್.ಎಸ್.ಪಲ್ಲೇದ, ಶಿವಕುಮಾರ ಗುರುವಿನ, ರಂಗಪ್ಪ ಜೊಂಡಿ ಸೇರಿದಂತೆ ಮತ್ತಿತರು ಹಾಜರಿದ್ದರು. ಉಪನ್ಯಾಸಕ ಆರ್.ಜಿ.ಕೊರ್ಲಹಳ್ಳಿ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here